ನಿಯಮ ಪಾಲಿಸದಿದ್ದರೆ ಮತ್ತಷ್ಟು ಕಠಿಣ ಕ್ರಮ

0
14

ಬೆಂಗಳೂರು:- ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನ ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಹೀಗೆ ಮಾಡಿದರೆ 14 ದಿನದಲ್ಲಿ ಕೊರೋನಾ ಸೋಂಕಿನ ಚೈನ್ ಲಿಂಕ್ ಮುರಿಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅಭಿಪ್ರಾಯಪಟ್ಟರು. ವೈಜ್ಞಾನಿಕ ನೆಲಗಟ್ಟಿನಲ್ಲಿ ಅಧ್ಯಯನ ಮಾಡಿ ತಜ್ಞರು ನೀಡಿರುವ ಸಲಹೆ ಪ್ರಕಾರ ಸರ್ಕಾರ ಮಾರ್ಗಸೂಚಿಗಳನ್ನ ಹೊರತಂದಿದೆ. ಜನರು ಇವುಗಳನ್ನ ಗಂಭೀರವಾಗಿ ಪರಿಗಣಿಸಿ ಪಾಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಹೊಸ ಮಾರ್ಗಸೂಚಿಗಳನ್ನ ಕಟ್ಟುನಿಟ್ಟು ಪಾಲನೆ ಮಾಡುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಲಿದೆ. ಜನರು ಭಯ ಪಡುವ ಅಗತ್ಯ ಇಲ್ಲ. ಸೋಂಕಿತರಾದವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು, ಯಾರು ದಾಖಲಾಗಬಾರದು ಎಂದು ಇಂದು ಸಂಜೆ ವಿವರವಾಗಿ ಹೇಳುತ್ತೇನೆ ಎಂದು ಡಾ. ಸುಧಾಕರ್ ಹೇಳಿದರು.

loading...