ಬಿಮ್ಸ್ ವಿದ್ಯಾರ್ಥಿಗಳೊಂದಿಗೆ ಚಲ್ಲಾಟವಾಡಿದ ಸಿಬ್ಬಂದಿ

0
8

 

ಬಿಮ್ಸ್ ವಿದ್ಯಾರ್ಥಿಗಳೊಂದಿಗೆ ಚಲ್ಲಾಟವಾಡಿದ ಸಿಬ್ಬಂದಿ

ಬೆಳಗಾವಿ
ಬೆಳಗಾವಿ ಬಿಮ್ಸ್ ಕಾಲೇಜು ಆಡಳಿತ ಮಂಡಳಿಯ ಮಹಾ ಎಡವಟ್ಟಿನಿಂದ ಕೊರೊನಾ ಪಾಸಿಟಿವ್ ಬಂದ ವಿದ್ಯಾರ್ಥಿಗಳನ್ನ ಮನೆಗೆ ಕಳ್ಸಿದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿಯ ಬಿಮ್ಸ್ ಕಾಲೇಜಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಧೃಡ ಪಟ್ಟ ಹಿನ್ನೆಲೆಯಲ್ಲಿ , ಇಲ್ಲಿನ ವಸತಿ ನಿಲಯಗಳಲ್ಲಿದ್ದ ಹದಿನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಇದರೂ ಮನೆಗೆ ಹೋಗಿ ಕ್ವಾರೆಂಟೈನ್ ಆಗಿ ಅಂತಾ ವಸತಿ ನಿಲಯದಿಂದ ಹೊರ ದಬ್ಬಿದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪೋಷಕರು‌ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಏಪ್ರಿಲ್ 19ರಂದು ಐವತ್ತು ವಿದ್ಯಾರ್ಥಿಗಳ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ನಿನ್ನೆಯಷ್ಟೇ ಹದಿನಾಲ್ಕು ಮೆಡಿಕಲ್ ವಿದ್ಯಾರ್ಥಿಗಳಿಗೆ ಸೋಂಕಿರುವುದು ದೃಢಪಟ್ಟಿತ್ತು. ಬುಧವಾರ ಬೆಳಗ್ಗೆ ಮನೆಗಳಿಗೆ ತೆರಳಿದ ವಸತಿ ನಿಲಯಗಳಲ್ಲಿದ್ದ ವಿದ್ಯಾರ್ಥಿಗಳಿಗೆ ಹೋಮ್ ಕ್ವಾರೆಂಟೈನ್ ಆಗುವಂತೆ ತರಾತುರಿಯಲ್ಲಿ ವಿದ್ಯಾರ್ಥಿಗಳನ್ನ ಹೊರ ಹಾಕಿದ್ದರಾ ಕಾಲೇಜು ಆಡಳಿತ ಮಂಡಳಿ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಬಸ್, ಕಾರುಗಳ ಮೂಲಕ ಊರಿಗೆ ತೆರಳಿದ ವಿದ್ಯಾರ್ಥಿಗಳು.
ವಸತಿ ನಿಲಯಗಳಲ್ಲಿದ್ದ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶುರುವಾಯಿತು ಕೊರೊನಾಂತಕ. ಇತ್ತ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ, ಪ್ರಯಾಣದಲ್ಲಿ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕೊರೊನಾ ಹರಡುವ ಭೀತಿ ಪ್ರಾರಂಭವಾಗಿದೆ.

loading...