ಡಿಕೆಶಿ-ಜಾರಕಿಹೊಳಿ ಭೇಟಿ:ಬೆಳಗಾವಿಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ

0
29

ಬೆಂಗಳೂರು:- ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯಲ್ಲಿ ಗೆಲುವು ತಮ್ಮದಾಗಲಿದೆ ಎಂದು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ, ಉಪಚುನಾವಣೆ ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಅವರೊಂದಿಗೆ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ, ಕ್ಷೇತ್ರದ ಕುರಿತು ಚರ್ಚಿಸಿದ್ದೇನೆ.ಚುನಾವಣೆಯಲ್ಲಿ ಪಕ್ಷ ಗೆಲ್ಲುವ ನಿರೀಕ್ಷೆಯಿದೆ ಎಂದರು.

ಕೋವಿಡ್ ಎರಡನೇ ಅಲೆ ಪಸರಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸರ್ಕಾರದಲ್ಲಿ ಮೊದಲಿನಿಂದಲೂ ಗೊಂದಲವಿದೆ.ಲಾಕ್ ಡೌನ್ ವಿಚಾರದಲ್ಲಿ ಗೊಂದಲ ಈಗಲೂ ಇದೆ.ಸಿಎಂ ಒಂದು ಹೇಳಿದರೆ ಮಂತ್ರಿಗಳೇ ಮತ್ತೊಂದು ಹೇಳುತ್ತಾರೆ.ರಾಜ್ಯದ ವಿಷಯಕ್ಕೆ ಈಗ ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿದ್ದಾರೆ.ರಾಜ್ಯಪಾಲರು ಸರ್ವಪಕ್ಷ ಸಭೆ ಕರೆಯುವ ಬದಲು ರಾಜ್ಯಸರ್ಕಾರಕ್ಕೆ ಸೂಚನೆ ಕೊಡಬಹುದಿತ್ತು.ಸರ್ಕಾರಕ್ಕೆ ಕೋವಿಡ್ ಬಗ್ಗೆ ಸಮರ್ಪಕ ನಿರ್ಧಾರವಾಗಲೀ ಪಕ್ಕಾ ನಿರ್ಣಯವಾಗಲೀ.ಹೀಗಾಗಿ ತಜ್ಞರ ಸಲಹೆ ಪಡೆಯಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೊರೊನ ನಿಯಂತ್ರಣ ಆಗುವ ವರೆಗೂ ಮುಂದೂಡಿಕೆ ಮಾಡಬೇಕು ಎಂದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರದ ವೈಪಲ್ಯಗಳನ್ನು ನಿನ್ನೆ ರಾಜ್ಯಪಾಲರ ಮುಂದೆ ಹೇಳಿದ್ದೇನೆ. ಸರ್ಕಾರ ವಿಫಲವಾಗಿರುವದಕ್ಕೆ ಕರೋನಾ ನಂಬರ್ ಗಳೇ ಸಾಕ್ಷಿ.ಖರ್ಗೆ ಅವರು ಹೇಳಿದ ಹಾಗೆ ಪ್ರಧಾನಿ ಪ್ರವಚನ‌ ಮಾಡಿದ್ದಾರೆ.ಪ್ರಧಾನಿ ಮಾಡಿದ್ದು ಭಾಷಣವಲ್ಲ ಅದು ಪ್ರವಚನ.ಇದು ಗವರ್ನರ್ ರೂಲ್ ಎಂದು ನಮ್ಮ ವಿಪಕ್ಷ ನಾಯಕರು ಹೇಳಿದ್ದಾರೆಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ.ಕೋವಿಡ್ ವಿಚಾರದಲ್ಲಿ ನಾವು ರಾಜಕಾರಣ ಮಾಡಬಾರದು ಎಂದು ಸುಮ್ಮನೆ ಇದ್ದೇವೆ . ಹಾಸಿಗೆ ಆಕ್ಸಿಜನ್ ಕೊರತೆ ಸಾಕಷ್ಟು ಇದ್ದು, ಜನರಿಗೆ ಸ್ಪಂದಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಒಬ್ಬ‌ ಸಚಿವರೂ ಜಿಲ್ಲೆಗಳಿಗೆ ಹೋಗಿ ಕೋವಿಡ್ ಬಗ್ಗೆ ಸಭೆ ಮಾಡಿಲ್ಲ.ಆಸ್ಪತ್ರೆಗೆ ಹೋಗಿ ಜನರ ಸಮಸ್ಯೆ ಕೇಳಿಲ್ಲ.ಅಗತ್ಯ ಸೇವೆಯ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಬಿಟ್ಟು ಬೇರೆ ಇಲಾಖೆ ಅಧಿಕಾರಿಗಳನ್ನು ಕೋವಿಡ್ ನಿರ್ವಹಣೆ ಬಳಕೆ‌ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಡಿಕೆಶಿ ಸಲಹೆ ನೀಡಿದರು.

ರಾಜ್ಯ ಸರ್ಕಾರಕ್ಕೆ ಲಾಕ್ಡೌನ್ ಮಾಡುವ ಯೋಚನೆ ಇತ್ತು.ಆದರೆ ಪ್ರಧಾನಿ ಕೊಟ್ಟ ಸಲಹೆಯಂತೆ ಅವರು ಲಾಕ್ಡೌನ್ ಮಾಡಿಲ್ಲ.ತಜ್ಞರ ಅಭಿಪ್ರಾಯದಂತೆ ಸರ್ಕಾರ ನಡೆದುಕೊಳ್ಳಬೇಕು ಎಂಬುದು ನಮ್ಮ ಸಲಹೆ ಆಗಿತ್ತು.ಸರ್ಕಾರ ಜಾರಿಗೆ ತಂದಿರುವ ಮಾರ್ಗ ಸೂಚಿಗಳನ್ನು ಜನರು ಪಾಲನೆ ಮಾಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.

loading...