ಇಂದು ಆರ್‌ಸಿಬಿಗೆ ರಾಜಸ್ಥಾನ ಸವಾಲು

0
11

ಮುಂಬೈ: ಐಪಿಎಲ್​​-2021ರ ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವು ಸಾಧಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ ರಾಯಲ್ಸ್​ ತಂಡವನ್ನು ಎದುರಿಸಲಿದೆ.ಇಲ್ಲಿಯವರೆಗೆ ಚೆನ್ನೈನಲ್ಲಿ ಆಡಿದ್ದ ಆರ್​ಸಿಬಿ ಇಂದಿನ ಪಂದ್ಯವನ್ನು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡಲಿದೆ. ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಆರಂಭಿಕ ಹಾಗೂ ಅಗ್ರ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​​ಗಿಳಿಯುವ ಮ್ಯಾಕ್ಸ್​ವೆಲ್​ ಹಾಗೂ ಎಬಿ ಡಿ ವಿಲಿಯರ್ಸ್​ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್​ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್​ನಲ್ಲಿ ಸ್ಪಿನ್ನರ್​ ಚಹಲ್​ ಕೈಚಳಕ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸಿರಾಜ್​ ಕರಾರುವಾಕ್​ ದಾಳಿ ನಡೆಸಿದ್ದರೆ, ಹರ್ಷಲ್​ ಪಟೇಲ್​ ಅವರ ಉತ್ತಮ ಪ್ರದರ್ಶನ ತಂಡಕ್ಕೆ ಹೆಚ್ಚಿನ ಬಲ ತುಂಬಿದೆ.

loading...