ಬೆಳಗಾವಿಯಲ್ಲಿ ಏಕಾಏಕಿ ಲಾಕ್ ಡೌನ್

0
6

ಬೆಳಗಾವಿ
ಕೋವಿಡ್-19 ಎರಡನೇ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ 144 ಸೆಕ್ಷನ್ ಜಾರಿ ಮಾಡಿದ್ದರೂ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏಕಾಏಕಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಜನರನ್ನು ಚದುರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಇತ್ತೀಚೆಗೆ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆಯಲ್ಲಿ ಅಗತ್ಯ ಎನ್ನಿಸಿದರೆ ಮಾತ್ರ ಲಾಕ್ ಡೌನ್ ಮಾಡಿ ಇಲ್ಲದಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ ಸರಕಾರ ಲಾಕ್ ಡೌನ್ ಮಾಡುವ ಬದಲ ನೈಟ್ ಕಪ್ರ್ಯೂ ಹಾಗೂ ವಿಕೇಂಡ್ ಲಾಕ್ ಡೌನ್ ಘೋ಼ಷಣೆ ಮಾಡಿತ್ತು. ಆದರೆ ಇಂದು ಏಕಾಏಕಿ ಲಾಕ್ ಡೌನ್ ಮಾದರಿಯಲ್ಲಿ ಪೊಲೀಸ್ ರು ಬೆಳಗಾವಿಯಲ್ಲಿ ಅಗತ್ಯ ವಸ್ತುಗಳ ಮಾರಾಟ ಬಿಟ್ಟು ಉಳಿದ ಎಲ್ಲವನ್ಯ ಬಂದ ಮಾಡಿಸಿರುವುದು ಇದು ಲಾಕ್ ಡೌನ್ ಮಾದರಿಯಲ್ಲಿಯೇ ಇದೆ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ‌.

loading...