14 ದಿನ ಕರ್ನಾಟಕ ಲಾಕ್‌ಡೌನ್ : ಸಿಎಂ ಯಡಿಯೂರಪ್ಪ

0
97

ಬೆಂಗಳೂರು
ಕೋವಿಡ್-19 ಎರಡನೇ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಾಳೆಯಿಂದ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್‌ಡೌನ್ ಆಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಸೋಮವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವ ಸಂಪುಟದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಸಚಿವ ಸಂಪುಟದ ಸಭೆಯ ಬಳಿಕ ಕೋವಿಡ್-19 ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟçವನ್ನು ಮೀರಿಸಿ ಬೆಂಗಳೂರು ಸುತ್ತಮುತ್ತ ಕೊವೀಡ್ ಸೋಂಕು ಹೆಚ್ಚಾಗುತ್ತಿದೆ. ಆದ್ದರಿಂದ ಸಚಿವ ಸಂಪುಟದ ಸಹೋದ್ಯೋಗಿಗಳು, ತಜ್ಞರೊಂದಿಗೆ ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿದ್ದೇವೆ,
ಸರಕಾರಿ ಆಸ್ಪತ್ರೆಯಲ್ಲಿ 18 ರಿಂದ 45 ವರ್ಷದ ಜನರಿಗೆ ವ್ಯಾಕ್ಸಿನೇಷನ್ ಉಚಿತವಾಗಿ ಪೂರೈಕೆ ಮಾಡಲಾಗುವುದು. ಈ ಬಗ್ಗೆ ಆರೋಗ್ಯ ಇಲಾಖೆ ನಿರ್ಧಾರ ಮಾಡುತ್ತದೆ. ಕೋವಿಡ್ ಸೋಂಕು ತಡೆಯಲು ನಾಳೆ ರಾತ್ರಿಯಿಂದ 14 ದಿನ ಬೀಗಿ ಕ್ರಮ ಜಾರಿಯಲ್ಲಿರುತ್ತದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ.
ಬೆಳಗ್ಗೆ 6 ರಿಂದ 10 ಗಂಟೆಗೆ ವರೆಗೆ ಅಗತ್ಯ ವಸ್ತು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಬಂದು ಬಂದ್ ಮಾಡಿಸುವ ಮುನ್ನವೆ ವ್ಯಾಪಾರಸ್ತರು ಸಹಕಾರ ಕೊಡಬೇಕು. ಗಾರ್ಮೆಂಟ್ ನೌಕರರಿಗೆ ರಿಯಾಯಿತಿ ಇದೆ. ಕೃಷಿ ಚಟುವಟಿಕೆಗಳಿಗೆ ಅವಕಾಶ ಇದೆ. ಔಷಧಿಗಳನ್ನು ಪೂರೈಸಲಾಗುವುದು. ಎಲ್ಲ ಜಿಲ್ಲಾಧಿಕಾರಿಗಳು ಸೂಕ್ತ ಬಂದೋಬಸ್ತ ಮಾಡಬೇಕೆಂದರು.
ಕೋವಿಡ್-19 ಎರಡನೇ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ತಜ್ಞರ ಸಲಹೆ ಮೆರೆಗೆ ಬುಧವಾರದಿಂದ ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್‌ಡೌನ್ ಮಾಡಿ ಘೋಷಣೆ ಮಾಡಲಾಗಿದೆ. ನಾಳೆಯವರೆಗೂ ಈಗೀರುವ ಕರ್ಫ್ಯೂ ಮುಂದುವರೆಯುತ್ತದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ ಮಾಡಬೇಕು. ರಾಜ್ಯದ ಆಯಾ ತಾಲೂಕಾ ಅಧಿಕಾರಿಗಳು, ನೂಡೇಲ್ ಅಧಿಕಾರಿಗಳು ಕೊರೋನಾ ಕಂಟ್ರೋಲ್ ಮಾಡಲು ಶ್ರಮಿಸಬೇಕು ಎಂದರು.
ಆಕ್ಸಿಜನ್ ಕೊರತೆ ರಾಜ್ಯದಲ್ಲಿ ಇಲ್ಲ. ಇದಕ್ಕೆ ಕೇಂದ್ರ ಅನುಮತಿ ನೀಡಿದೆ. ರೆಮಿಡಿಯನ್ ಔಷಧಿಯೂ ಸಮಸ್ಯೆ ಇರುವುದಿಲ್ಲ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ನಾಲ್ಕು ಗಂಟೆ ಮಾರಾಟ ಮಾಡಬಹುದು. ಈ 14 ದಿನದ ಬಿಗಿ ಕ್ರಮಕ್ಕೆ ಎಲ್ಲರೂ ಸಹಕಾರ ಕೊಡಬೇಕು. ಎರಡು ವಾರದಲ್ಲಿ ಕಂಟ್ರೋಲ್ ಬರದಿದ್ದರೇ ಮತ್ತೇ ಲಾಕ್ ಡೌನ್ ಮುಂದುವರೆಯುತ್ತದೆ ಎಂದರು.

 

loading...