ರಾಜ್ಯಾದ್ಯಂತ ನಾಳೆಯಿಂದ 14 ದಿನ ಲಾಕ್ಡೌನ

0
15

ಬೆಂಗಳೂರು: ರಾಜ್ಯ ಕೊರೋನಾ 2ನೇ ಅಲೆ ಭೀಕರತೆಗೆ ಕಡಿವಾಣ ಹಾಕಲು ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವೀಕೆಂಡ್​​ ಕರ್ಫ್ಯೂ ಯಶಸ್ಸಿನ ಬೆನ್ನಲ್ಲೇ ನಾಳೆ ಸಂಜೆಯಿಂದ 14 ದಿನಗಳ ಕಾಲ ಲಾಕ್​ಡೌನ್​ ಹೇರಲು ಸರ್ಕಾರ ನಿರ್ಧರಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿ.ಎಸ್​.ಯಡಿಯೂರಪ್ಪ 14 ದಿನಗಳ ಕಾಲ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. 2 ವಾರಗಳ ಕಾಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು. 2 ವಾರದಲ್ಲಿ ಕೊರೋನಾ ಕಂಟ್ರೋಲ್​ಗೆ ಬರದಿದ್ದರೆ ಮತ್ತೆ ಲಾಕ್​ಡೌನ್​ ಮುಂದುವರೆಯುವ ಸುಳಿವನ್ನು ಕೊಟ್ಟರು.

loading...