ದೇಶದಲ್ಲಿ ಪ್ರತಿ ನಿಮಿಷಕ್ಕೆ 243 ಸೋಂಕಿತರು ಪತ್ತೆ

0
14

ನವದೆಹಲಿ: ಭಾರತದಲ್ಲಿ ಕೋವಿಡ್​ ಪಾಸಿಟಿವ್​ ಪ್ರಮಾಣ​ ಶೇ.16 ರಷ್ಟು ಹೆಚ್ಚಳವಾಗಿದ್ದು, ಪ್ರತಿ ನಿಮಿಷಕ್ಕೆ 243 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ಕರ್ಫ್ಯೂ, ಲಾಕ್​ಡೌನ್​ಗಳ ಹೇರಿಕೆ ನಡುವೆಯೂ ಭಾನುವಾರ 3,52,991 ಪ್ರಕರಣಗಳು ಹಾಗೂ ಈವರೆಗೆ ಅತೀ ಹೆಚ್ಚು 2812 ಸಾವು ವರದಿಯಾಗಿದೆ.ದೇಶದಲ್ಲೀಗ ಕೋವಿಡ್​ ಮೃತರ ಸಂಖ್ಯೆ 1,95,123ಕ್ಕೆ ಹಾಗೂ ಸೋಂಕಿತರ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 1,43,04,382 ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ 28,13,658ಕ್ಕೆ ಹೆಚ್ಚಳವಾಗಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ 10 ರಾಜ್ಯಗಳಲ್ಲಿ ಶೇ.70 ರಷ್ಟು ಹೊಸ ಕೇಸ್​ಗಳು ಪತ್ತೆಯಾಗುತ್ತಿದೆ.

loading...