ಅಕ್ಕಿ ಕೇಳಿದ್ದಕ್ಕೆ ಸತ್ತು ಹೋಗು ಎಂದು ಸಚಿವ ಕತ್ತಿ

0
32

ಬೆಳಗಾವಿ
ಪಡಿತರ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ ವ್ಯಕ್ತಿಯೊರ್ವನಿಗೆ ಸಚಿವ ಉಮೇಶ ಕತ್ತಿ ಉಡಾಫೆ ಉತ್ತರ ನೀಡುವುದರ ಮೂಲಕ ಸತ್ತುಹೋಗು ಎಂದು ಹೇಳಿರುವುದು ರಾಜ್ಯದಲ್ಲಿ ತೀವ್ರ ವ್ಯಾಪಕವಾಗಿ ಖಂಡನೆ ವ್ಯಕ್ತವಾಗುತ್ತಿದೆ.
ಪಡಿತರ ಚೀಟಿಯ ಅಕ್ಕಿಯನ್ನು ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ ವ್ಯಕ್ತಿಯೋರ್ವನಿಗೆ ಸಚಿವ ಕತ್ತಿ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡುತ್ತೇವೆ. ಲಾಕ್ ಡೌನ್ ಸಂದರ್ಭದಲ್ಲಿ 5 ಕೆ.ಜಿ.ಅಕ್ಕಿ ಕೇಂದ್ರ ಸರಕಾರ ಕೊಡುತ್ತದೆ. ಮುಂದಿನ ತಿಂಗಳಿನಿAದ ಅಕ್ಕಿ ಕೊಡಲಾಗುವುದು ಎಂದು ಹೇಳಿದರು.
ಲಾಕ್‌ಡೌನ್ ಇದೆ. ಅಲ್ಲಿಯವರೆಗೆ ನಾವು ಉಪವಾಸ ಸಾಯೋದಾ ಎಂದು ವ್ಯಕ್ತಿ ಪ್ರಶ್ನಿಸಿದ್ದಕ್ಕೆ ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡುವ ದಂಧೆಯನ್ನು ನಿಲ್ಲಿಸಿದ ಎಂದು ಫೋನ್ ಕರೆ ಕಟ್ ಮಾಡಿದರು.

 

loading...