ಭಾರತದಿಂದ ವಾಪಸ್ ಬನ್ನಿ: ಅಮೆರಿಕಾ

0
27

ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಶೀಘ್ರವೇ ವಾಪಸ್ಸಾಗುವಂತೆ ಸೂಚನೆ ನೀಡಿದೆ.
4 ನೇ ಲೆವೆಲ್ ಪ್ರಯಾಣ ಸಲಹೆಗಳನ್ನು ಪ್ರಕಟಿಸಿದ್ದು, ಭಾರತಕ್ಕೆ ಪ್ರಯಾಣ ಮಾಡದಂತೆ ಹಾಗೂ ಈಗಾಗಲೇ ಭಾರತದಲ್ಲಿರುವವರು ಶೀಘ್ರವೇ ವಾಪಸ್ಸಾಗುವಂತೆ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಭಾರತ ಹಾಗೂ ಅಮೆರಿಕಾದ ನಡುವೆ 14 ನೇರ ವಿಮಾನಗಳಿದ್ದು, ಯೂರೋಪ್ ಮೂಲಕವೂ ಅಮೆರಿಕಾಗೆ ಸಂಪರ್ಕ ಕಲ್ಪಿಸುವ ವಿಮಾನಗಳಿವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಸಹ ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು. ಈಗಾಗಲೇ ಭಾರತದಿಂದ ಆಗಮಿಸಿರುವ ಬ್ರಿಟೀಷ್ ಹಾಗೂ ಐರಿಷ್ ಪ್ರಜೆಗಳಿಗೆ ಹೊಟೇಲ್ ಗಳಲ್ಲಿ ಕ್ವಾರಂಟೈನ್ ನಲ್ಲಿರುವುದಕ್ಕೆ ಸೂಚನೆ ನೀಡಲಾಗಿದೆ.

loading...