ಸಚಿವೆ ಜೊಲ್ಲೆ ತವರಲ್ಲೆ ಮಕ್ಕಳಿಗೆ ಅಪೌಷ್ಠಿಕ ಆಹಾರ ಪೂರೈಕೆ

0
23

ಬೆಳಗಾವಿ
ಕೊರೋನಾ ಎರಡನೇ ಅಲೆಯ ಭೀತಿಯಿಂದ ರಾಜ್ಯ ಸರಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದೆ. ಇದರ ನಡುವೆ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಪದಾರ್ಧಗಳು ಹುಳ ಹಿಡಿದು ಹೋಗಿದ್ದರೂ ಅಧಿಕಾರಿಗಳು ಅದನ್ನೆ ಮಕ್ಕಳಿಗೆ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಕ್ಕಳಿಗೆ ಸದೃಢ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೂರಾರು ಕೋಟಿ ರು.ಗಳನ್ನು ವೆಚ್ಚ ಮಾಡುತ್ತಿದೆ. ೬ ತಿಂಗಳಿನಿAದ ೬ ವರ್ಷದ ಮಕ್ಕಳಿಗೆ ಪೌಷ್ಠಿಕ ಆಹಾರ ಹಾಗೂ ಗರ್ಭೀಣಿಯರಿಗೆ ಸುಸಜ್ಜಿತ ಆರೋಗ್ಯದಿಂದ ಇರಲು ಸರಕಾರ ಸಾಕಷ್ಟು ಪ್ರಯತ್ನ ನಡೆಸಿದೆ.
ಆದರೆ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಪ್ರಯೋಜಿಸಲ್ಪಟ್ಟ ಸಂಸ್ಥೆಯೊAದು ಬೆಳಗಾವಿ ನಗರ ೩೭೬ ಅಂಗನವಾಡಿ ಕೇಂದ್ರಗಳಿವೆ. ಬೆಳಗಾವಿ ಗ್ರಾಮೀಣದಲ್ಲಿ ೬೬೦ ಅಂಗನವಾಡಿ ಕೇಂದ್ರಗಳಿವೆ. ಬೆಳಗಾವಿ ನಗರದಲ್ಲಿ ೩೬೦೦ ಜನ ಬಾಣಂತಿಯರಿದ್ದಾರೆ. ಅವರು ಅಂಗನವಾಡಿಯಿAದ ಪೌಷ್ಠಿಕ ಆಹಾರ ಪಡೆಯುತ್ತಾರೆ. ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡಿರುವುದರಿಂದ ಅಂಗನವಾಡಿಯವರು ಮನೆ ಮನೆಗೆ ತೆರಳಿ ಪೌಷ್ಠಿಕ ಆಹಾರ ನೀಡುತ್ತಾರೆ. ಅದು ಕಳಪೆ ಗುಣಮಟ್ಟದಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ನೀಡಬೇಕಿದ್ದ ಅಧಿಕಾರಿಗಳು ಕೆಲ ಸಂಸ್ಥೆಗಳೊAದಿಗೆ ಕೈ ಜೋಡಿಸಿಕೊಂಡು ಕಳಪೆ ಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಗುಣಮಟ್ಟ ಪರೀಲನೆ ನಡೆಸಬೇಕಿದ್ದ ಅಧಿಕಾರಿಗಳು ಸವಿತಾ ಹಟ್ಟಿಹೊಳಿ ಎಂಬ ಮಹಿಳಾ ಅಧಿಕಾರಿಗಳು ಸೇರಿದಂತೆ ಎಲ್ಲ ನಿಯೋಜಿತ ಸಂಸ್ಥೆಗಳು ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರವನ್ನು ಕಳಪೆ ನೀಡುತ್ತಿದ್ದಾರೆ. ಇವರಿಗೆ ಹೇಳುವವರಿಲ್ಲ. ಕೇಳುವವರಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಶಶಿಕಲಾ ಜೊಲ್ಲೆ ಅವರು ಕೂಡಲೇ ಇಂಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

loading...