ಅಗತ್ಯವಿಲ್ಲ… ವಿಶ್ವಸಂಸ್ಥೆ ಸಹಾಯ ನಿರಾಕರಿಸಿದ ಭಾರತ

0
53

ನವದೆಹಲಿ:- ಕೊರೊನಾ ವಿರುದ್ಧ ಹೋರಾಟದ ಭಾಗವಾಗಿ ನೆರವು ಕಲ್ಪಿಸಲು ವಿಶ್ವಸಂಸ್ಥೆ ಮುಂದಾಗಿದ್ದರೂ, ಭಾರತ ಅದನ್ನು ಸ್ವೀಕರಿಸಲು ನಿರಾಕರಿಸಿದೆ.
ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿ ಎದುರಿಸಲು ಬಲಿಷ್ಟ ವ್ಯವಸ್ಥೆ ಹೊಂದಿರುವುದಾಗಿ ಎಂದು ಭಾರತ ಹೇಳಿದೆ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.
ಅಗತ್ಯವಿದ್ದರೆ ವಿಶ್ವಸಂಸ್ಥೆಯ ಸಮಗ್ರ ಪೂರೈಕೆ ಸರಪಳಿಯ ಮೂಲಕ ಸಹಾಯ ಕಲ್ಪಿಸಲಾಗುವುದು ಎಂದು ಭಾರತಕ್ಕೆ ಹೇಳಿದ್ದೇವೆ. ಆದರೆ, ಪ್ರಸ್ತುತ ಅದರ ಅಗತ್ಯ ನಮಗಿಲ್ಲ. ಭಾರತದಲ್ಲಿಯೇ ಪರಿಸ್ಥಿತಿ ನಿಭಾಯಿಸಲು ಸೂಕ್ತ ವ್ಯವಸ್ಥೆ ಹೊಂದಿದೆ ಎಂದು ಉತ್ತರಿಸಿದೆ. ಆದರೆ ಸಹಾಯ ನೀಡುವ ಭರವಸೆ ಮುಂದುವರಿದಿದೆ ” ಸಾಧ್ಯವಾದ ಸಹಾಯ ನಾವು ಮಾಡುತ್ತೇವೆ” ಎಂದು ಹಕ್ ಹೇಳಿದ್ದಾರೆ.
ವಿಶ್ವಸಂಸ್ಥೆಯಿಂದ ಭಾರತಕ್ಕೆ ಯಾವುದಾದರೂ ತುರ್ತು ಸೇವೆಗಳು ಆಗಮಿಸುತ್ತಿವೆಯೇ ಎಂಬ ಪ್ರಶ್ನೆಗೆ ಈವರೆಗೆ ಅವರು ( ಭಾರತ) ಏನನ್ನೂ ಕೇಳಿಲ್ಲ. ಆದರೆ ನಮ್ಮ ಅಧಿಕಾರಿಗಳು ಸಹಾಯ ಮಾಡಲು ಸಿದ್ಧವಾಗಿದ್ದಾರೆ. ” ಭಾರತದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಹಕ್ ಹೇಳಿದರು. ಈಗಾಗಲೇ ತೀವ್ರ ಒತ್ತಡದಲ್ಲಿರುವ ಭಾರತೀಯ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳು ಹಾಗೂ ಧಾರ್ಮಿಕ ಉತ್ಸವಗಳ ಕಾರಣದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆಯೇ ಎಂದು ಕೇಳಿದಾಗ, ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ ಎಂದು ಉತ್ತರಿಸಿದ್ದಾರೆ. ಪ್ರತಿ ದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಶ್ವಸಂಸ್ಥೆ ನಿರಂತರವಾಗಿ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದರು. ಇಡೀ ಜಗತ್ತು ಕೋವಿಡ್‌ ಜಯಿಸಿದರೆ ಮಾತ್ರ ಯಾವುದೇ ದೇಶ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ ಎಂದು ಹಕ್ ಸ್ಪಷ್ಟಪಡಿಸಿದ್ದಾರೆ.

loading...