ಮೇ 1 ರಿಂದ 18-44 ವಯಸಿನವರಿಗೆ ಸದ್ಯಕ್ಕೆ ಕೋವಿಡ್ ಲಸಿಕೆ ಇಲ್ಲ:ಸುಧಾಕರ್

0
20

ಬೆಂಗಳೂರು:-ಮೇ.1 ರಿಂದ 18 ವರ್ಷದಿಂದ 44 ವರ್ಷದವರೆಗೆ ಸದ್ಯಕ್ಕೆ ಲಸಿಕೆ ನೀಡಲಾಗುವುದಿಲ್ಲ.ಮೇ.1 ರಿಂದ ಆರಂಭವಾಗಬೇಕಿದ್ದ ಲಸಿಕೆ ನಮಗೆ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ.ಅಧಿಕೃತ ಮಾಹಿತಿ ಬಂದ ನಂತ್ರ ಲಸಿಕೆ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮೇ 1 ರಂದು 18 ವರ್ಷದಿಂದ 44 ವರ್ಷವರೆಗೆ ಲಸಿಕೆ ತೆಗೆದುಕೊಳ್ಳಲು ಅರ್ಹರೆಂದು ಸದ್ಯಕ್ಕೆ ಕೆಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆಯಾಗಿದೆ.ಅದರ ಆಧಾರದ ಮೇಲೆ 3 ರಿಂದ 3.5 ಕೋಟಿ ಜನ ಕರ್ನಾಟಕ ದಲ್ಲಿ ಲಸಿಕೆ ಪಡೆಯಲು ಅರ್ಹರಿದ್ದಾರೆ ಎಂದು ಅಂದಾಜು ಮಾಡಲಾಗಿದೆ.ಮೇ.1 ರಂದು ಲಸಿಕೆ ಸಿಗುವುದಿಲ್ಲ.ಫೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡವರು ಸರ್ಕಾರದ ಮುಂದಿನ ಆದೇಶದ ವರೆಗೆ ಯಾವುದೇ ಆಸ್ಪತ್ರೆಯ ಮುಂದೆ ಹೋಗಬೇಡಿ.ಆದೇಶ ಬಂದ ಬಳಿಕ 18 ರಿಂದ 44 ವರ್ಷದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತೇವೆ.ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತೇವೆ.ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

loading...