ಬಸವಕಲ್ಯಾಣ ಉಪಚುನಾವಣೆ : ಬಿಜೆಪಿಗೆ ಗೆಲುವಿನ ಸಿಹಿ

0
36

ಬೀದರ್ :- ಬಸವಕಲ್ಯಾಣ ವಿದಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಗೆಲುವು ದಾಖಲಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಬಸವಕಲ್ಯಾಣದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದ್ದರೇ, ಕಾಂಗ್ರೆಸ್ ಸೋಲು ಕಂಡಿದೆ. ಬಿಜೆಪಿಯ ಅಭ್ಯರ್ಥಿ ಶರಣು ಸಲಗರ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ವಿರುದ್ಧ 20,448 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅಂದಹಾಗೇ ಬಿಜೆಪಿಯ ಅಭ್ಯರ್ಥಿ ಶರಣು ಸಲಗರ 70,556 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ನ ಮಾಲಾ ಬಿ ನಾರಾಯಣರಾವ್ ಅವರು, 50,108 ಮತ ಪಡೆದಿದ್ದಾರೆ. ಈ ಮೂಲಕ 20,448 ಅಂತರಗಳಿಂದ ಬಿಜೆಪಿಯ ಅಭ್ಯರ್ಥಿ ಶರಣು ಸಲಗರ ಗೆಲುವು ಸಾಧಿಸಿದ್ದಾರೆ.

loading...