ಹ್ಯಾಟ್ರಿಕ್‌ ಸಾಧನೆಯತ್ತ ದೀದಿ ಸರ್ಕಾರ ತಗ್ಗಲಿರುವ ಮೆಜಾರಿಟಿ ?

0
12

ಕೋಲ್ಕತಾ:- ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣ ಮೂಲ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ದಿಶೆಯಲ್ಲಿ ಮುನ್ನುಗ್ಗುತ್ತಿದೆ.
ಟಿಎಂಸಿ ಸ್ಪಷ್ಟ ಬಹುಮತ ಸಂಖ್ಯೆ ಮ್ಯಾಜಿಕ್ ಫಿಗರ್ ಅಂಕಿ ದಾಟಿರುವ ತೃಣಮೂಲ ಕಾಂಗ್ರೆಸ್ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. 77 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್-ಎಡ ಪಕ್ಷಗಳ ಮೈತ್ರಿ ಹಿನ್ನಡೆ ಕಂಡಿದೆ.
ಆದರೆ, ನಂದಿಗ್ರಾಮ್‌ ಕ್ಷೇತ್ರದಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ, ಮಮತಾ ಬ್ಯಾನರ್ಜಿ ಅವರಿಗಿಂತ 4,500 ಮತಗಳ ಮುನ್ನಡೆ ಸಾಧಿಸಿದ್ದಾರೆ. 2011 ರಲ್ಲಿ 184 ಕ್ಷೇತ್ರಗಳಲ್ಲಿ ಗೆದ್ದಿದ್ದ ಟಿಎಂಸಿ, 2016 ರ ವಿಧಾನಸಭಾ ಚುನಾವಣೆಯಲ್ಲಿ 211 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿತ್ತು. ಆದರೆ, ಈ ಭಾರಿ ಟಿಎಂಸಿ ಸ್ಪಷ್ಟ ಬಹುಮತಪಡೆದರೂ ಕಳೆದ ಬಾರಿಯಷ್ಟು ಬಹುಮತ ಲಭಿಸುವುದು ಕಷ್ಟ ಎಂದು ಅಂದಾಜಿಸಲಾಗುತ್ತಿದೆ.

ಟಿಎಂಸಿ ಗೆಲುವು, ಮತಾಗೆ ಅಭಿನಂದನೆಗಳ ಸುರಿಮಳೆ..!!

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಮುನ್ನಡೆ ಸಾಧಿಸಿರುವುದಕ್ಕಾಗಿ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅವರಿಗೆ ರಾಜಕೀಯ ನಾಯಕರಿಂದ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.
ಬಂಗಾಳದ ಮತ ಎಣಿಕೆ ಇನ್ನೇನು ಪೂರ್ಣಗೊಳ್ಳುತ್ತಿರುವ ಈ ಹೊತ್ತಲ್ಲಿ, ಟಿಎಂಸಿ 200 ಕ್ಕೂ ಅಧಿಕ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿರುವುದರಿಂದ ಅಧಿಕಾರಕ್ಕೇರುವುದು ಖಚಿತವಾದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಕೇಂದ್ರ ಸಚಿವರು, ರಾಜಕೀಯ ಧುರೀಣರು ಟ್ವೀಟ್ ಮಾಡಿ, ಮಮತಾ ಬ್ಯಾನರ್ಜಿ ಅವರಿಗೆ ಶುಭ ಕೋರಿದ್ದಾರೆ.

loading...