14 ನೇ ಆವೃತ್ತಿಯ ಐಪಿಎಲ್ ಸದ್ಯಕ್ಕೆ ರದ್ದು

0
12

ನವದೆಹಲಿ: ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಅನ್ನು ರದ್ದು ಮಾಡಿದೆ.ದೆಹಲಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಕ್ಕೆ ಮುಂಚಿತವಾಗಿ ಎಸ್‌ಆರ್‌ಹೆಚ್ ಆಟಗಾರನೊಬ್ಬನಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಐಪಿಎಲ್ 2021ಅನ್ನು ರದ್ದು ಮಾಡಲಾಗಿದೆ.

ಈ ಸೀಸನ್ ನ ಐಪಿಎಲ್ ಸರಣಿಯನ್ನು ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಎಎನ್‌ಐಗೆ ತಿಳಿಸಿದ್ದಾರೆ.
loading...