ವಿದೇಶಿ ಆಟಗಾರರನ್ನು ತವರಿಗೆ ಕಳುಹಿಸುವುದು ದೊಡ್ಡ ಸಮಸ್ಯೆ

0
12

ನವದೆಹಲಿ:- ಕೊರೋನಾ ಸಾಂಕ್ರಾಮಿಕದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರದ್ದಾದ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಫ್ರಾಂಚೈಸಿಗಳು ವಿದೇಶಿ ಆಟಗಾರರನ್ನು ತವರಿಗೆ ಕಳುಹಿಸುವ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿವೆ.

ಫ್ರಾಂಚೈಸಿಗಳ ಪರವಾಗಿ ಆಟಗಾರರಿಗಾಗಿ ಪ್ರಯಾಣವನ್ನು ನಿರ್ವಹಿಸುವುದು ಸವಾಲಾಗಿದೆ. ಕೆಲವು ಫ್ರಾಂಚೈಸಿಗಳು ಇದು ಕಷ್ಟದ ಸಮಯ ಎಂದು ಒಪ್ಪಿಕೊಂಡಿದ್ದಾರೆ. ವಿಶೇಷ ವಿಮಾನಗಳ ಮೂಲಕ ವಿದೇಶಿ ಆಟಗಾರರನ್ನು ವಾಪಸ್ ಕಳುಹಿಸುವ ಅಗತ್ಯವನ್ನು ಮನಗಂಡ ಸಿಇಒ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಮತ್ತು ತಂಡಗಳು ಆಟಗಾರರನ್ನು ತವರಿಗೆ ಕಳುಹಿಸಲು ಅನುಮತಿ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

loading...