ಆಕ್ಸಿಜನ್ ಹೊತ್ತು ಬರುತ್ತಿದ್ದ ಟ್ಯಾಂಕರ್ ಟಾಯರ್ ಬ್ಲಾಸ್ಟ್: ಯಾವುದೇ ಹಾನಿಯಾಗಿಲ್ಲ

0
82

ಬೆಳಗಾವಿ

ರಾಜ್ಯದಲ್ಲಿ ಆಕ್ಸೀಜನ್ ಕೊರತೆಯಾಗಿದೆ,ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಆಕ್ಸೀಜನ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾದ ಘಟನೆ ಹಿರೇಬಾಗೇವಾಡಿ ಪೋಲೀಸ್ ಠಾಣೆ ವ್ಯಾಪ್ತಿಯ ಮುತ್ನಾಳ ಗ್ರಾಮದ ಬಳಿ ಸಂಭವಿಸಿದೆ.

ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದೆ.ಮುತ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.ಓವರ್ ಟೇಕ್ ಮಾಡುವ ವೇಳೆ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಅದೃಷ್ಟವಶಾತ್ ಅಪಘಾತ ವೇಳೆ ಆಕ್ಸಿಜನ್ ಲಿಕ್ವಿಡ್‌ಗೆ ಹಾನಿ ಆಗಿಲ್ಲ,ಆಕ್ಸೀಜನ್ ಲಿಕ್ವಿಡ್ ಸೋರಿಕೆ ಆಗಿಲ್ಲ,ಆಕ್ಸೀಜನ್ ಟ್ಯಾಂಕರ್ ಮುಂಬಾಗ ಮಾತ್ರ ಜಿಬ್ಬಿಯಾಗಿದ್ದು ಲಿಕ್ವೀಡ್ ಸೇಫ್ ಆಗಿದೆ.
ಡಿಕ್ಕಿ ರಭಸಕ್ಕೆ ಟ್ಯಾಂಕರ್‌ನ ಟಯರ್ ಬ್ಲಾಸ್ಟ್ ಆಗಿ ಎಕ್ಸಲ್ ಕಟ್ ಆಗಿದೆ.ಎಕ್ಸಲ್ ಕಟ್ ಆಗಿರುವ ಹಿನ್ನೆಲೆ ಬೇರೆ ಆಕ್ಸಿಜನ್ ಟ್ಯಾಂಕರ್ ತರೆಸಲು ಅಧಿಕಾರಿಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಬೇರೆ ಆಕ್ಸಿಜನ್ ಟ್ಯಾಂಕರ್ ತರಿಸಿ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡುವ ಕಾರ್ಯಾಚರಣೆ ಶುರುವಾಗಿದೆ.16KL ಸಾಮರ್ಥ್ಯದ ಆಕ್ಸಿಜನ್ ಲಿಕ್ವಿಡ್ ಪೂರೈಸುತ್ತಿದ್ದ ಟ್ಯಾಂಕರ್ ಬೆಳಗಾವಿಗೆ ಬರುವಾಗ ಅಪಘಾತಕ್ಕೀಡಾಗಿದೆ.

ಸ್ಥಳದಲ್ಲಿ ಹಿರೇಬಾಗೇವಾಡಿ ಪೋಲೀಸರು ದೌಡಾಯಿಸಿ ಟ್ಯಾಂಕರ್ ಶಿಪ್ಟ ಮಾಡಿಸುವ ಕಾರ್ಯದಲ್ಲಿ ತೊಡಗೊದ್ದಾರೆ.

loading...