ಮುಂಬೈನಲ್ಲಿ ಕೋವಿಡ್ ನಿಯಂತ್ರಣ ಮಾದರಿಯಲ್ಲಿ ವಾರ್ಡ್ ಮಟ್ಟದಲ್ಲಿ ತುರ್ತು ಸೇವೆ ಒದಗಿಸಲು ಸಮಿತಿ ರಚನೆ:ಅರವಿಂದ

0
18

ಬೆಂಗಳೂರು:- ಮುಂಬೈನಲ್ಲಿ ಕೋವಿಡ್ ನಿಯಂತ್ರಣ ಮಾಡಿರುವ ಬಗ್ಗೆ ಅಧ್ಯಯನ ಮಾಡಿದ್ದು, ವಾರ್ಡ್ ಮಟ್ಟದಲ್ಲಿ ತುರ್ತು ಸೇವೆ ಒದಗಿಸಲು ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿರುವುದಾಗಿ ಕೋವಿಡ್‌ಕಾಲ್ ಸೆಂಟರ್ ಮತ್ತು ವಾರ್ ರೂಮ್ ಜವಾಬ್ದಾರಿ ಹೊತ್ತಿರುವ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಾರ್ ರೂಮ್ ಕಾಲ್ ಸೆಂಟರ್ ನಿರ್ವಹಣೆ ಕುರಿತು ಅರವಿಂದ್ ಲಿಂಬಾವಳಿ ಮಾಹಿತಿ ನೀಡಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ವಾರ್ ರೂಂಗೆ ಭೇಟಿ ನೀಡಿ ವಾರ್ ರೂಂ ಸಿಬ್ಬಂದಿ ಜತೆ ಚರ್ಚೆ,ವಲಯವಾರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ‌ ಪಡೆಯಲಾಗಿದೆ.ಅದೇ ರೀತಿ ಕಾಲ್ ಸೆಂಟರ್ 1912 ಗೂ ಭೇಟಿ ನೀಡಿದ್ದು
ಸರ್ಕಾರದಿಂದ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿಗಳ ಜತೆ ಸಭೆ ನಡೆಸಿರುವುದಾಗಿ ಹೇಳಿದರು.
ಬೆಂಗಳೂರಿನಲ್ಲಿ ರಾಜ್ಯದ ಅರ್ಧದಷ್ಟು ಕೊರೋನಾ ಸೋಂಕಿತ ಪ್ರಕರಣಗಳಿವೆ.ಬೆಂಗಳೂರು ನಗರದಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.ವಾರ್ಡ್ ವಾರು ಜನಪ್ರತಿನಿಧಿಗಳು, ಸ್ವಯಂ ಸೇವಕರು,ಅಧಿಕಾರಿಗಳನ್ನೊಳಗೊಂಡ 50 ಜನರ ಸಮಿತಿ ರಚಿಸಲಾಗುತ್ತದೆ.ವಾರ್ಡ್ ಮಟ್ಟದ ಸಮಿತಿಯು ವಾರ್ಡ್ ವಾರು ಕೇಸ್ ತಡೆಯಲು ಶ್ರಮಿಸುತ್ತದೆ.ಬೆಂಗಳೂರಿನ ವಾರ್ಡ್ ಗಳಲ್ಲಿ ನಿತ್ಯ 100 – 150 ಕೇಸ್ ಗಳು ಬರುತ್ತಿದ್ದು,ವಾರ್ಡ್ ಗಳನ್ನು ಝೋನ್‌ನವರೇ ನಿರ್ವಹಿಸುತ್ತಿದ್ದಾರೆ.ಇದನ್ನು ತಪ್ಪಿಸಲು ವಾರ್ಡ್ ಸಮಿತಿ ರಚಿಸಲಾಗಿದೆ.
ವಾರ್ಡ್ ಮಟ್ಟದಲ್ಲಿಯೇ ಕೋವಿಡ್ ನಿಯಂತ್ರಿಸಲು ಮುಂದಾಗುತ್ತೇವೆ ಎಂದರು.
ಶೇ.85 ರಷ್ಟು ಜನ‌ ಹೋಂ ಐಸೋಲೇಷನ್ ನಲ್ಲಿದಾರೆಹೋಂ ಐಸೋಲೇಷನ್ ನಲ್ಲಿರುವವರಿಗೆ ಮೆಡಿಕಲ್ ಕಿಟ್ ಕೊಡಲಾಗುವುದು.
ಟೆಲಿ ಕನ್ಸಲ್ಟೆನ್ಸಿ ಮೂಲಕ ಅವರ ಆರೋಗ್ಯ ವಿಚಾರಿಸಲಾಗುವುದು
ಪ್ರತೀ ಜಿಲ್ಲೆಯಲ್ಲಿ ವಾರ್ ರೂಂ, ಹೆಲ್ಪ್ ಲೈನ್ ಇದೆ.57 ತಾಲ್ಲೂಕುಗಳಲ್ಲಿ ಸಿಸಿಸಿ ಕೇಂದ್ರ ತೆರೆದಿದ್ದೇವೆ.ಉಳಿದ ತಾಲ್ಲೂಕುಗಳಲ್ಲೂ ಸಿಸಿಸಿ ಕೇಂದ್ರಗಳನ್ನು ತೆರೆಯುತ್ತೇವೆ.ಇನ್ಮುಂದೆ ಹಾಸಿಗೆ ಹಂಚಿಕೆ ಮಾಡುವವರಿಗೆ ಎಸ್ಎಂಎಸ್ ಕಳಿಸುತ್ತೇವೆ.ಬೆಡ್ ಅಲಾಟ್ ಆಗಲು 12 ಗಂಟೆ ಅವಕಾಶ ಇತ್ತು.ಇದೀಗ ಈ ಸಮಯವನ್ನು ಕಡಿಮೆ ಮಾಡಿ 4 ಗಂಟೆಗೆ ಇಳಿಸಲಾಗಿದೆ.ಬೆಡ್ ಅಲಾಟ್ ಆದ ರೋಗಿ 4 ಗಂಟೆಯೊಳಗೆ ಆಸ್ಪತ್ರೆಗೆ ಹೋಗಬೇಕು.ಬೆಡ್ ಬ್ಲಾಕಿಂಗ್ ವ್ಯವಹಾರಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ವಾರ್ ರೂಮ್ , ಟೆಲಿ ಕಮ್ಯುನಿಕೇಶನ್ಸ್ ಬಗ್ಗೆ ನಮಗೆ ಸಿಎಂ ಮೇಲುಸ್ತುವಾರಿ ನೀಡಿದ್ದಾರೆ.ನಾನು ವಾರ್ ರೂಮ್ ಗೆ , ಬಿಬಿಎಂಪಿ ವಾರ್ ರೂಮ್ ಗೆ ಬೇಟಿ ಕೊಟ್ಟು ಸುಧೀರ್ಘ ಸಮಾಲೋಚನೆ ಮಾಡಿದ್ದೇನೆ.ಒಂದು ಝೋನ್ ಗೆ ಸಂಬಂಧಿಸಿದಂತೆ ಭೇಟಿ ನೀಡಿ ಒಂಬತ್ತರಲ್ಲಿ ಎರಡಕ್ಕೆ ಭೇಟಿ ನೀಡಿದ್ದೇನೆ.ಆಸ್ಪತ್ರೆಗಳಲ್ಲಿ ಹಾಕಿರುವ ನೂಡಲ್ ಆಫೀಸ್ ಗಳ ಜೊತೆಗೆ ಸಭೆ ಮಾಡಿದ್ದೇನೆ .ಇವತ್ತು ಕೂಡ ಕೋವಿಡ್ ಹಿನ್ನೆಲೆಯಲ್ಲಿ ಸಭೆ ಮಾಡಿದ್ದೇನೆ.ನಮ್ಮ ಡಿಸಾಸ್ಟರ್ ಮ್ಯಾನೆಜ್‌ಮೆಂಟ್‌ ಕಾರ್ಯದರ್ಶಿ ಮಂಜುನಾಥ್ ಅವರ ಜೊತೆ ಸಭೆ ಮಾಡಿದ್ದೇನೆ.ಮುಂಬಯಿ ನಲ್ಲಿ ಯಾವ ರೀತಿಯಲ್ಲಿ ನಿಯಂತ್ರಣಕ್ಕೆ ತಂದಿದ್ದಾರೆ ಆ ರೀತಿಯಲ್ಲಿ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ.ವಾರ್ಡ್ ಮಟ್ಟದಲ್ಲಿ ಇದನ್ನು ಕಾರ್ಯಾರಂಭ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ.
ಪಿ ಹೆಚ್ ಸಿ ( ಪ್ರಾಥಮಿಕ ಆರೋಗ್ಯ ಕೇಂದ್ರಗಳು) ತೆರೆಯಲು ಉದೇಶಿಸಿದ್ದೇವೆ.ವಾರ್ಡ್ ನ ಆರ್ ಡಬ್ಲು ಎಸ್ ಸೇರಿದಂತೆ 50 ಜನರನ್ನು ಸೇರಿದಂತೆ ಕೋವಿಡ್ ಹ್ಯಾಂಡಲ್ ಮಾಡಲು ತಯಾರಿ ಮಾಡುತ್ತೇವೆ ನಮ್ಮ ಝೋನ್ ಕಮಾಂಡಿಂಗ್ ಸೆಂಟರ್ ನಿಂದ ಟೆಲಿಫೋನ್ ನಿಂದ ನಿರ್ವಹಣೆ ಮಾಡುತ್ತಿದ್ದೇವೆ.ಇದನ್ನು ಫಿಸಿಕಲ್ ಆಗಿ ನಿರ್ವಹಣೆ ಮಾಡಲು ತಯಾರಿ ನಡೆಸಿದ್ದು,ಡಾಕ್ಟರ್, ನರ್ಸ್ ಸೇರಿದಂತೆ ಎಲ್ಲರನ್ನು ಇದರಲ್ಲಿ ಬಳಸಿಕೊಳ್ಳುತ್ತೇವೆ.ವಾರ್ಡ್ ನಲ್ಲಿ ಪೇಶೆಂಟ್ ಟ್ರಯಾಸ್ ಸೆಂಟರ್ ಗೆ ಬಂದರೆ ರೋಗಿ ಲಕ್ಷಣ ಕಂಡು ಹಿಡಿಯುತ್ತಾರೆ.ಪಾಸಿಟಿವ್ ಇದ್ದರೆ ಅವರನ್ನು ಎಲ್ಲಿ ಕಳಿಸಬೇಕು ಎನ್ನುವುದನ್ನು ಅವರೇ ತೀರ್ಮಾನ ಮಾಡುತ್ತಾರೆ.ಬಹುತೇಕ ಎಲ್ಲರೂ ಮನೆಯಲ್ಲಿ ಇರಲು ಹೇಳುತ್ತಾರೆ.ಅವರಿಗೆ ಮೆಡಿಕಲ್ ಕಿಟ್ ಕೂಡ ನೀಡುತ್ತೇವೆ ಆ ಸಂಧರ್ಭದಲ್ಲಿ ಆಕ್ಸಿಜನ್ ಬೇಕು , ಅಥವಾ ಮಧ್ಯದಲ್ಲಿ ಯಾರಿಗಾದರೂ ತೊಂದರೆ ಆದರೆ ಅವರಿಗೂ ನೀಡುವುದು ಹೀಗೆ ಕೆಲಸ ಆಗುತ್ತದೆ
ಮನೆಗೆ ಹೋಗಬೇಕೇ? ಸ್ಟೆಬಿಲೈಸ್ ಸೆಂಟರ್ ಗೆ ಹೋಗಬೇಕಾ? ಅಥವಾ ಆಸ್ಪತ್ರೆಗೆ ಕಳಿಸಬೇಕೇ ಈ ಎಲ್ಲಾ ಆ ವಾರ್ಡ್ ಸಮಿತಿಗೆ ತೀರ್ಮಾನಕ್ಕೆ ಬಿಟ್ಟದ್ದು ಮುಂಬಯಿ, ಚೆನೈ ನಲ್ಲಿ ಈ ರೀತಿಯಲ್ಲಿ ಮಾಡಿದ್ದಾರೆ ಅದೇ ಮಾದರಿಯಲ್ಲಿ ಮಾಡುತ್ತೇವೆ ಎಂದರು.
ಎರಡನೇ ಕೋವಿಡ್ ಲಸಿಕೆ ಡೋಸ್ ಗೆ ಸಮಸ್ಯೆ ಆಗದಂತೆ ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದೇವೆ.ಪ್ರತಿ ತಾಲೂಕಿನಲ್ಲಿ ವಾರ್ ರೂಮ್ ಇರುತ್ತದೆ. ಅದರಲ್ಲಿ ಪ್ರತಿಯೊಂದು ವಿವರ ಇರಬೇಕು.ಇದನ್ನು ಡ್ಯಾಶ್ ಬೋರ್ಡ್ ನಲ್ಲಿ ಹಾಕಬೇಕು. 57, ತಾಲೂಕಿನಲ್ಲಿ ಮಾಡಲು ತಯಾರಿ ಇದೆ.,ಆಕ್ಸಿಜನ್ ಬೆಡ್ , ಐಸಿಯು ವೆಂಟಿಲೇಟರ್ ಬೆಡ್ ಮಾಹಿತಿ ಬಹಿರಂಗವಾಗಿ ಪ್ರದರ್ಶನ ಮಾಡಬೇಕು.ಈ ಬಗ್ಗೆ ಸಂಪೂರ್ಣ ವಿವರ ಮಂಗಳವಾರ ನೀಡುವುದಾಗಿ ಹೇಳಿದರು.
ಬೆಂಗಳೂರಿನಲ್ಲಿ ಕಮಾಂಡಿಂಗ್ ಸೆಂಟರ್ ನಲ್ಲಿ ನಿರ್ವಹಣೆ ಕಾರ್ಯ ನಡೆಯುತ್ತಿದೆ.ಇದರಲ್ಲಿ ರೀಫಾರ್ಮ್ ತರಲು ಕೆಲಸ ಕೆಲಸ ತಂದಿದ್ದೇವೆ
ಇನ್ನುಮುಂದೆ ಆಸ್ಪತ್ರೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು,ಆಸ್ಪತ್ರೆಗೆ ದಾಖಲಾಗುವಾಗ ಮತ್ತು ಡಿಸ್ಚಾರ್ಜ್ ಆಗುವಾಗ ರೋಗಿಯ ಥಂಬ್ ಇಂಪ್ರೆಷನ್ ಪಡೆಯಲಾಗುತ್ತದೆ.ಆ ಮೂಲಕ ಕೆಲ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ತಡೆಯೊಡ್ಡುವುದಾಗಿ ಹೇಳಿದರು.
1912 ಹೆಲ್ಪ್ ಲೈನ್ ನಿರ್ದಿಷ್ಟ ರೋಗಿ ದಾಖಲಾದ ಮೇಲೆ ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು.ಬೆಡ್ ಅಲಾಟ್ ಆದ ರೋಗಿಯೇ ದಾಖಲಾಗಿದ್ದಾರೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.ಮುಂಬಯಿ, ಚೆನ್ನೈನಲ್ಲಿ ಈ ರೀತಿಯಲ್ಲಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ನಾವು ಮಾಡುತ್ತೇವೆ. ಎರಡನೆ ಡೋಸ್​ಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ವಾರ್ ರೂಮ್ ಇರುತ್ತೆ, ಅದರಲ್ಲಿ ಪ್ರತಿಯೊಂದು ಡೀಟೈಲ್ಸ್ ಇರಬೇಕು. ಇದನ್ನು ಡ್ಯಾಶ್ ಬೋರ್ಡ್​ನಲ್ಲಿ ಹಾಕಬೇಕು. 57 ತಾಲೂಕಿನಲ್ಲಿ ಮಾಡಲು ತಯಾರಿ ಇದೆ. ಆಕ್ಸಿಜನ್ ಬೆಡ್ , ಐಸಿಯು ವೆಂಟಿಲೇಟರ್ ಬೆಡ್ ಡಿಸ್ ಪ್ಲೆ ಮಾಡಬೇಕು. ಅದರ ಸಂಪೂರ್ಣ ವಿವರ ಮಂಗಳವಾರ ನೀಡುತ್ತೇವೆ. ಬೆಂಗಳೂರಿನಲ್ಲಿ ಕಮಾಂಡಿಂಗ್ ಸೆಂಟರ್​ನಲ್ಲಿ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಇದರಲ್ಲಿ ಸುಧಾರಣೆ ತರಲಾಗಿದೆ. ಬೆಡ್ ಆಲಾಟ್ ಮಾಡಿದಾಗ ಅವರಿಗೆ ಮೆಸೇಜ್ ಹೋಗುತ್ತಿರಲಿಲ್ಲ. ಇನ್ನೂ ಮುಂದೆ ಬೆಡ್ ಅಲಾಟ್ ಆದ ಮೇಲೆ ಮೆಸೇಜ್ ಹೋಗುತ್ತೆ ಎಂದು ಸಚಿವ ಅರವಿಂದ ಲಿಂಬಾವಳಿ ಅವರು ಮಾಹಿತಿ ನೀಡಿದರು.
ಸಚಿವ ಅಶೋಕ್ ಬೆಡ್ ಹಂಚಿಕೆ ಪಾರದರ್ಶಕವಾಗಿರಬೇಕೆಂದಿದ್ದಾರೆ.
ಎಲ್ಲವನ್ನು 50% ಅಳತೆಯಲ್ಲಿ ಬೆಡದ ನೀಡಬೇಕು .ರೈಲ್ವೆ ರಿಸರ್ವೇಶನ್ ರೀತಿಯಲ್ಲಿ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ.ಪ್ರತಿ ಕಮಾಂಡಿಂಗ್ ಸೆಂಟರ್ ನಲ್ಲಿ ಮ್ಯಾಕ್ ಐ ಡಿ ನಲ್ಲಿ ದೋಷ ಬಂದಿದೆ ಅದಕ್ಕೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ.ಡಾಕ್ಟರ್ ಗಳು ಶಿಫ್ಟ್ ನಲ್ಲಿ ಬಂದು ಕೆಲಸ ಮಾಡುತ್ತಾರೆ.ಅವರು ಮನೆಯಲ್ಲಿ ಕೂತು ಅಲಾಟ್ ಮಾಡಬಹುದು ಇದರಿಂದ ಸಮಸ್ಯೆ ಆಗುತ್ತಿತ್ತು.ಈಗ ಇದನ್ನು ಈಗ ಅವರ ಹೆಸರು ಮುಂದೆ ಬರುವಂತೆ ಮಾಡುತ್ತೇವೆ.ಇನ್ನು ಮುಂದೆ ಈ ಸಮಸ್ಯೆ ಆಗುವುದಿಲ್ಲ.ಜನರು ಎಚ್ಚರಿಕೆಯಿಂದ ಇರಬೇಕು.ಪಕ್ಷ ಬೇಧ ಮರೆತು ಎಲ್ಲಾ ಪಕ್ಷದವರು , ಸಂಘಗಳು ಈ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡಲು ಕೈ ಜೋಡಿಸಬೇಕು.ಇದು‌ ರಾಜಕೀಯ ಮಾಡುವ ಸಂದರ್ಭ ಅಲ್ಲ.ವಾರ್ ಪುಟಿಂಗ್ ನಲ್ಲಿ ಕೆಲಸ ಮಾಡಬೇಕು
ನಾಳೆ ಅಶೋಕ್ ಅವರ ಕ್ಷೇತ್ರ ಕುಮಾರಸ್ವಾಮಿ ಲೇಔಟ್ ನಲ್ಲಿ ಪರಿಶೀಲನೆ ಮಾಡುತ್ತೇವೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

loading...