ಕೋವಿಡ್ ವಿರುದ್ಧ ಹೋರಾಟಕ್ಕೆ ಮೂಲಸೌಕರ್ಯ ಬಲಪಡಿಸಲು ಪ್ರಧಾನಿಗೆ ಮಮತಾ ಮನವಿ

0
60

ಕೊಲ್ಕತ್ತ:- ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ವಿರುದ್ಧ ಹೋರಾಟಕ್ಕೆ ಮೂಲಸೌಕರ್ಯ ಬಲಪಡಿಸಲು ಪ್ರಧಾನಿ ನರೇಂದ್ರಮೋದಿ ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.
ಕೋವಿಡ್ ಸಂಬಂಧಿತ ಔಷಧಗಳು, ಆಮ್ಲಜಕನಕ ಸಿಲಿಂಡರ್ ಗಳು, ಕಾನ್ಸನ್‍ ಟ್ರೇಟ್ ಗಳ ಮೇಲಿನ ತೆರಿಗೆಗಳು, ಕಸ್ಟಮ್ಸ್‍ ಸುಂಕ ಹಾಗೂ ಜಿಎಸ್ ಟಿ ರದ್ದುಪಡಿಸುವಂತೆ ಮಮತಾ ಬ್ಯಾನರ್ಜಿ, ಪ್ರಧಾನಿಗೆ ಮನವಿ ಮಾಡಿದ್ದಾರೆ.
‘ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ದಿಢೀರ್ ಏರಿಕೆ ಹಿನ್ನೆಲೆಯಲ್ಲಿ ಔಷಧ, ಆಮ್ಲಜನಕ, ವೈದ್ಯಕೀಯ ಸಾಧನ ಸೇರಿದಂತೆ ವೈದ್ಯಕೀಯ ಮೂಲಸೌಕರ್ಯ ಬಲಪಡಿಸಲು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ.’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರ.ೆ
‘ಹೊಸ ಸವಾಲು ಎದುರಿಸಲು ಕೋವಿಡ್‍ ಚಿಕಿತ್ಸೆಗೆ ಜೀವರಕ್ಷಕ ಔಷಧ ಒದಗಿಸುವುದು ಮತ್ತು ಆಮ್ಲಜನಕ ಪೂರೈಕೆಗೆ ಶಕ್ತಿಮೀರಿ ಪ್ರಯತ್ನಿಸುತ್ತಿದೇವೆ.’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

loading...