ಕೊವೀಡ್-19 ಹೆಸರಿನಲ್ಲಿ ಸಾರ್ವಜನಿಕರ ಲೂಟಿ ಮಾಡುತ್ತಿರುವ ಪೊಲೀಸರು.. 

0
374

ಬೆಳಗಾವಿ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸುವವರ ವಿರುದ್ದ ದಂಡ ಹಾಕುವ ಬದಲು ಬೆಳಗಾವಿ ಪೊಲೀಸರು ಹೆಲ್ಮೆಟ್ ಹಾಕದೆ ವಾಹನ ಓಡಿಸುವ ಸವಾರರಿಗೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ದಂಡ ವಿಧಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು. ಬೆಳಗಾವಿ ನಗರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಒತ್ತಡವೋ ಅಥವಾ ಇಂತಿಷ್ಟು ಕೋವಿಡ್-19 ಪ್ರಕರಣ ಉಲ್ಲಂಘಿಸಿದವರ ದಂಡ ಭರ್ತಿ ಮಾಡಿದ್ದೇವೆ ಎಂದು ತಮ್ಮ ಹಿರಿಯ ಅಧಿಕಾರಿಗಳನ್ನು ಮೆಚ್ಚಿಸಲು ನಗರದಲ್ಲಿನ ಕೆಲ ಪೊಲೀಸ್‌ರು ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸುಗ್ರಿವಾಜ್ಞೆ 2020ರ ಅನ್ವಯ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡದೆ ಇರುವವರ ಮೇಲೆ ದಂಡ ಭರಿಸಿಕೊಳ್ಳುವ ಬದಲು ಹೆಲ್ಮೆಟ್ ಹಾಕದ ವಾಹನ ಸವಾರರಿಗೂ ಅದೇ ರಸೀದಿಯಲ್ಲಿ ದಂಡ ಹಾಕುತ್ತಿರುವುದು ಪೊಲೀಸರ ನಡೆಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಸೆಮಿಲಾಕ್ ಡೌನ್ ಇರುವುದರಿಂದ ನಗರದಲ್ಲಿ ಅಷ್ಟೊಂದು ಸಂಚಾರ ದಟ್ಟನೆ ಇರುವುದಿಲ್ಲ. ಬೆಳಗಾವಿ ನಗರ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳಿಂದ ಶಬ್ಬಾಸ್ ಗಿರಿ ಪಡೆಯಲು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಿ ಸುಖಾ ಸುಮ್ಮನೆ ದಂಡ ಹಾಕುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ಲಾಕ್‌ಡೌನ್ ಘೋಷಣೆಯಾದಾಗಿನಂದಲೂ ಜನರು ಉದ್ಯೋಗವಿಲ್ಲದೆ, ಮನೆಯಲ್ಲಿಯೇ ಇರುವಂತಾಗಿದೆ. ಇಂಥದ ನಡುವೆ ಪೊಲೀಸರು ಕೋವಿಡ್-19 ಹೆಸರಿನಲ್ಲಿ ಸಂಚಾರ ದಟ್ಟನೆಯ ಇಲ್ಲದಿದ್ದರೂ ಹೆಲ್ಮೆಟ್ ದಂಡ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಗತ್ಯ ವಸ್ತುಗಳಿಗೆ ಸಾರ್ವಜನಿಕರು ವಾಹನ ಬಳಸಲು ಯಾವುದೇ ಅಭ್ಯಂತರ ಇಲ್ಲ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲನೆ ಮಾಡದವರಿಗೆ ದಂಡ ವಿಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಿದೆ ಆದರೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಹೆಸರಿನಲ್ಲಿ ಪೊಲೀಸರು ಬೇಕಾಬಿಟ್ಟಿ ದಂಡ ವಸೂಲಿ ಮಾಡುತ್ತಿರುವ ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೆಮಿ ಲಾಕ್‌ಡೌನ್ ಎರಡನೇ ದಿನ ಬೆಳಗಾವಿ ಜನತೆ ಪೊಲೀಸ್ ಇಲಾಖೆಗೆ ಸಹಕಾರ ನೀಡಿದೆ. ಆದರೆ ಕೋವಿಡ್-19 ನಿಯಮ ಉಲ್ಲಂಘನೆಯ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

“ಮೊದಲು ಪೊಲೀಸರು ಹಿಂಡು‌ ಹಿಂಡಾಗಿ ನಿಂತು ಸಾಮಾಜಿಕ ಅಂತರ ಮರೆತು ವಾಹನ ಸಾವರರ ತಪಾಸಣೆ ಮಾಡುತ್ತಿದ್ದಾರೆ. ಮೊದಲು ಅವರು ಕೋವಿಡ್-19 ನಿಯಮ ಪಾಲನೆ ಮಾಡಲಿ”-

     -ಸಂದೀಪ, ವಾಹನ ಸವಾರ

 

loading...