ಗಾಜಾ ಪಟ್ಟಿಯಲ್ಲಿ ಹೆಚ್ಚಿದ ಹಿಂಸಾಚಾರ, ಇಸ್ರೇಲ್ ರಾಕೆಟ್ ದಾಳಿಗೆ 35 ಸಾವು

0
74

ಗಾಜಾಪಟ್ಟಿ:- ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನ ಹಮಾಸ್ ಬಂಡುಕೋರರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 35 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹಮಾಸ್ ಬಂಡುಕೋರರೂ ಇಸ್ರೇಲ್ ಸೇನಾಪಡೆ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿದ್ದು, ಇಬ್ಬರು ಇಸ್ರೇಲ್ ಅಧಿಕಾರಿಗಳು ಸಹ ಹತರಾಗಿದ್ದಾರೆ. ಮತ್ತೊಂದೆಡೆ, ಇಸ್ರೇಲ್ 5,000 ಮೀಸಲು ಪಡೆ ಯೋಧರನ್ನು ನಿಯೋಜಿಸುವ ಮೂಲಕ ಗಡಿಯಲ್ಲಿ ಸೇನಾಪಡೆ ಹೆಚ್ಚಿಸಿದೆ.ಇಸ್ರೇಲ್ ನಡೆಸಿದ ರಾಕೆಟ್ ದಾಳಿಯ ವೇಳೆ ಹಮಾಸ್ ಬಂಡುಕೋರರ ಫೀಲ್ಡ್ ಕಮಾಂಡರ್ ಮನೆ ಹಾಗೂ ಹಮಾಸ್ ಬಂಡುಕೋರರ ಗಡಿ ಸುರಂಗ ಮಾರ್ಗಗಳನ್ನು ಗುರಿ ಮಾಡಲಾಗಿದೆ.

loading...