ದೇಶದಲ್ಲಿ 3.48 ಲಕ್ಷ ಹೊಸ ಕೋವಿಡ್ ಪ್ರಕರಣಗಳು, 4,205 ಮಂದಿ ಸಾವು ವರದಿ

0
79
PATNA, MAY 12 (UNI):- A health worker takes a swab sample of a youth for COVID-19 test, in Patna on Wednesday. UNI PHOTO-23U

ನವದೆಹಲಿ:- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಕೋವಿಡ್ ಪ್ರಕರಣಗಳು ಮತ್ತು 4,205 ಸಾವುಗಳು ವರದಿಯಾಗಿದ್ದು, ಸತತ ಎರಡನೇ ದಿನ ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ಬುಧವಾರ ತಿಳಿಸಿವೆ.
ಇದೇ ಅವಧಿಯಲ್ಲಿ 3,55,338 ಜನರು ಚೇತರಿಸಿಕೊಂಡಿದ್ದು, ದೇಶದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 2,33,40,938 ಕ್ಕೆ ತಲುಪಿದೆ. ಈ ಪೈಕಿ 37,04,099 ಸಕ್ರಿಯ ಪ್ರಕರಣಗಳಾದರೆ, 2,54,197 ಸೋಂಕಿತರು ಈವರೆಗೆ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಇದುವರೆಗೆ 1,93,82,642 ಜನರು ಚೇತರಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸುಮಾರು 41,000 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈ ಸಂಖ್ಯೆ ಕಳೆದ ಕೆಲವು ವಾರಗಳ ಸರಾಸರಿಗಿಂತ ಕಡಿಮೆ ಎನಿಸಿದೆ. ಕರ್ನಾಟಕ, ಕೇರಳದಲ್ಲಿ ತಲಾ 40,000 ಪ್ರಕರಣಗಳು ವರದಿಯಾಗುತ್ತಿವೆ. ಮಂಗಳವಾರ ವರದಿಯಾದ 4,205 ಸಾವುಗಳ ಪೈಕಿ ಮಹಾರಾಷ್ಟ್ರದಲ್ಲಿ 800 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ನಂತರದ ಆರು ರಾಜ್ಯಗಳ ಪೈಕಿ ಕರ್ನಾಟಕ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿವೆ.

ಕಳೆದ 24 ಗಂಟೆಗಳಲ್ಲಿ, 19,83,804 ಕೋವಿಡ್‍ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದೇ ಅವಧಿಯಲ್ಲಿ 24,46,674 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

loading...