ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: 8 ಜನ ಸಾವು

0
81

ಗಾಜಾ:- ಗಾಜಾ ನಗರದ ಅಲ್-ಶತಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 8 ಜನರು ಮೃತಪಟ್ಟಿದ್ದಾರೆ ಎಂದು ಅಲ್-ಜಜೀರಾ ವಾಹಿನಿ ವರದಿ ಮಾಡಿದೆ.
ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದರೆ, ಇತರೆ 30 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಯೊಬ್ಬರು ಸ್ಪುಟ್ನಿಕ್ ಗೆ ಸಂಸ್ಥೆಗೆ ತಿಳಿಸಿದರು.
ಗಾಜಾ ಪಟ್ಟಿಯ ಗಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿದೊಡ್ಡ ದಾಳಿಯ ಘಟನೆ ಸೋಮವಾರ ಪ್ರಾರಂಭವಾಗಿದೆ.
ಪ್ಯಾಲೇಸ್ಟಿನಿಯನ್ ಉಗ್ರರು ಇಸ್ರೇಲ್ ಕಡೆಗೆ ಸುಮಾರು 2,000 ರಾಕೆಟ್ ಗಳನ್ನು ಉಡಾಯಿಸಿದ್ದಾರೆ, ಆದರೆ ಇಸ್ರೇಲ್ ಹಮಾಸ್ ಇಸ್ಲಾಮಿಸ್ಟ್ ಚಳವಳಿಯ ವಿರುದ್ಧ ಅನೇಕ ಪ್ರತೀಕಾರದ ದಾಳಿ ನಡೆಸುತ್ತಿದೆ.

loading...