312 ಸಿಖ್‌ ವಿದೇಶಿ ಪ್ರಜೆಗಳು ಭಾರತದ ಕಪ್ಪುಪಟ್ಟಿಯಿಂದ ಹೊರಕ್ಕೆ

0
2
ನವದೆಹಲಿ,- ಭಾರತ ವಿರೋಧಿ ಚಟುವಟಿಕೆಗಳಲ್ಲಿ ಈ ಹಿಂದೆ ಭಾಗಿಯಾಗಿದ್ದ 312 ಸಿಖ್ ವಿದೇಶಿ ಪ್ರಜೆಗಳ ಹೆಸರನ್ನು ಸರ್ಕಾರದ ಕಪ್ಪುಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.
ಈ ಪ್ರಜೆಗಳು ಈಗ ಭಾರತದಲ್ಲಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಮತ್ತು  ಸಂಬಂಧವಿರುವವರೊಂದಿಗೆ ಮರುಸಂಪರ್ಕಿಸುವುದಕ್ಕೆ ವೀಸಾ ಸೇವೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಗದಲ್ಲಿ ಇನ್ನು ಕೇವಲ ಎರಡು ಹೆಸರುಗಳು ಉಳಿದಿವೆ.
ಕಾಲಕಾಲಕ್ಕೆ ವಿವಿಧ ಭದ್ರತಾ ಸಂಸ್ಥೆಗಳು ನಡೆಸುವ ‘ಪ್ರತಿಕೂಲ ಪಟ್ಟಿ’ ಪರಿಶೀಲನೆಯ ನಂತರ ಕೇಂದ್ರ ಈ ಕ್ರಮ ತೆಗೆದುಕೊಂಡಿದೆ. ಇದು ನಿರಂತರ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ.
ಇಂತಹ ಪರಾಮರ್ಶೆ ಸಿಖ್ ವಿದೇಶಿ ಪ್ರಜೆಗಳಿಗೆ ಭಾರತಕ್ಕೆ ಭೇಟಿ ನೀಡಲು, ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ
ಮಾಡಲು ಹಾಗೂ ಸಂಬಂಧಿಕರೊಂದಿಗೆ ಮರುಸಂಪರ್ಕಿಸಲು ಅವಕಾಶ ಮಾಡಿಕೊಡುತ್ತದೆ. 1980 ರ ದಶಕದಲ್ಲಿ, ಅನೇಕ ಭಾರತೀಯ ಸಿಖ್ಖರು ಮತ್ತು ಸಿಖ್ ಸಮುದಾಯಕ್ಕೆ ಸೇರಿದ ವಿದೇಶಿ ಪ್ರಜೆಗಳು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲ ಭಾರತೀಯ ಸಿಖ್ಖರು ಇಲ್ಲಿನ ಸರ್ಕಾರಗಳಿಂದ ತಪ್ಪಿಸಿಕೊಳ್ಳಲು ಹೊರ ದೇಶಗಳಿಗೆ ಪಲಾಯನಗೈದು ಅಲ್ಲಿಯೇ ಆಶ್ರಯ ಪಡೆದರು. ಹಾಗೆಯೇ ವಿದೇಶಿ ಪ್ರಜೆಗಳಾದರು. ಅವರನ್ನು ಭಾರತಕ್ಕೆ ಭೇಟಿ
ನೀಡಲು ವೀಸಾ ಸೇವೆ ಪಡೆಯುವುದಕ್ಕೆ ಇವರನ್ನೆಲ್ಲ ಅನರ್ಹಗೊಳಿಸುವ ಮೂಲಕ   2016
ರವರೆಗೆ ಪ್ರತಿಕೂಲ ಪಟ್ಟಿ(ಕಪ್ಪುಪಟ್ಟಿ)ಯಲ್ಲಿ ಇರಿಸಲಾಗಿತ್ತು
loading...