ಬಂಕಿಮ ಚಂದ್ರ ಚಟರ್ಜಿ

0
808

  27 ಜೂನ್ 1838 ರಲ್ಲಿ ಬಂಗಾಲದ ಪರಗಣ ಜಿಲ್ಲೆಗೆ ಸೇರಿದ ಕಾಂಚಲಪಾಡಾ ಗ್ರಾಮದಲ್ಲಿ ಜನಿಸಿದರು.

ತಂದೆ ಯಾದವ ಚಂದ್ರ  ಚಟ್ಟೌಪಾಧ್ಯಾಯರು ಸರಕಾರಿ ಕೆಲಸದಲ್ಲಿದ್ದರು. ಬಂಕಿಮ ಚಂದ್ರ ಜನಿಸಿದ ವರ್ಷವೇ ಡೆಪ್ಯುಟಿ  ಕಲೆಕ್ಟರರಾಗಿ ಮಿಡ್ನಾಪುರಕ್ಕೆ  ಬಂದರು ಬಂಕಿಯ ಚಂದ್ರ ಎಂದರೆ ಹುಣ್ಣ್ಣಿವೆ ಆದ ಎರಡನೇ ದಿನ ಬಿದಿಗೆಯ ಚಂದ್ರ ಎಂದರ್ಥ

ಚಿಕ್ಕಂದಿನಲ್ಲಿ ತುಂಬಾ ಬುದ್ದಿವಂತ  ಬಾಲಕ  ಒಂದೇ ದಿನದಲ್ಲಿ ವರ್ಣ ಮಾಲೆ  ಕಲಿತನಂತೆ  ಪ್ರಾಥಮಿಕ ಶಿಕ್ಷಣ ಮಿಡ್ನಾಪುರದಲ್ಲಿ  ಆಯಿತು.  ಹುಗ್ಗಿಯ ಮೋಸಿನ್ ಕಾಲೇಜಿನಲ್ಲಿ ಆರು ವರ್ಷ ಶಿಕ್ಷಣ ಆಯಿತು.  ಪ್ರಥಮ ಸ್ಥಾನ ಇವರದೇ ಆಗಿತ್ತು. ಆಟ  ಎಂದರೆ ಅಷ್ಟಕಷ್ಟೆ ಪಠ್ಯ ಪುಸ್ತಕ ಓದುವದಕ್ಕಿಂತ  ಪಕ್ಷೇತರ  ಪುಸ್ತಕ ಓದುವುದು ಇಷ್ಟವಾಗುತ್ತಿತ್ತು. ಸಂಸ್ಕ್ಕತ  ಪುಸ್ತಕ ಹೆಚ್ಚು ಆಸಕ್ತಿಯಿಂದ ಓದುತ್ತಿದ್ದನು.

ನಂತರ 1856 ರಲ್ಲಿ ಕಲ್ಕತ್ತ  ಪ್ರೇಸಿಡೆನ್ಸಿ ಕಾಲೇಜಿಗೆ ಬಿ. ವಿ. ಪದವಿ ಪಡೆದರು. ಕಲ್ಕತ್ತಾದ ಲೆಫ್ಟಿನೆಂಟ್ ಗವರ್ನರು ಜಿಲ್ಲಾಧಿಕಾರಿ ಹುದ್ದೆಯನ್ನು ಕೊಟ್ಟರು ಅವಾಗ ಅವರಿಗೆ ಇಪ್ಪತ್ತು ವರ್ಷಗಳು  ಮಾತ್ರ ನಂತರ ಬಿ.ಎಲ್. ಪದವಿ  ಪಡೆದರು.  32 ವರ್ಷ ಸೇವೆ ಸಲ್ಲಿಸಿ  1891 ರಲ್ಲಿ ನಿವೃತ್ತರಾದರು. ಇವರ ಮೇಲಿನ ಅಧಿಕಾರಿಗಳು ಬ್ರಿಟೀಷರು ಇವರಿಗೂ ಅವರಿಗೂ ಆಗಿ ಬರುತ್ತಿರಲಿಲ್ಲ. ಹೀಗಾಗಿ ದೊಡ್ಡ ಸ್ಥಾನ  ಸಿಗಲಿಲ್ಲ ಬ್ರಿಟೀಷ್ ಸರಕಾರ  ಇವರಿಗೆ  ರಾವ್ ಬಹದ್ದೂರ್ ಬಿರುದನ್ನು ಕೊಟ್ಟಿತು.

ಮೇಲಿಂದ ಮೇಲೆ ಇವರ  ವರ್ಗಾವಣೆ ಮಾಡುತ್ತಿದ್ದರು.  ಜಸ್ಸೂರಿನಲ್ಲಿದ್ದಾಗ  ಬಂಗಾಲದ  ಶ್ರೇಷ್ಠ ನಾಟಕಕಾರರಾದ ದೀನಬಂಧು ಮಿತ್ರ  ಮುಂದೆ ಅವರ ನೆನೆಪಿಗಾಗಿ ಆನಂದಮಠ ಕಾದಂಬರಿ ಬರೆದರು  ಬಂಗಾಳದಲ್ಲಿ  ಬಂಕಿಮಚಂದ್ರರು  ಪ್ರಸಿದ್ಧ ಬರಹಗಾರರಾದರು ಕಾದಂಬರಿ ಕವನ ಬರೆದರು ಇವರ ಕಾದಂಬರಿಗಳು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರ ಆಗಿವೆ.

ಮೊದ ಮೊದಲು ಕವನ ಬರೆದರು ಆನಂತರ ಇಂಗ್ಲೀಷನಲ್ಲಿ ಕಾದಂಬರಿ  ಬರೆದರು. ಮುಂದೆ  ಬಂಗಾಳಿ ಭಾಷೆಯಲ್ಲಿ ಕಾದಂಬರಿ ಬರೆದರು. ಸೇವೆಯ ಮಧ್ಯದಲ್ಲಿ ಕಿರುಕುಳಗಳಿಂದ ಬೇಸರವಾಗಿ ಸ್ವ ನಿವೃತ್ತಿ  ಹೊಂದಲು ಬಯಸಿದರು. ಅವಕಾಶ ಕೊಡಲಿಲ್ಲ.  ನಂತರ ಚಾರ್ಲ್ಸ  ಇಲಿಯಟ್ ಲೆಫ್ಟಿನೆಂಟ್  ಗವರ್ನರ್ ನಿವೃತ್ತಿಗೆ ಒಪ್ಪಿಗೆಕೊಟ್ಟರು.  ನಂತರ  ಆರೋಗ್ಯ  ಕೆಟ್ಟಿತು.  ಮನಸ್ಸು ಬದಲಾಯಿಸಿ ವೇದಾಂತ ತತ್ವಜ್ಞಾನದ ಕಡೆಗೆ  ಲೇಖನಿ ಹೊರಳಿಸಿದರು.  ಇವರು ಪ್ರಾರಂಭಿಸಿದ  ಮಾರ್ಗದರ್ಶನ  ಮಾಸಪತ್ರಿಕೆ  ಅತಿಜನಪ್ರೀಯವಾಗಿತ್ತು.  ಇವರು ಹದಿನಾಲ್ಕು  ಕಾದಂಬರಿಗಳನ್ನು ಬರೆದರು.  ಅವುಗಳಲ್ಲಿ ದುರ್ಗೇಶ ನಂದಿನಿ  ಕಪಾಲ ಕುಂಡಲಾ, ಮೃಣಾಳೀನೀ,  ಚಂದ್ರಶೇಖರ,  ರಾಜಹಂಸ ಆನಂದಮರಿ ದೇವಿ ಚೌಧುರಾಣಿ, ಸೀತಾರಾಮ ವಿಷ ವೃಕ್ಷ  ಇಂದಿರಾ ಯುಗಳಾಂಗುರೀಯ ರಾಧಾರಾಣಿ  ರಜನಿ ಕೃಷಿಕಾಂತನ

ಇವರ ಆನಂದ ಮಠ ಎಂಬುದು ಕಾದಂಬರಿ ಅದರಲ್ಲಿ  ಅವರು  ಸ್ವಾತಂತ್ರ್ಯ ಹೋರಾಟದ  ಕಥೆಯನ್ನು ಬಣ್ಣಿಸುವುದನ್ನು ಓದುವಾಗ ಉತ್ಸಾಹದಿಂದ  ಮೈ ಜುಂ ಎನ್ನುತ್ತದೆ. ಇದರಲ್ಲಿ ಇವರು ಬರೆದ

ವಂದೇ ಮಾತರಂ

ಸುಜಲಾಂ ಸುಫಲಾಂ

ಮಲ ಯಜ ಶೀತಲಾಂ

ಸಸ್ಯಶ್ಯಾಮಲಾಂ ಮಾತರಂ

      ಇದು ಹುರಿದುಂಬಿಸುವ ಹಾಡು ಕಾಣಿಸಿಕೊಳ್ಳುತ್ತದೆ. ವಂದೇ ಮಾತರಂ ಗೀತೆಯಂತೂ ಭಾರತೀಯರಿಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಮಂತ್ರವಾಯಿತು.  ಇದರ ಪ್ರಭಾವ  ಎಷ್ಟೊಂದು ಆಯಿತು. ಎಂದರೆ ಇದರ ಹೆಸರು  ಕೇಳಿದರೇ ಇಂಗ್ಲೀಷ ಅಧಿಕಾರಿಗಳಿಗೆ ಕೋಪ ಉಕ್ಕುತ್ತಿತ್ತು.  ಇದನ್ನು ಯಾರಾದರೂ ಹಾಡುತ್ತಾರೆ. ಎಂದರೆ  ಅವರನ್ನು ಜೈಲಿಗೆ ಹಾಕುವಂತಾಯಿತು.

ಸ್ವತಂತ್ರ ಭಾರತದಲ್ಲಿಯೂ  ವಂದೇ ಮಾತರಂ ಗೀತೆಗೆ  ಬಹು ಗೌರವವಿದೆ. ಭಾರತೀಯನ  ಹೃದಯದಲ್ಲಿ  ತಾಯಿ ನಾಡಿನ ಸೇವೆಯ ಆದರ್ಶ ಹೊಳೆ ಹೊಳೆಯುವಂತೆ ಆ ಹಾಡು ಮೂಡಿದೆ. ಆನಂದಮಠದ ಕಥೆ 1773 ರಲ್ಲಿ ಬಂಗಾಳದಲ್ಲಿ ಭಯಂಕರ ಕ್ಷಾಮ ಆಳುವವರಿಗೆ ಈ ದೇಶದ ಜನರ ಕಷ್ಟದ ಯೋಚನೆ ಇಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ ಜನಕ್ಕೆ ಬಿಳಿಯರನ್ನು ಕಂಡರೆ ಹೆದರಿಕೆ  ಹೀಗೆ ಬಂಗಾಳದ  ಜೀವನದಲ್ಲಿ ಕತ್ತಲೇ ತುಂಬಿದೆ. ಯಾರಿಗೂ  ಮಾತನಾಡುವ ಧೈರ್ಯ ಇಲ್ಲ ಇಂತಹ ಕಾಲದಲ್ಲಿ ಸತ್ಯಾನಂದ ಎನ್ನುವವನು ತಾಯಿಯ ಕಷ್ಟವನ್ನು ಕೊನೆಗಾಣಿಸಬೇಕು ಎಂದು ಹಂಬಲಿಸುತ್ತಾನೆ. ನಾಡೇ ಕಾಡಾಗಿದ್ದ ಕಾಲದಲ್ಲಿ ಒಬ್ಬನ ಹಂಬಲದ ಧ್ವನಿ ಕೇಳುತ್ತಿದೆ. ನನ್ನ ಮನಸ್ಸಿನ ಇಷ್ಟ ಕೈಗೂಡುವುದಿಲ್ಲವೇ? ನಿಮ್ಮ ಅರ್ಥವಿದೆ. ಬಂಕಿಮರ ವರ್ಣನೆಯಲ್ಲಿ

1865 ರಲ್ಲಿ  ದುರ್ಗೇಶ ನಂದಿನಿ  ಕಾದಂಬರಿ 28 ವರ್ಷಗಳಲ್ಲಿ 13 ಬಾರಿ  ಅಚ್ಚಾಗಿತ್ತು. ಅಷ್ಟೊಂದು ಜನರಿಗೆ  ಹಿಡಿಸಿತ್ತು. ಅವರ ಪುಸ್ತಕ .

ವಿಷವೃಕ್ಷ ಎಂದರೆ  ವಿಷದ ಮರ  ಈ ಕಾದಂಬರಿಯಲ್ಲಿ ವಿಷದ ಮರ ಪ್ರತಿಯೊಬ್ಬ ಮನುಷ್ಯನಲ್ಲಿರುವ  ಸುಖದ ಆಸೆ ಮತ್ತು ಕೋಪ ಈ  ವಿಷದಮರ ಯಾರ ಮನಸ್ಸಿನಲ್ಲಾದರೂ ಬೆಳೆಯಬಹುದು ಮನಸ್ಸು ಗಟ್ಟಿಯಾಗಿದ್ದರೆ.  ಅಲ್ಲಿ ಬೆಳೆಯುವುದಿಲ್ಲ ಮನಸ್ಸು  ದುರ್ಬಲವಾಗಿದ್ದರೆ ಅಲ್ಲಿ ಬೆಳೆೆಯುತ್ತದೆ. ಮನಸ್ಸನ್ನು  ಗಟ್ಟಿ ಮಾಡಿ  ಕೊಳ್ಳದೆ ಇದ್ದರೆ ಆಸೆ ಮತ್ತು ಕೋಪಗಳನ್ನು  ತಡೆದುಕೊಳ್ಳದೆ ಹೋದರೆ ಆ ಮನುಷ್ಯನಿಗೂ ದುಃಖ ಇತರರಿಗೂ ದುಃಖ

ಅದೇ ರೀತಿ  ಕಪಾಲ ಕುಂಡಲಾ, ರಂಜನಿ ರಾಜಸಿಂಹ , ಮೃಣಾಲಿನಿ, ದೇವಿ ಚೌಧುರಾಣೀ ಮೊದಲಾದ ಅವರ ಕಾದಂಬರಿಗಳು ಜನಪ್ರೀಯ ವಾಗಿವೆ. ಶ್ರೀ ಕೃಷ್ಣ ಚರಿತ್ರೆ ಧರ್ಮ ತತ್ವ ದೇವತತ್ವ ಭಗವದ್ಗೀತೆಯ ಟೀಕೆ ಮೊದಲಾದ  ಪುಸ್ತಕಗಳನ್ನು ಬರೆದರು.

ದೇಶದ ಆಡಳಿತಕ್ಕೆ ಸಿಕ್ಕು ಸ್ವಾತಂತ್ರ್ಯ ವಿಲ್ಲದ  ಭಾರತೀಯ ರಲ್ಲಿ ಸ್ವಾತಂತ್ರ್ಯದ ಬಯಕೆಯನ್ನು  ಹುಟ್ಟಿಸಿದವರಲ್ಲಿ ಒಂದೇ ಮರ ಒಬ್ಬರು  ರಾಷ್ಟ್ತ್ರೀಯತ್ವ  ಎಂದರೇನು ಎಂದು ಅವರ ಲೇಖನಗಳು ತಿಳಿಸಿಕೊಟ್ಟವು.  ನಮ್ಮ ದೇಶಕ್ಕೆ ತಮ್ಮ ಕೀವಂತ ಕೊಡುಗೆಯಾಗಿ ನೀಡಿದ  ಮಹಾಸಾಹಿತ್ಯ ಶಿಲ್ಪಿಯಾಗಿದ್ದವು.

ಬಂಕಿಮರಿಗೆ ರಾಮಕೃಷ್ಣ ಪರಮಹಂಸರ  ಪರಿಚಯವಿತ್ತು ಬಂಕಿಮ ಎಂದರೆ ಬಾಗಿರುವುದು  ಹಾಸ್ಯನಾಗಿ ಯಾವುದು ನಿನ್ನನ್ನು  ಬಗ್ಗಿಸಿತು? ಎಂದು ಕೇಳಿದಾಗ ಬಂಕಿಮರು

ಬ್ರಿಟೀಷರ ಬೂಟಿನ ಹೊಡೆತ  ಎಂದರು ಇವರು 8 ಏಪ್ರೀಲ್ 1894 ರಲ್ಲಿ   ಮರಣ ಹೊಂದಿದರು.  ಕರ್ನಾಟಕದ ವೆಂಕಟಾಚಾರ್ಯರು ಇವರ ಕಾದಂಬರಿಗಳನ್ನು ಕನ್ನಡಕ್ಕೆ ಆನುವಾದಿಸಿದ್ದಾರೆ.

        ಎಂ.ವೈ. ಮೆಣಶಿನಕಾಯಿ

                ಬೆಳಗಾವಿ. ಮೊ: 9449209570

loading...

LEAVE A REPLY

Please enter your comment!
Please enter your name here