ಪದಾಧಿಕಾರಿಗಳ ಪದಗ್ರಹಣ

0
36

ಬಾಗಲಕೋಟೆ, 26-ಜೈಂಟ್ಸ್ ಅಂತರ್ರಾಷ್ಟ್ತ್ರೀಯ ಸಂಸ್ಥೆಯ 2012ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಫೆ. 26ರಂದು ಸಂಜೆ 6ಕ್ಕೆ ನಗರದ ಬಸವೇಶ್ವರ ವೃತ್ತದ ಬಳಿ ಇರುವ ವಿ.ಟಿ. ಗುಜ್ಜರ ಆವರಣದಲ್ಲಿ ನಡೆಯಲಿದೆ.

ಸಂಸ್ಥೆಯ 2012ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ ರಂಗರೇಜ್, ಕಾರ್ಯದರ್ಶಿಯಾಗಿ ನಿಕೇಶ ಗುಜ್ಜರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಪದಾಧಿಕಾರಿಗಳಿಗೆ ಜೈಂಟ್ಸ್ ಅಂತರ್ರಾಷ್ಟ್ತ್ರೀಯ ಸಂಸ್ಥೆಯ ಅಧ್ಯಕ್ಷೆ ಜ್ಯೌತಿ ವೆಂಕಟೇಶ ಅಧಿಕಾರವಹಿಕೊಡುವರು. ಬಿವಿವಿ ಸಂಘದ ಆರ್ಡಿಎಫ್ ಕಾರ್ಯ ನಿರ್ವಾಹ ನಿರ್ದೇಶಕ ಎಸ್.ವಿ. ಪಂಚಮುಖಿ, ಜೈಂಟ್ಸ್ ಸಂಸ್ಥೆಯ ಉಪಾಧ್ಯಕ್ಷೆ ತಾರಾದೇವಿ, ಅಧಿಕಾರ ಪ್ರದಾನ ಅಧಿಕಾರಿ ಬಸವರಾಜ ಪರ್ವತಿಮಠ ಪಾಲ್ಗೊಳ್ಳುವರು ಎಂದು ಸಂಸ್ಥೆಯ ಕಾರ್ಯದರ್ಶಿ ವೈಭವ ಬಾರ್ಸಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here