ಸುದ್ದಿಗೊಂದು ಚುಚ್ಚು ಮಾತು

0
33

ಈರಪ್ಪನ ಪತ್ನಿ ಮುತ್ತು ಲಕ್ಷ್ಮೀ ಶುಕ್ರವಾರ  ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಂಕರ ಬಿದರಿ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾಳೆ.

– ಸುದ್ದಿ

  ರಾಜ್ಯ ಶ್ರೇಷ್ಠ ನ್ಯಾಯಾಲಯ ಶಂಕರ ಬಿದರಿ ನೇಮಕಾತಿಯನ್ನು ರದ್ದು ಪಡಿಸಿದ್ದರ  ಗಾಳಿ ಬೀಸಿದ ಸಂದರ್ಭದಲ್ಲಿ ಮುತ್ತು ಲಕ್ಷ್ಮೀ ತನ್ನ ಕಾಳನ್ನು ತೂರಿಕೊಳ್ಳುವ ಕೆಲಸ ಮಾಡಿದ್ದಾಳೆ.

ಗುರುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದ ವಿಜಾಪೂರ ಶಾಸಕ ಅಪ್ಪು ಪಟ್ಟಣಶೆಟ್ಟಿ ಶುಕ್ರವಾರ ಉಲ್ಟಾ ಹೊಡೆದಿದ್ದಾರೆ.

-ಸುದ್ದಿ

  ರಾಜ್ಯ ಕಾರಣಿಗಳಿಗೆ ಯಾವ ರೀತಿ ಉಲ್ಟಾ ಹೊಡೆಯಬೇಕು ಎಂಬುದು ಚೆನ್ನಾಗಿ ಗೊತ್ತಿದೆ.

ಜಗಳ ಮಾಡದೆ ಬರ ಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡಿ ಎಂದು ರಾಜ್ಯ ಕೈ ನಾಯಕರಿಗೆ ಮೇಡಂ ಕಟ್ಟಪ್ಪಣೆ ಮಾಡಿದ್ದಾರೆ.                                                                                                                           -ಸುದ್ದಿ          

ಮೇಡಂ ಹೇಳಿರುವುದರಿಂದ ಅವರ ಮಾತಿಗೆ ಎಸ್ ಅನ್ನದೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬೇರೆ ಹಾದಿಯೇ ಇಲ್ಲ .

ಜೆಡಿಎಸ್ ನಾಯಕರು ಸಹ ಬರ ಪೀಡಿತ ಪ್ರದೇಶದಲ್ಲಿ ಸಂಚಾರ ಮಾಡಲು ಮುಂದಾಗಿ  ಪ್ರವಾಸ ಕಾರ್ಯಕ್ರಮ ರೂಪಿಸಿದ್ದಾರೆ.

– ಸುದ್ದಿ     

ಜನರ ಮುಂದೆ ಹೇಳಲು ಕಾರಣ ಇರಬೇಕೆಂಬ ಉದ್ದೇಶದಿಂದ ಎಲ್ಲ ರಾಜಕೀಯ ಪಕ್ಷಗಳು  ಪ್ರವಾಸಕ್ಕೆ ಮುಂದಾದಂತೆ ಕಾಣುತ್ತದೆ.

-ಸುದ್ದಿ

ಯಡಿಯೂರಪ್ಪ ಮೇಲೆ ಈಶ್ವರಪ್ಪ ಹಾಗೂ  ಮುಖ್ಯಮಂತ್ರಿ ಸದಾನಂದ ಗೌಡರು  ಎಂಟು ದೂರು ನೀಡಿ ವರಿಷ್ಠರಿಗೆ ಪತ್ರ ಬರೆದಿದ್ದರು.

-ಸುದ್ದಿ

ಯಡಿಯೂರಪ್ಪನವರಿಗೆ ಮುಖ್ಯ ಮಂತ್ರಿ ಸ್ಥಾನ ದೊರೆಯಬಾರದು ಎಂಬ ಉದ್ದೇಶದಿಂದ ಈ ಪತ್ರ ಬರೆದಂತೆ ಕಾಣುತ್ತದೆ.

ಸೈನಿಕನ ಪಾರ್ಥಿವ ಶರೀರದ ಮುಂದೆ  ಆತನ ಪತ್ನಿಗೆ  ಸೀಮಂತ ಮಾಡಲಾಗಿದೆ.                                                                                                                                                                               -ಸುದ್ದಿ

ಆತನ ಆತ್ಮ  ಸೀಮಂತ ನೋಡಿ ಕಣ್ಣು ತುಂಬಿಕೊಳ್ಳಲಿ ಎಂದು ಹೀಗೆ ಮಾಡಿರಬಹುದು.

ಚಿನ್ನದ ಮೇಲಿನ ತೆರಿಗೆ ಹೆಚ್ಚಳವನ್ನು ರದ್ದು ಮಾಡುವ ಭರವಸೆಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಬಂಗಾರ ಆಭರಣ ವರ್ತಕರಿಗೆ  ನೀಡಿದ್ದಾರೆ.                                                                                                                                                                                                       – ಸುದ್ದಿ

ಮೇಡಂ ಹೇಳಿದರೆ ಮುಗಿಯಿತು ಎಂದು ಖುಷಿಯಿಂದ ವರ್ತಕರು ತಮ್ಮ ಮುಷ್ಕರವನ್ನು  ಹಿಂದೆ ಪಡೆದಿದ್ದಾರೆ.

ಸಿದ್ದು ಮತ್ತು ಪರಮೇಶ್ವರ ನಡುವೆ ಬಿನ್ನಮತ ಉಂಟಾಗಿದ್ದು ಆ ಬಿನ್ನಮತಕ್ಕೆ ಮೇಡಂ ಮುಲಾಮು ಹಚ್ಚಿದ್ದಾರೆ.                                                                                                                                              -ಸುದ್ದಿ

ನಾನು ನೀತೀನ ಗಡ್ಕರಿ ಅಲ್ಲ ಎಂಬುದನ್ನು ಈ ಮೂಲಕ ಸೋನಿಯಾ ಗಾಂಧಿ ಕರ್ನಾಟಕದ ಜನರಿಗೆ ಸಾಬಿತು ಪಡಿಸಿದ್ದಾರೆ.

ಚಿತ್ರ ನೋಡಿದರೆ ಬರ ಗೊತ್ತಾಗುವುದೆ ಎಂದು ಜನರು ಕೇಳುತ್ತಿರುವ ಘಟನೆಗಳು  ನಡೆಯತೊಡಗಿವೆ.                                                                                                                                   -ಸುದ್ದಿ

ಯಪ್ಪಾ ಕೇಳಿ ಹೋಗಬೇಡಿ ನಮ್ಮ ಕಷ್ಟ ಅರಿತು ಅವುಗಳನ್ನು ಪರಿಹಾರ ಮಾಡಿ ಎಂದು ಜನರು ಗೋಳಾಡುತ್ತಿರುವಂತೆ  ಕಂಡು ಬರತೊಡಗಿದೆ.

 

loading...

LEAVE A REPLY

Please enter your comment!
Please enter your name here