ಮುತ್ತು ಲಕ್ಷ್ಮೀ ಬಾಂಬ್ಗೆ ಶಂಕರ ಪ್ರತಿ ಬಾಂಬ್

0
97

ಕಳೆದ ಶುಕ್ರವಾರ ಬೆಂಗಳೂರು ನಗರದಲ್ಲಿ  ಒಂದೇ ದಿನ ಬಾಂಬ್ ಮತ್ತು ಪ್ರತಿ ಬಾಂಬ್ಗಳು ಸಿಡಿದಿವೆ. ಮೊದಲ ಬಾಂಬನ್ನು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಸಿಡಿಸಿದರೆ ಅದಕ್ಕೆ ಪ್ರತಿಯಾಗಿ  ಮಾಜಿ ಪೋಲಿಸ ನಿರ್ದೇಶಕ ಶಂಕರ ಬಿದರಿ ಪ್ರತಿ ಬಾಂಬ್ ಸಿಡಿಸಿದ್ದಾರೆ.

ನರಹಂತಕ ವಿರಪ್ಪನ ವಿರುದ್ಧದ ಕಾರ್ಯಾಚರಣೆಯಲ್ಲಿ ಶಂಕರ ಬಿದರಿ ನೇತೃತ್ವದ  ಎಸ್ಟಿಎಫ್  ಸಿಬ್ಬಂದಿ ಅರಣ್ಯ ವಾಸಿಗಳ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ ಎಂಬ ಮಾಹಿತಿ ಶ್ರೇಷ್ಠ ನ್ಯಾಯಾಲಯದಲ್ಲಿ ಹೊರಬೀಳುತ್ತಿದ್ದಂತೆ ಈ ಆರೋಪಗಳು  ಸತ್ಯ ಎಂದು  ವೀರಪ್ಪನ ಪತ್ನಿ ಮುತ್ತುಲಕ್ಷ್ಮೀ ಬಾಂಬ್ ಸಿಡಿಸಿದ್ದಾಳೆ.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮುತ್ತು ಲಕ್ಷ್ಮೀ ವೀರಪ್ಪನ ಹತ್ಯೆಯ ನಂತರ ಇದೇ  ಮೊದಲ ಬಾರಿಗೆ ಕಾರ್ಯಾಚರಣೆ ನಡೆದ ಸಮಯದಲ್ಲಿ ತಮ್ಮ ಮೇಲೆ ದೌರ್ಜನ್ಯ ಮಾಡಲಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಬಿದರಿ ಹಾಗೂ ಅವರ ತಂಡದವರು ಅಮಾಯಕ ಮಹಿಳೆಯರ ಮೇಲೆ ಮೃಗೀಯವಾಗಿ ವರ್ತಿಸಿದ್ದಾರೆ. ಕಾರ್ಯಾಚರಣೆಯ ವೇಳೆಯಲ್ಲಿ ಮಲೆ ಮಹಾದೇಶ್ವರ ಬೆಟ್ಟದ ಬುಡಕಟ್ಟು ನಿವಾಸಿಗರು ಹಿಂದುಳಿದ ವರ್ಗ ದಲಿತ ಜನಾಂಗಕ್ಕೆ ಸೇರಿದ 15 ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಅಷ್ಟೇ ಅಲ್ಲ ಅವರನ್ನು ಬೆತ್ತಲೆ ಗೊಳಿಸಿ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಮುತ್ತುಲಕ್ಷ್ಮೀ ಗಂಭೀರ ಆರೋಪ ಮಾಡಿದ್ದಾರೆ.

ಬಿದರಿಯವರ ಆದೇಶದಂತೆ ಅವರ ಕೈ ಕೆಳಗಿನ ಅಧಿಕಾರಿಗಳು ನನ್ನನ್ನು ಎರಡು ವರ್ಷ ಕಾಲ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಿದ್ದಾರೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ .ಬಿದರಿಯವರು ಅಧಿಕಾರಿಗಳಿಂದ ನನಗೆ ವಿದ್ಯುತ್ ಶಾಕ್  ಕೊಡಿಸಿ ವಿಕೃತ ಆನಂದ ಪಡೆದಿದ್ದಾರೆ.  ನನ್ನ ಗಂಡ ಜೀವಂತ ವಿರುವಾಗಲೇ ನನ್ನ ಕತ್ತಿನಲ್ಲಿ ಇದ್ದ ತಾಳಿ ತೆಗೆಯುವಂತೆ ಬಲವಂತ ಮಾಡಿದ್ದರು. ನಾನು ಒಪ್ಪದೆ ಹೋದಾಗ ಅವರೇ ಬಲವಂತವಾಗಿ ತಾಳಿ ಕಿತ್ತು ಬಿಸಾಡಿದ್ದರು ಎಂದು ಆಕೆ ಆರೋಪಿಸಿದ್ದಾಳೆ.

ಎಸ್. ಟಿಎಫ್ ತಂಡದಿಂದ ಮಾನವ ಹಕ್ಕುಗಳ ಉಲ್ಲಂಘನೆ ಸಂಬಂಧ ನ್ಯಾಯಮೂರ್ತಿ ಸದಾಶಿವ ಆಯೋಗ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ತಾನು ತಮಿಳು ನಾಡು ಪೋಲಿಸರ ವಶದಲ್ಲಿ ಇದ್ದ ಕಾರಣ ವಿಚಾರಣೆಗೆ ಹಾಜರಾಗಲು ಸಾದ್ಯವಾಗಿರಲಿಲ್ಲ. ಅಲ್ಲದೆ  ಚನ್ನೈ ನ್ಯಾಯಾಲಯದಲ್ಲಿ ಈ ವಿಷಯ ಬಹಿರಂಗಗೊಳಿಸದಂತೆ ನನ್ನ ತಲೆಗೆ ಬಂದೂಕು ಹಿಡಿದು ಬಿದರಿಯವರು ಜೀವ ಬೆದರಿಕೆಹಾಕಿದ್ದರು. ಎಂದು ಆಕೆ ತಾನು ಇಲ್ಲಿಯವರೆಗೆ ಯಾಕೆ ಬಾಯಿ ಬಿಟ್ಟಿರಲಿಲ್ಲ ಎಂಬುದರ ಕುರಿತು ವಿವರಣೆ ನೀಡಿದ್ದಾರೆ.

ಮುತ್ತುಲಕ್ಷ್ಮೀ ಈ ಬಾಂಬ್ ಸಿಡಿಸಿದ ಕೆಲವೇ ಸಮಯದಲ್ಲಿ ಶಂಕ ಬಿದರಿ ಪತ್ರಿಕಾ ಗೋಷ್ಠಿ ಕರೆದು ಪ್ರತಿ ಬಾಂಬ್  ಸಿಡಿಸಿದ್ದಾರೆ.

ಈ ರಾಜ್ಯದಲ್ಲಿ ಸ್ಥಾಪಿತ ಹಿತಾಸಕ್ತಿ ಹೊಂದಿರುವ ಕೆಲವು ವ್ಯಕ್ತಿಗಳಿದ್ದಾರೆ. ನಾನು ರಾಜ್ಯ ಪೋಲಿಸ ಮಹಾ ನಿರ್ದೇಶಕನಾಗಿ ನೇಮಕಗೊಂಡಿದ್ದು ಅವರಿಗೆ ನುಂಗಲಾರದ ತುತ್ತಾಗಿತ್ತು. ನನ್ನ ವಿರುದ್ಧ ನ್ಯಾಯಾಲಯ ತೀರ್ಪು ನೀಡಿರುವ ಸಂದರ್ಭದಲ್ಲಿ ನನ್ನ ತೇಜೋವಧೆ ಮಾಡುವ ಉದ್ದೇಶದಿಂದ  ಆ ವ್ಯಕ್ತಿಗಳು ಮುತ್ತುಲಕ್ಷ್ಮೀ ಬೆಂಗಳೂ ರಿಗೆ ಕರೆದು ತಂದು ಹೇಳಿಕೆ ನೀಡಿಸಿ ದ್ದಾರೆ. ಇಂತಹ ಪ್ರಯತ್ನ ನಡೆಯುತ್ತಿರುವ ಬಗ್ಗೆ ಐದು ದಿನಗಳ ಹಿಂದೆಯೇ ನನಗೆ ಮಾಹಿತಿ ಬಂದಿತ್ತು ನಾನು ಉದ್ದೇಶಪೂರ್ವಕವಾಗಿ ಸುಮ್ಮನೆ ಇದ್ದೇ ಎಂದು ಶಂಕರ ಬಿದರಿ ಹೇಳಿದ್ದರು.

ರಾಜ್ಯಾಂಗಕ್ಕೆ ವಿರುದ್ಧವಾಗಿ ವಿರಪ್ಪನ್ ತನ್ನದೇ ಆದ ರಾಜ್ಯವನ್ನು ಕರ್ನಾಟಕ ಹಾಗೂ ತಮಿಳು ನಾಡಿನ ಗಡಿ ಭಾಗದಲ್ಲಿ ನಿರ್ಮಾಣ ಮಾಡಿಕೊಂಡು  ಎರಡೂ ರಾಜ್ಯಗಳಿಗೆ ಕಂಠಕ ಪ್ರಾಯನಾಗಿದ್ದ ಅದಕ್ಕಾಗಿ ಆತನ ವಿರುದ್ಧದ ಕಾರ್ಯಪಡೆಯ ಕಮಾಂಡರ ಆಗಲು ಯಾವದೇ ಪೋಲಿಸ ಅಧಿಕಾರಿ ಸಿದ್ದವಿರಲಿಲ್ಲ ಆಗ ಈಜಿ ದರ್ಜೆಯ ಹುದ್ದೆಯನ್ನು ಡಿಐಜಿ ದರ್ಜೆಗೆ ಹಿಂಬಡ್ತಿ ಮಾಡಿ ಸರಕಾರ ನನ್ನನ್ನು ಕಮಾಂತರ ಆಗಿ ಮಾಡಿ ಕಳಿಸಿತ್ತು. ಆ ಅವಧಿಯಲ್ಲಿ ನಾನು ಮತ್ತು ನನ್ನ ತಂಡದವರು  ನಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಅನುಭವಿಸಿದ ಕಷ್ಟಗಳನ್ನು ಹೇಳಲು ನಮ್ಮಲ್ಲಿ ಶಬ್ದಗಳೇ ಇಲ್ಲ. ನಮ್ಮ ಕಾರ್ಯಕ್ಕಾಗಿ ಕರ್ನಾಟಕ ರಾಜ್ಯ ನಮ್ಮ ಋುಣ ತೀತಿಸಲು ಸಾಧ್ಯವಿಲ್ಲ ಎಂದು ಬಿದರಿ ಹೇಳಿಕೊಂಡಿದ್ದಾರೆ.

ಪೋಲಿಸ ಅಧಿಕಾರಿಯಾಗಿ ನಾನು   ಕೆಲಸಕ್ಕೆ ಸೇರಿದ ದಿನವೇ ಈ ಜೀವ ನನ್ನದಲ್ಲ ಎ ನಿರ್ಧರಿಸಿದ್ದೆ ಪ್ರಾಣದ ಹಂಗು ತೊರೆದ ನನಗೆ ಈ ಡಿಜಿಪಿ ಹುದ್ದೆ ಮಹತ್ವದಲ್ಲ. ಆದರೂ ನಾನು  ಈ ಹುದ್ದೆಗೆ ಬರದಂತೆ ನಡೆಯುವುದಕ್ಕ  ಕೆಲವರು ಶಕ್ತಿ ಮೂರಿ  ಪ್ರಯತ್ನ ಮಾಡಿದ್ದಾರೆ. ಇದರ ಹಿಂದೆ ಇರುವವರು ಯಾರು ಎಂಬುದು ಈ ನಾಡಿನ ಪ್ರಜ್ಞಾವಂತನಿಗೆ ಗೊತ್ತು ಡಾ. ರಾಜಕುಮಾರ ಅವರನ್ನು ಅಪಹರಿಸಿದ ವೀರಪ್ಪನ್ ಅವರ ಬಿಡುಗಡೆಗಾಗಿ ಐದು ಕೋಟಿ ರೂಪಾಯಿ ಒತ್ತೆ ಹಣ ನೀಡುವಂತೆ ಕೇಳಿದ್ದ ಅಷ್ಟೇ ಅಲ್ಲ  ಶಂಕರ ಬಿದರಿ ತಲೆ ತಂದುಕೊಡಿ ಎಂದು ಕೇಳಿದ್ದ ಎಂದು ಬಿದರಿ ಹೇಳಿದ್ದರು.

ಪ್ರಚಲಿತ  -ಮಲ್ಲಣ್ಣ

loading...

LEAVE A REPLY

Please enter your comment!
Please enter your name here