ಶಭಕ್ತ ಮೈಲಾರ ಮಹಾದೇವ

0
1031

ಭಾರತದ ಸ್ವಾತಂತ್ರ್ಯ ಹೋರಾಟ ಹಲವು ಮಜಲುಗಳಲ್ಲಿ ನಡೆಯಿತು. 1857ರ ಸಿಪಾಯಿದಂಗೆಯಿಂದ ಆರಂಭವಾಗಿ ಚಲೇಜಾವ್ ಚಳುವಳಿವರೆಗೆ , ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಲವಾರು ದೇಶಭಕ್ತರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಎದೆಗೊಟ್ಟು ವೀರಸ್ವರ್ಗ ಸೇರಿದ್ದಾರೆ. ಅವರ ಹೆಸರುಗಳು ನಮ್ಮ  ಸ್ವಾತಂತ್ರ್ಯ ಇತಿಹಾಸದ ವೀರೋಚಿತ ಪುಟಗಳಲ್ಲಿ ಸೇರಿಕೊಂಡಿವೆ. ಅಂಥವರ ಸಾಲಿನಲ್ಲಿ ಮಹದೇವಪ್ಪ ಮೈಲಾರ ಒಬ್ಬರು. ಇದೇ ಎಪ್ರಿಲ್ 1 ಅವರು ಹುತಾತ್ಮರಾದ ದಿನ. ತನ್ನಿಮಿತ್ತ ಈ ಲೇಖನ.

ರಾಷ್ಟ್ತ್ರದ ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಹೋರಾಟಗಾರರ ಕೊಡುಗೆ  ಅವಿಸ್ಮರಣೀಯವಾದುದು. ಅವರಲ್ಲಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ಮೈಲಾರ ಮಹದೇವ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಮೈಲಾರರು ಈಗಿನ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ರೈತ ಕುಟುಂಬದಲ್ಲಿ ಮಾರ್ತಾಂಡಪ್ಪ ಮತ್ತು ಬಸಮ್ಮನವರ ಪುತ್ರರಾಗಿ 1911ರ ಜೂನ್ 8 ರಂದು ಜನಿಸಿದರು. ಸ್ವಾತಂತ್ರ್ಯಾಂದೋಲನದಲ್ಲಿ ಅವರ ತಾಯಿ ಬಸಮ್ಮ ಸೆರೆಮನೆವಾಸ ಅನುಭವಿಸಿದವರು. ತಾಯಿಯ ದೇಶಾಭಿಮಾನದ ಫಲವಾಗಿ ಬಾಲಕ ಮಹಾದೇವ ಅವಗೂ ದೇಶಭಕ್ತಿ ರಕ್ತಗತವಾಗಿ ಬಂದಿತು.

ಮೈಲಾರ ಮಹಾದೇವ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಅಂದಿನ ದಿನಗಳಲ್ಲೇ ಅಸಂಖ್ಯ ಹೋರಾಟಗಾರರಿಗೆ ಸ್ಪೂರ್ತಿಯ ಮಾತಾಗಿತ್ತು. ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಆ ದಿನಗಳಲ್ಲಿ ಮೈಲಾರರು ಮನೆ, ಮಠ, ಕುಟುಂಬ, ಊರು-ಕೇರಿ, ಎಲ್ಲ ತೊರೆದು, ಶಾಲೆಗೆ ಶರಣು ಹೊಡೆದು ಅಪ್ರತಿಮ  ಹೋರಾಟ ನಡೆಸಿದರು.

ಹೋರಾಟಕ್ಕೆ ಪ್ರೇರಣೆ: ಮಹದೇವ ಅವರು ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಮೋಟೆಬೆನ್ನೂರಿನಲ್ಲೇ ಆಯಿತು. ಮೈಲಾರರು ಹಿರಿಯ ದೇಶಭಕ್ತರೊಬ್ಬರ ಭಾಷಣ ಕೇಳಿ ತನ್ನ ತಲೆ ಮೇಲಿನ ವಿದೇಶಿ ಟೊಪ್ಪಿಗೆ ತೆಗೆದು ನೆಲಕ್ಕೆಸೆದರಂತೆ. ಈ ಘಟನೆಯೇ ಅವರ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾದ ಮೊದಲ ಹೆಜ್ಜೆಯಾಯಿತು. ಗಾಂಧೀಜಿಯವರ ಖಾದಿ ಪ್ರಸಾರದ ಸಂದೇಶದಂತೆ ಖಾದಿ ಬಟ್ಟೆಯನ್ನು ತಲೆಮೇಲೆ ಹೊತ್ತು ಮಾರಾಟ ಮಾಡಲು ಪ್ರಾರಂಭಿಸಿದ ತರುಣ ಮೈಲಾರ, ಧಾರವಾಡಕ್ಕೆ ಹೋಗಿ ಅಲ್ಲಿ ಲಿಭಾರತೀಯ ತರುಣ ಸಂಘಳಿ ಸೇರಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಅವರ ಮನಸ್ಸು ಗಾಂಧೀಜಿಯ ಸಾನಿಧ್ಯವನ್ನು ಬಯಸಿತ್ತು. ಆ ಕನಸು ಈಡೇರಿತು ಕೂಡ.

ಗಾಂಧೀಜಿಯವರಿಂದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಲು ಹತ್ತೊಂಬತ್ತರ ಹರೆಯದ ಮೈಲಾರ ಮಹದೇವರಿಗೆ ಅವಕಾಶ ದೊರೆಯಿತು. 1930ರ ಮಾರ್ಚ್ 12 ರಂದು ದಿನ ಮಹಾತ್ಮ ಗಾಂಧೀಯವರು ತಾವೇ ಆರಿಸಿಕೊಂಡ 78 ಸೇನಾನಿಗಳೊಂದಿಗೆ ಸಾಬರಮತಿಯಿಂದ ಉಪ್ಪಿನ ಸತ್ಯಾಗ್ರಹಕ್ಕಾಗಿ ದಾಂಡೀ ಯಾತ್ರೆ ಆರಂಬಿಸಿದರು. ಈ ತಂಡದಲ್ಲಿ ಕರ್ನಾಟಕದ ಏಕಮೇವ ಪ್ರತಿನಿಧಿಯಾಗಿದ್ದವರು ಮೈಲಾರ ಮಹಾದೇವ. ಸುಮಾರು 241 ಮೈಲಿ(385.6 ಕಿ.ಮೀ) ದೂರದ ಧಾಂಡಿಯನ್ನು 25 ದಿನಗಳ ಪಾದಯಾತ್ರೆಯಲ್ಲಿ ಗಾಂಧೀ ಸೇರಿದಂತೆ ಅಪ್ರತಿಮ ಹೋರಾಟಗಾರರೊಂದಿಗೆ ಸಾಗಿ ಉಪ್ಪನ್ನು  ಎತ್ತಿಕೊಂಡು ಕಾಯ್ದೆ ಭಂಗ ಚಳುವಳಿಗೆ ಅವರೂ ಸಾಕ್ಷಿಯಾದರು. ಇದಕ್ಕಾಗಿ ಗಾಂಧೀಜಿಯೊಂದಿಗೆ ಮೈಲಾರ ಮಹಾದೇವರಿಗೂ 6 ತಿಂಗಳ ಕಾರಾಗೃಹ ಶಿಕ್ಷೆಯಾಯಿತು. ತೀರಾ ಚಿಂತೆಯಲ್ಲಿದ್ದ ಮನೆಯವರಿಗೆ ಜೈಲಿನಿಂದಲೇ ಲಿಈ ಅವಕಾಶ ದೊರತದ್ದು ನನ್ನ ಸೌಭಾಗ್ಯಳಿ ಎಂದು ಅವರು ಪತ್ರ ಬರೆದರು. ಮೈಲಾರರು ಜೈಲಿನಿಂದ ಬಿಡುಗಡೆಗೊಂಡು ಮರಳಿ ತಾಯ್ನಾಡಿಗೆ ಬಂದಾಗ ಅವರಿಗೆ ಧಾರವಾಡ, ಮೋಟೆಬೆನ್ನೂರುಗಳಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ನಂತರ ಬಾರ್ದೌಲಿಗೆ ಪತ್ನಿ ಸಿದ್ದಮ್ಮನ ಸಮೇತ ಪ್ರಯಾಣ ಬೆಳೆಸಿ ಆಕೆಗೂ ಮಹಾತ್ಮರಿಂದ ರಾಷ್ಟ್ತ್ರದೀಕ್ಷೆ ಕೊಡಿಸಿದರು.

ಅಲ್ಲಿಂದ ಸಿದ್ದಮ್ಮಳಿಗೆ ಸಾಬರಮತಿ ಆಶ್ರಮಕ್ಕೆ ಹೋಗಲು ಗಾಂಧೀಜಿಯವರ ಅಪ್ಪಣೆ ದೊರೆಯಿತು. 1932-33ರ ಲಿಅಸಹಕಾರ ಹಾಗೂ ಕಾಯ್ದೆಭಂಗ ಚಳುವಳಿಯಲ್ಲಿಳಿ ಭಾಗವಹಿಸಿದ್ದಕ್ಕಾಗಿ ಸಿದ್ದಮ್ಮನಿಗೂ 6 ತಿಂಗಳ ಜೈಲು ಶಿಕ್ಷೆಯಾಗಿ ಅಹಮದಾಬಾದಿಗೆ ಕಳಿಸಲ್ಪಟ್ಟಳು. ಕರ್ನಾಟಕಕ್ಕೆ ಮರಳಿ ಬಂದು ಚಳುವಳಿ ನಡೆಸಿದ್ದರಿಂದ ಮಹಾದೇವರಿಗೂ ಶಿಕ್ಷೆಯಾಗಿ ಹಿಂಡಲಗಾ ಜೈಲಿಗೆ ತಳ್ಳಲ್ಪಟ್ಟರು.

ನಾಲ್ಕಾರು ಬಾರಿ ಕಾರಾಗೃಹಕ್ಕೆ ಹೋಗಿ ಬಂದರೂ ಮಹಾದೇವಪ್ಪನವರು ಹೊರಗಿದ್ದಾಗಲೆಲ್ಲ ಖಾದಿ ಪ್ರಚಾರ, ದಲಿತೋದ್ದಾರ ಮುಂತಾದ ಗಾಂಧೀ ಪ್ರಣೀತ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದರು. ಇದಕ್ಕಾಗಿ  ಇಂದಿನ ಹಾವೇರಿ ಜಿಲ್ಲೆಯ ಕೊರಡೂರಿನಲ್ಲಿ ತಮ್ಮದೇ ಆದ ಒಂದು ಗ್ರಾಮ ಸೇವಾಶ್ರಮವನ್ನು (1937) ಪ್ರಾರಂಭಿಸಿದರು. ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವ ಮೈಲಾರ ಮಹಾದೇವರದ್ದಾಗಿತ್ತು. ಬಡಜನರ ಶೋಷಣೆ ಸಹಿಸದ ಮೈಲಾರರು, ರೈತರಿಂದ ಸರ್ಕಾರ ಕಂದಾಯವನ್ನು ಬಲಾತ್ಕಾರವಾಗಿ ವಸೂಲಿಮಾಡಿ ಸಂಗ್ರಹಿಸಿಟ್ಟಿದ್ದನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರಕ್ಕೆ ತೊಂದರೆ ಕೊಡುವ ಕಾರ್ಯದಲ್ಲಿ ಸಂಗಡಿಗರೊಂದಿಗೆ ಅನಿವಾರ್ಯವಾಗಿ ತೊಡಗಿದರು. ಇದಕ್ಕಾಗಿ ಹಲವಾರು ವಿಧ್ವಂಸಕ ಕೃತ್ಯಗಳನ್ನು ಕೈಕೊಂಡು ಬ್ರಿಟಿಷರ ಆಡಳಿತಯಂತ್ರ ನಿಷ್ಟ್ತ್ರಿಯವಾಗುವಂತೆ ಮಾಡಲು ಪ್ರಯತ್ನಿಸಿದರು. 1943ರ ಎಪ್ರಿಲ್  ಒಂದರಂದು ಮೈಲಾರರು, ಬೆಳಿಗ್ಗೆ ಹೊಸರಿತ್ತಿ ಕಂದಾಯ ವಸೂಲಿ ಕಚೇರಿಯ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಂಡರು.

ನಿಗದಿಪಡಿಸಿದಂತೆ ಮಹಾದೇವಪ್ಪ ತಮ್ಮ ತಂಡದ ವೀರಯೋಧರಾದ ತಿರಕಪ್ಪ ಮತ್ತು ವೀರಯ್ಯ ಮತ್ತಿತರರೊಂದಿಗೆ  ಜಯಘೋಷ ಹಾಕುತ್ತಾ ಕಂದಾಯ ಕಚೇರಿಗೆ (ವೀರಭದ್ರ ದೇವಸ್ಥಾನ) ಮುತ್ತಿಗೆ ಹಾಕಿದಾಗ ಬೆಳಗಿನ 8 ಗಂಟೆ. ಕಂದಾಯ ಹಣ ರಕ್ಷಣೆಗಾಗಿ ಬಂದಿದ್ದ ನಾಲ್ವರು ಸಶಸ್ತ್ತ್ರ ಪೊಲೀಸರನ್ನು ತನ್ನ  ತೆಕ್ಕೆಯಲ್ಲಿ ಅಮುಕಿ ಹಿಡಿದ ಮಹಾದೇವಪ್ಪ, ಪಕ್ಕದಲ್ಲಿದ್ದ ಕಿರು ಖಜಾನೆಗೆ ಕೈ ಹಾಕಿ, ಬೀಗ ಮುರಿಯತೊಡಗಿದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಗರ್ಭ ಗುಡಿಯಲ್ಲಿ ಅವಿತು ಕುಳಿತಿದ್ದ ಇಬ್ಬರು ಪೊಲೀಸರು ನೇರವಾಗಿ ಅವರ ಎದೆಗೇ ಗುಂಡು ಹಾರಿಸಿದರು. ಮಹಾದೇವಪ್ಪ ರಕ್ತದ ಮಡುವಿನಲ್ಲಿಬಿದ್ದು ಹೊರಳಾಡತೊಡಗಿದ, ಉಳಿದ ವೀರರು ಪೊಲೀಸರತ್ತ ಗುಂಡು ಹಾರಿಸಲು ತಯಾರಾದರೂ. ಮಹಾದೇವಪ್ಪ  ಶಿನಮ್ಮದು ಗಾಂಧೀ ಪ್ರಣೀತ ಅಹಿಂಸಾತ್ಮಕ ಹೋರಾಟ, ಪೊಲೀಸರನ್ನು ಕೊಲ್ಲದಿರಿ, ಹಿಂಸೆ ಮಾಡದಿರಿಳಿ ಎಂದು ಹೇಳುತ್ತಲೇ ವೀರಸ್ವರ್ಗ ಸೇರಿದ.

ಸಾರ್ಥಕ ಬದುಕು ಬದುಕಿದ 32 ವರ್ಷದ (1911-1943) ಯುವಕ ಮೈಲಾರ ಮಹದೇವ ಆವರು ತಮ್ಮ ನಿಸ್ವಾರ್ಥ, ಸರಳತೆ, ರಾಷ್ಟ್ತ್ರ ಪ್ರೇಮ ಮತ್ತು ಸಮಾಜ ಸೇವಾಕಾರ್ಯಗಳನ್ನು ತನ್ನ ಜೀವನದ ಧ್ಯೇಯವನ್ನಾಗಿ ಅಳವಡಿಸಿಕೊಂಡು ಗಾಂಧೀಜಿ ಅವರ ಮಾರ್ಗದಲ್ಲಿ ನಡೆದು ನಮ್ಮ ಯುವ ಜನಾಂಗಕ್ಕೆ ಬಹುದೊಡ್ಡ ಆದರ್ಶಗಳನ್ನು ಹಾಕಿಕೊಟ್ಟು ಹುತಾತ್ಮರಾಗಿದ್ದಾರೆ. ಮೈಲಾರ ಮಹಾದೇವಪ್ಪ ಅವರು ಜನಿಸಿ ಒಂದು ಶತಮಾನವಾಗಿದ್ದರೂ ಇಂದಿಗೂ ಅವರ ಬದುಕಿನ ಮೌಲ್ಯಗಳು ಯುವ ಜನಾಂಗಕ್ಕೆ ಪ್ರಸ್ತುತವಾಗಿವೆ.

ಮನೆಮಾತಾದ ಮೈಲಾರ:  ಮೈಲಾರ ಮಹದೇವಪ್ಪ  ಬ್ರಿಟಿಷರ ಗುಂಡೇಟಿಗೆ ಅಸುನೀಗಿದ ಸುದ್ದಿ ಅಂದು ದೇಶದಲ್ಲಿ ದೊಡ್ಡ ಸುದ್ದಿಯೇ ಆಯಿತು. ಆಗ, ಮಹಾತ್ಮಾಗಾಂಧಿ ಅವರು ಈ ವೀರ ಕುವರನ ಸಾವಿಗೆ ಕಂಬನಿ ಮಿಡಿದು, ಮಮ್ಮಲ ಮರುಗಿದ್ದರಂತೆ. ಹಾವೇರಿ ಜಿಲ್ಲೆಯವರೇ ಆದ, ರಾಣೇಬೆನ್ನೂರಿನ ಲಾವಣಿಕಾರ ಸಮ್ಮದಸಾಹೇಬ ಅವರು ಸ್ವಾತಂತ್ರ್ಯ ಹೋರಾಟದ ಕತೆಯನ್ನು ಲಾವಣಿಗಳ  ಮೂಲಕ ಹಾಡಿ, ಆನೆಯನ್ನು ಗಿರುಗನ್ನಡಿಯಲ್ಲಿ ತೋರಿಸಿದಂತೆ, ಅಂದಿನ ಸ್ವಾತಂತ್ರ್ಯದ ಕಿಚ್ಚು ಹೇಗಿತ್ತೆಂಬುದನ್ನು ಲಾವಣಿಯಲ್ಲಿ ಜೀವಂತವಾಗಿ ಉಳಿಸಿದ್ದಾರೆ.

ಮೈಲಾರ ಮಹದೇವ ಅವರು ಹೊಸರಿತ್ತಿಯ ಚಾವಡಿ ಲೂಟಿಗೆ ಹೋದಾಗ ದೇವಸ್ಥಾನದಲ್ಲಿ ತನ್ನ ಸಂಗಡಿಗರಾದ ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠರೊಂದಿಗೆ ಗುಂಡಿಗೆ ಬಲಿಯಾದ ಪ್ರಸಂಗವನ್ನು ಸಮ್ಮದ ಸಾಹೇಬರು ಶಿಕಾಂತನ ಕಳಕೊಂಡು ಕಾಮಿನಿ ಹಾಂಗ ಭಾರತ ಹಾಕುತ್ತಿತ್ತ ಕಣ್ಣೀರಷಿ ಎಂದು ಉದ್ಘಾರ ತೆಗೆದಿದ್ದಾರೆ. ಈ ಹಾಡು, ಇಂದಿಗೂ ಈ ನಾಡಿನ ಜನಪದರ  ಬಾಯಲ್ಲಿ ನಿತ್ಯವೂ ನಲಿದಾಡುತ್ತಿದೆ.

ಹುತಾತ್ಮರಿಗೆ ಸ್ಮಾರಕ: ಮೈಲಾರರು ಹಾವೇರಿ ಜಿಲ್ಲೆಯವರಾದ್ದರಿಂದ ಅವರ ಹೆಸರಿನಲ್ಲಿ ಹಾವೇರಿಯ ಹೊರವಲಯದಲ್ಲಿ ಸುಂದರ ಸ್ಮಾರಕ ಶೀವೀರಸೌಧಷಿ ತಲೆಯತ್ತಿದೆ. ಈ ಸ್ಮಾರಕದಲ್ಲಿ ಮೈಲಾರ ಮತ್ತು ಅವರ ಸಂಗಡಿಗರಾಗಿ ಅವರೊಂದಿಗೆ ಮಡಿದ ತಿರಕಪ್ಪ ಹಾಗೂ ವೀರಯ್ಯರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಈ ಹುತಾತ್ಮರ ಹೋರಾಟದ ನೆನಪನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹಾವೇರಿ ಕೇಂದ್ರ ಸ್ಥಾನದಲ್ಲಿ ಹುತಾತ್ಮ ಮೈಲಾರಪ್ಪನವರ ರಾಷ್ಟ್ತ್ರೀಯ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಗಿದೆ. ಈ ಟ್ರಸ್ಟ್ ಕಳೆದ ವರ್ಷದಿಂದ ಹಾವೇರಿಯಲ್ಲಿ ಈ ಹೋರಾಟಗಾರನ ನೆನಪಿಗಾಗಿ ಉಪನ್ಯಾಸ ಹಾಗೂ ಕವಿಗೋಷ್ಠಿಗಳನ್ನು ಏರ್ಪಡಿಸುತ್ತಿದೆ. ಈ ವರ್ಷ  ಅವರ ಜನ್ಮಶತಮಾನೋತ್ಸವವಾಗಿರುವ ಹಿನ್ನೆಲೆಯಲ್ಲಿ, ಇದೇ ಎಪ್ರಿಲ್ 6 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದಿಯಾಗಿ ಹಲವಾರು ಲೇಖಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೈಲಾರರು ಹುತಾತ್ಮರಾದ ಎಪ್ರಿಲ್ ಒಂದರಂದು ಹಾವೇರಿಯಲ್ಲಿ ಅವರ ಸ್ಮಾರಕದೆದುರು ಉಪನ್ಯಾಸ, ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನ ಹಾಗೂ ನಗರದ ರಂಗ ಮಂದಿರದಲ್ಲಿ ನಾಟಕ ಕಾರ್ಯಕ್ರಮಗಳು ಏರ್ಪಾಡಾಗಿವೆ.

ರಾಜ್ಘಾಟ್ ಮಾದರಿ: ಮಹದೇವ ಟ್ರಸ್ಟ್ಗೆ ಸರ್ಕಾರ ಕಳೆದ ವರ್ಷ 12 ಹಾಗೂ ಈ ವರ್ಷ 6 ಲಕ್ಷ ರೂ.ಗಳನ್ನು ನೀಡಿದ್ದು, ಹಾವೇರಿಯ ವೀರಸೌಧವನ್ನು ದೆಹಲಿಯ ರಾಜ್ಘಾಟ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಲು ಚಿಂತನ ನಡೆದಿದೆ. ಮಹದೇವ ಮೈಲಾರ ಅವರ  ಕುರಿತು ಲಭ್ಯವಿರುವ ಸಾಹಿತ್ಯಾಕೃತಿಗಳನ್ನು ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ. ವೀರಸೌಧದ ಎದುರಿಗೆ ನಿರ್ಮಿಸಲಾಗಿರುವ 75 ಲಕ್ಷ ರೂ.ಗಳ ಸ್ಮಾರಕ ಭವನದ 2ನೇ ಹಂತದ ಕಾಮಗಾರಿಗೆ ಸರ್ಕಾರ ಮತ್ತು 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಇಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಇಡಿಯಾಗಿ ಇಂದಿನ ಜನಾಂಗಕ್ಕೆ ನೀಡುವ ಪ್ರಯತ್ನ ನಡೆಯಲಿದೆ. ಲೇಖಕ ವಿ.ಚ.ಹಿತ್ತಲಮನಿ ಅವರು ಬರೆದ ಮೈಲಾರ ಮಹದೇವರ ಜೀವನ ಚರಿತ್ರೆ ಮುದ್ರಣ ಗೊಂಡಿದ್ದು, ಇಷ್ಟರಲ್ಲೇ ಬೆಳಕು ಕಾಣಲಿದೆ.

ಗಾಂಧೀಜಿಯವರ ಸಾಬರಮತಿ ಆಶ್ರಮದ ಮಾದರಿಯಲ್ಲಿ ಮೈಲಾರರು ಅಭಿವೃದ್ದಿಪಡಿಸಿದ್ದ ಕೊರಡೂರು  ಆಶ್ರಮವನ್ನು ಪುರ್ನನಿರ್ಮಾಣಮಾಡುವ ಚಿಂತನೆ  ನಡೆದಿದ್ದು, ಇದು ಸಾಕಾರಗೊಂಡಲ್ಲಿ ಹಾವೇರಿಯ ವೀರಸೌಧ, ಭಾರತ  ಸ್ವಾತಂತ್ರ್ಯದ ಇತಿಹಾಸ ಸಾರುವ ಮಹತ್ವದ ಸ್ಥಳವಾಗಬಲ್ಲುದು. ಹಾವೇರಿಗೆ ಹತ್ತಿರದಲ್ಲೇ ಇರುವ ಕರ್ಜಗಿಯಲ್ಲಿ ಗಾಂಧೀ ಚಿತಾಭಸ್ಮವುಳ್ಳ ಸ್ಮಾರಕದ ಅಭಿವೃದ್ದಿ ಕಾರ್ಯವನ್ನು ಸರ್ಕಾರ ಮಹದೇವ ರಾಷ್ಟ್ತ್ರೀಯ ಸ್ಮಾರಕ ಟ್ರಸ್ಟ್ಗೆ ವಹಿಸಿದ್ದು, ಇಲ್ಲಿ ಗಾಂಧೀ ಪ್ರತಿಮೆ ಸ್ಥಾಪನೆಗೊಳ್ಳಲಿದೆ.

ಇದಲ್ಲದೆ, ಮೈಲಾರರು ಅಸುನೀಗಿದ ಸ್ಥಳ ಹೊಸರಿತ್ತಿಯಲ್ಲಿ ಅವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣದ ಅಂತಿಮ ಹಂತದಲ್ಲಿದ್ದು, ಅವರ ಹುಟ್ಟೂರಾದ ಮೋಟೆಬೆನ್ನೂರಿನಲ್ಲಿ ಒಂದು ಕೋಟಿ ರೂ. ವೆಚ್ಚದ ಸ್ಮಾರಕ ಭವನ ಈಗಾಗಲೇ ತಲೆಯೆತ್ತಿದೆ. ಹುತಾತ್ಮ ಮೈಲಾರರ ನೆನಪನ್ನು ಜನ ಮನದಲ್ಲಿ ಚಿರಸ್ಥಾಯಿಯಾಗಿಸಲು ಸರ್ಕಾರದ ಸಂಕಲ್ಪ ಮೆಚ್ಚುವಂಥದ್ದು.

ಸಿ.ಪಿ.ಮಾಯಾಚಾರಿ

ಜಿಲ್ಲಾ ವಾರ್ತಾಧಿಕಾರಿ, ಗದಗ

loading...

LEAVE A REPLY

Please enter your comment!
Please enter your name here