ಅಪ್ರತಿಮ ವೀರ ಛತ್ರಪತಿ ಶಿವಾಜಿ

0
1443

ಪ್ರಜಾಹಿತ ರಕ್ಷಕ, ಹಿಂದುತ್ವ ರಕ್ಷಕ, ರಾಷ್ಟ್ತ್ರಪ್ರೇಮಿ, ನ್ಯಾಯವಂತ, ಸುಸಜ್ಜಿತ ನೌಕಾದಳ ಮತ್ತು ಕರ್ತವ್ಯ ದಕ್ಷ, ಧರ್ಮಶ್ರದ್ದೆ ಮತ್ತು ಭಾಷಾ ಶುದ್ದಿಯನ್ನು ಪುರಸ್ಕರಿಸುವ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ರಾಜಸಿಂಹಾಸನ ದೊರಕಿಸಿಕೊಟ್ಟಿದ್ದು ಅವಿಸ್ಮರಣೀಯ. ಶಿಸಾಮ್ರಾಜ್ಯ ತನಗಾಗಿ ಅಲ್ಲ. ಧರ್ಮಕ್ಕಾಗಿಷಿ ಎಂಬುದು ಶಿವಾಜಿಯ ವಾದ. ಶತ್ರುವನ್ನು ಸರಿಯಾಗಿ ಗ್ರಹಿಸಿ ತಕ್ಕಪಾಠ ಕಲಿಸಿದವನು ಶಿವಾಜಿ. ಕತ್ತಿಗೆ ಕತ್ತಿ ಇವನ ಸೂತ್ರವಾಗಿತ್ತು. ದಿ.23 ರಂದು ಶಿವಾಜಿ ಜಯಂತಿ ಆಚರಣೆಯ ನಿಮಿತ್ತ ಈ ಲೇಖನ.

ಕ್ರಿ.ಶ. 1627 ರಲ್ಲಿ ಶಿವಾಜಿಯು ಪುಣೆಯ ಶಿವನೇರಿ ದುರ್ಗ ಎಂಬಲ್ಲಿ ಜನಿಸಿದನು.  ಇವರ ತಂದೆ ಷಾಜಿ ಭೋಂಸ್ಲೆ. ತಾಯಿ ಜೀಜಾಬಾಯಿ. ಇವನ ತಂದೆಯು ಬಿಜಾಪುರ ಸುಲ್ತಾನನ ಬಳಿ ಉನ್ನತ ಹುದ್ದೆಯಲ್ಲಿರುದ್ದರಿಂದ ತಾಯಿ ಜೀಜಾಬಾಯಿ ಇವನ ಭವಿಷ್ಯ ರೂಪಿಸಿದರು. ಅವಳು ಶಿವಾಜಿಗೆ ಜೀವನ ಮೌಲ್ಯಗಳ ಶಿಕ್ಷಣವನ್ನಿತ್ತಳು.  ಶಿವಾಜಿಯ ಗುರು ದಾದಾಜಿ ಕೊಂಡದೇವ ಶಸಾ್ತ್ರಸ್ತ್ತ್ರ ವಿದ್ಯೆ ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಹಿಂದೂಧರ್ಮ ಪುನರುಜ್ಜೀವನಗೊಳಿಸಬೇಕು, ಶಿಹೈಂಧವೀ ಸ್ವರಾಜ್ಯ ಶಿಕಟ್ಟಬೇಕೆಂಬ ಆಕಾಂಕ್ಷೆಯಿಂದ ಮರಾಠ ಮುಖಂಡರನ್ನು ಮತ್ತು ಪಶ್ವಿಮ ಘಟ್ಟಗಳ ಮಾವಳರೆಂಬ ದೃಢಕಾಯದ ಗಿರಿಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದನು. ಶಿವಾಜಿಯು ಸಂತ ರಾಮದಾಸರ ಪರಮ ಭಕ್ತನಾಗಿದ್ದನು. ಬಾಲಕನಾಗಿದ್ದಾಗ ಶಿವಾಜಿಯು ಕೆಲವು ದಿನ ಬೆಂಗಳೂರಿನಲ್ಲಿ ತನ್ನ ತಂದೆಯ ಜಹಗೀರಿನಲ್ಲಿ ನೆಲೆ ನಿಂತಿದ್ದನು. ವಿಜಯನಗರದ ಮಾಂಡಲಿಕ ಕೆಂಪೇಗೌಡರ ರಾಜ್ಯ ಷಾಜಿಯ ವಶಕ್ಕೆ ಬಂದಿತ್ತು.

ದೇವಿ ಅಂಭಾಭವಾನಿಯಿಂದ ಅನುಗ್ರಹಿತನಾಗಿದ್ದ ಶಿವಾಜಿಯು ಶಸಾ್ತ್ರಸ್ತ್ತ್ರಗಳಲ್ಲಿ ಅಪ್ರತಿಮ  ವೀರನಾಗಿದ್ದನು. ಅವನು ತನ್ನ 19ನೇ ವಯಸ್ಸಿನಲ್ಲಿ ತೋರಣದುರ್ಗವನ್ನು ವಶಪಡಿಸಿಕೊಂಡು, ನಂತರ ರಾಯಗಡ (ಕ್ರಿ.ಶ 1646), ಚಾಕಣ್, ಸಿಂಹಗಡ, ಪುರಂದರಗಡವನ್ನು ವಶಪಡಿಸಿಕೊಂಡನು. ಈ ಎಲ್ಲಾ  ಪ್ರದೇಶಗಳೂ ಬಿಜಾಪುರ ಸುಲ್ತಾನರ ಸುಲ್ತಾನ ಸಾಮ್ರಾಜ್ಯದ ವ್ಯಾಪ್ತಿಯೊಳಗಿತ್ತು. ಕ್ರಿ.ಶ. 1656 ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ ಕೋಟೆಯ ಪ್ರದೇಶಗಳನ್ನು ವಶಪಡಿಸಿಕೊಂಡನು.  ಶಿವಾಜಿಯ ದಾಳಿಗಳು ಬಿಜಾಪುರ ಸುಲ್ತಾನನಿಗೆ ಕೋಪ ತರಿಸಿತು. ಶಿವಾಜಿಯನ್ನು ನಿಗ್ರಹಿಸಲು ಕ್ರಿ.ಶ. 1659 ರಲ್ಲಿ ತನ್ನ ದಂಡನಾಯಕ ಅಫಜಲಖಾನನ ನೇತೃತ್ವದಲ್ಲಿ ಬಹುದೊಡ್ಡ ಸೈನ್ಯವನ್ನು ಕಳುಹಿಸಿದನು.  ಪ್ರತಾಪಗಡದ ಬಳಿಯ ವಾಯಿ ಎಂಬಲ್ಲಿ ಶಿವಾಜಿಯು ಅಫ್ಜಲಖಾನ್ನನ್ನು ಮಾತುಕತೆಗೆ ಕರೆದು ಉಪಾಯದಿಂದ ಕೊಂದನು.

ಆಡಳಿತ: ಶಿವಾಜಿಯ ಆಡಳಿತದಲ್ಲಿ ಸಹಾಯ ಮಾಡಲು ಅಷ್ಟಪ್ರಧಾನರೆಂಬ ಎಂಟು ಜನ ಮಂತ್ರಿಗಳ ಒಂದು ಮಂಡಳಿಯಿದ್ದು, ಮುಖ್ಯಮಂತ್ರಿಯನ್ನು ಪೇಶ್ವೆ ಎಂದು ಕರೆಯಲಾಗುತ್ತಿತ್ತು.     ಭೂಕಂದಾಯವೇ ರಾಜ್ಯದ ಪ್ರಮುಖ ಆದಾಯವಾಗಿತ್ತು. ರೈತರೇ ನೇರವಾಗಿ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುವ ಪದ್ಧತಿ ರೂಢಿಯಲ್ಲಿತ್ತು.  ಅಧಿಕಾರಿಗಳಿಗೆ ವೇತನವನ್ನು ಹಣದ ರೂಪದಲ್ಲಿ ನೀಡಲಾಗುತ್ತಿತ್ತು.  ಜಾಗೀರು ನೀಡುತ್ತಿರಲಿಲ್ಲ.  ಉದ್ಯೌಗ ನೇಮಕಾತಿಯಲ್ಲಿ ಅರ್ಹತೆಯು ಮಾನದಂಡವಾಗಿತ್ತು.  ಶಿವಾಜಿಯು ಕಟ್ಟುನಿಟ್ಟಿನ ಆಡಳಿತ ಪದ್ಧತಿಯನ್ನು ಜಾರಿಗೆ ತಂದಿದ್ದನು. ಶತ್ರುಗಳ ಸ್ತ್ತ್ರೀಯರನ್ನೂ ಸಹ  ಗೌರವಿಸುತ್ತಿದ್ದನು.

ಮೊಘಲರ ಜೊತೆ ಸಂಬಂಧ: ಮೊಘಲರು ಶಿವಾಜಿಯನ್ನು ಸಂಪೂರ್ಣನಾಶಗೊಳಿಸಲು ಬಿಜಾಪುರದ ಬಾದಶಹನೊಂದಿಗೆ ಕೈಜೋಡಿಸಿದರು. ಕ್ರಿ.ಶ. 1660 ರಲ್ಲಿ ಓರಂಗಜೇಬನು ತನ್ನ ಸೇನಾಪತಿ ಶಯಿಸ್ತಾಖಾನನ್ನು ಶಿವಾಜಿಯನ್ನು ಸೋಲಿಸಲು ಕಳುಹಿಸಿದನು. ಶಯಿಸ್ತಾಖಾನನು ಮರಾಠರ ಕೆಲವು ಕೋಟೆಗಳನ್ನು ಹಾಗೂ ಪುಣೆಯನ್ನು ವಶಪಡಿಸಿಕೊಂಡನು.  ಆಗ ಶಿವಾಜಿ ಪುಣೆಯಲ್ಲಿ  ಬೀಡುಬಿಟ್ಟಿದ್ದ ಶಯಿಸ್ತಾಖಾನನ ಮೇಲೆ ರಾತ್ರಿಯ ವೇಳೆ ದೀಡೀರನೆ ದಾಳಿ ಮಾಡಿದನು. ನಂತರ ಓರಂಗಜೇಬನು ಕ್ರಿ.ಶ 1664 ರಲ್ಲಿ ತನ್ನ ಸೇನಾನಿ ರಾಜಾಜಯಸಿಂಗನನ್ನು ಶಿವಾಜಿಯನ್ನು ನಿಗ್ರಹಿಸಲು ಕಳುಹಿಸಿದನು.  ಜಯಸಿಂಗನು ಶಿವಾಜಯ ಅನೇಕ ಕೋಟೆಗಳನ್ನು ವಶಪಡಿಸಿಕೊಂಡಾಗ ಆತನೊಂದಿಗೆ ಕ್ರಿ.ಶ 1665 ರಲ್ಲಿ ಶಿವಾಜಿಯು ಅನಿವಾರ್ಯವಾಗಿ ಪುರಂದರ ಒಪ್ಪಂದ ಮಾಡಿಕೊಂಡು  ಆ ಪ್ರಕಾರ 24 ಕೋಟೆಗಳನ್ನು  ಮೊಘಲರಿಗೆ ಬಿಟ್ಟುಕೊಟ್ಟನು.

ರಾಜಾಜಯಸಿಂಗನು ಶಿವಾಜಿಯ ಮನವೊಲಿಸಿ, ಆಗ್ರಾದಲ್ಲಿ ಓರಂಗಜೇಬನನ್ನು ಕಾಣುವಂತೆ ಮಾಡಿದನು.  ಆದರೆ ಓರಂಗಜೇಬನು ಇವನನ್ನು ಸರಿಯಾಗಿ ನಡೆಸಿಕೊಳ್ಳದೇ ಸೆರೆಯಲ್ಲಿಟ್ಟನು.  ಆಗ್ರಾ ಬಂದೀಖಾನೆಯಿಂದ ಬುದ್ದಿವಂತ ಶಿವಾಜಿಯು ಉಪಾಯದಿಂದ ಪಾರಾದನು.  ನಂತರ ಎರಡು ವರ್ಷಗಳ ಕಾಲ ಶಿವಾಜಿಯು ತಾನು ಕಳೆದುಕೊಂಡಿದ್ದ ಎಲ್ಲಾ ಕೋಟೆಗಳನ್ನು ಪುನ: ವಶಪಡಿಸಿಕೊಂಡನು.  ಕ್ರಿ.ಶ. 1674ರಲ್ಲಿ  ರಾಯಗಡದಲ್ಲಿ ಕೀರೀಟಧಾರಣೆ ಮಾಡಿಸಿಕೊಂಡು ಶಿಛತ್ರಪತಿಷಿ ಎನಿಸಿದನು.  ನಂತರ ಇಡೀ ಪಶ್ಚಿಮ ಭಾರತ ಆಡಳಿತವನ್ನು ಏಕೀಕರಿಸಿದನು. ಶಿವಾಜಿಯು ಕ್ರಿ.ಶ. 1680 ರಲ್ಲಿ  ಕಾಲವಾದನು.

ಮಹಾರಾಷ್ಟ್ತ್ರದ ವಾಣಿಜ್ಯ ನಗರಿಯಾದ ಕೊಲ್ಲಾಪುರದಲ್ಲಿ ಅವರು ಬಳಸುತ್ತಿದ್ದರೆನ್ನಲಾದ ಶಸಾ್ತ್ರಸ್ತ್ತ್ರಗಳನ್ನು ವಸ್ತು ಸಂಗ್ರಹಾಲಯ ನಿರ್ಮಿಸಿ ಇಂದಿಗೂ ಕೂಡ ಜನಸಾಮಾನ್ಯರವೀಕ್ಷಣೆಗೆ ಕಾಯ್ದಿರಿಸಲಾಗಿದೆ.

ಇಂದು ದೇಶದಲ್ಲಿ ಭಯೋತ್ಪಾದಕರ ಉಪಟಳ ಹೆಚ್ಚಾಗಿದ್ದು, ದೇಶದ ಸುಭದ್ರತೆ, ರಕ್ಷಣೆಗೆ ಒಂದಾಗಿ, ಭಯೋತ್ಪಾದಕತೆ ವಿರುದ್ಧ ಹೋರಾಡೋಣ. ಶಿವಾಜಿಯ ತತ್ವಗಳು, ಅವನಲ್ಲಿಯ ರಾಷ್ಟ್ತ್ರ ಪ್ರೇಮದ ಗುಣ ಇಂದಿನ ಯುವಪೀಳಿಗೆಗೆ ದಾರೀದೀಪವಾಗಲಿ. ಸನಾತನ ಧರ್ಮದ ಜ್ಯೌತಿ ವಿಶ್ವದಲ್ಲೆಡೆ ಬೆಳಗಲಿ.

ಶ್ರೀಮತಿ ಅಂಜನಾ ಕುಬೇರ

                           ವಾರ್ತಾ ಇಲಾಖೆ,ಗದಗ

loading...

LEAVE A REPLY

Please enter your comment!
Please enter your name here