ಸೋಲು ಬಂದರೂ ಬುದ್ದಿ ಬರಲಿಲ್ಲ

0
61

ಈ ರಾಜ್ಯ ಕಾಂಗ್ರೆಸ್  ನಾಯಕರಿಗೆ  ಏನಾಗಿದ ಎಂಬುದು ತಿಳಿಯದಂತಾಗಿದೆ. ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಈ ನಾಲ್ಕು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಸೋಲಿನ ಮೇಲೆ ಸೋಲುಗಳನ್ನು ಅನುಭವಿಸುತ್ತಲೇ ಬರುತ್ತಿದೆ. ಆದರೆ ಮುಂದಿನ ವಿಧಾನ ಸಭೆಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ  ಕನಸು ಕಾಣುತ್ಥಾ ಮುಂದಿನ ಮುಖ್ಯಮಂತ್ರಿಯಾರು ಎಂಬ ವಿಷಯದಲ್ಲಿ ಗುಂಪುಗಾರಿಕೆಯ ರಾಜಕಾರಣ ಮಾಡುತ್ತಾ ಕಚ್ಚಾಟದಲ್ಲಿ ತೊಡಗಿರುವ ರಾಜ್ಯದ  ಕೈ ನಾಯಕರಿಗೆ  ಸೋಲಿನ ಬಗ್ಗೆ  ತಮ್ಮ ಆತ್ಮಾವಲೋಕನವನ್ನು  ಮಾಡಿಕೊಳ್ಳಬೇಕು. ಎಂಬ ಭಾವನೆಗಳೇ ಬರುತ್ತ್ತಿಲ್ಲ. ಸಣ್ಣ ಸಣ್ಣ ಚುನಾವಣೆಗಳಲ್ಲಿ ಸೋತು ಸುಣ್ಣವಾಗುತ್ತಿರುವ  ಈ ಪಕ್ಷ ವಿಧಾನ ಸಭೆಯ ಚುನಾವಣೆಯಲ್ಲಿ ಗೆಲ್ಲುವುದಾದರೂ ಹೇಗೆ ಎಂಬ ಪ್ರಶ್ನೆ  ಉಂಟಾಗಿದೆ.

ರಾಜ್ಯದಲ್ಲಿ  ಇತ್ತೀಚೆಗೆ ವಿಧಾನ ಸಭೆಯಿಂದ  ವಿಧಾನ ಪರಿಷತ್ತಿಗೆ  ಹನ್ನೊಂದು ಸ್ಥಾನಗಳಿಗಾಗಿ  ಚುನಾವಣೆ ನಡೆದಿದೆ. ಜೊತೆಗೆ ಶಿಕ್ಷಕರ ಮತ್ತು ಪದವೀಧರ  ತಲಾ ಮೂರು  ಕ್ಷೇತ್ರಗಳಿಗಾಗಿ ಚುನಾವಣೆ ನಡೆದಿದೆ. ಈ ವಿಧಾನ ಪರಿಷತ್ ಚುನಾವಣೆಗಾಗಿ ಭಾಜಪ ನಾಯಕರು ತಮ್ಮ ಬಣ ರಾಜಕೀಯವನ್ನು ಚುನಾವಣೆ ಮುಗಿಯುವ ವರೆಗೆ ಬದಿಗೆ ಇಟ್ಟು  ಜನರ ಮುಂದೆ   ಒಗ್ಗಟ್ಟು ಪ್ರದರ್ಶಿಸಿ ಈಗ ನಡೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಒಟ್ಟು 17 ಸ್ಥಾನಗಳ ಪೈಕಿ ಹನ್ನೊಂದು ಸ್ಥಾನಗಳನ್ನು  ಪಡೆದುಕೊಂಡರು ಆದರೆ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವುದಾಗಿ ಜಂಬ ಕೊಚ್ಚಿಕೊಂಡು ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ  ಕಾಂಗ್ರೆಸ್ ನಾಯಕರು  ತಮ್ಮ ಎರಡನೇ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮ್ಮದ ಶರಡಗಿ  ಅವರನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಗದೆ ಹೀನಾಯವಾದ ಸೋಲನ್ನು  ಖಂಡಿದ್ದಾರೆ.  ಅಲ್ಲದೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಆರು ಸ್ಥಾನಗಳಿಗೆ  ನಡೆದ  ಚುನಾವಣೆಯಲ್ಲಿ ಒಬ್ಬನೆ ಒಬ್ಬ ಅಭ್ಯರ್ಥಿಯನ್ನು  ಸಹ ಗೆಲ್ಲಿಸುವುದು ಕೈ ನಾಯಕರು ವಿಫಲರಾಗಿದ್ದಾರೆ. ಜೆಡಿಎಸ್  ದಂತಹ ಸಣ್ಣ ಪಕ್ಷ ಒಂದು ಸ್ಥಾನ ಗೆಲ್ಲುವಲ್ಲಿ ಸಫಲವಾದರೆ ರಾಷ್ಟ್ತ್ರೀಯ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ ಜೆಡಿ ಎಸ್ ಪಕ್ಷ ಮಾಡಿದ ಸಾಧನೆಯನ್ನು  ಮಾಡುವುದಕ್ಕೆ ಸಾಧ್ಯವಾಗದೆ. ಹೋಗಿದೆ. ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದರೂ ಎಂಬಂತೆ ಈಗ ಸರಡಗಿ ಅವರ ಸೋಲಿಗೆ ಕಾರಣವಾದ ಅಡ್ಡ ಮತದಾನದ ಬಗ್ಗೆ ತನಿಖೆ ಮಾಡಲು ವಿ. ಆರ್. ಸುದರ್ಶನ ನೇತೃತ್ವದಲ್ಲಿ  ಸಮೀತಿಯನ್ನು  ನೇಮಕ ಮಾಡಲಾಗಿದೆ. ಆದರೆ ಸುದರ್ಶನ ಅವರೇ ಈ ತನಿಕೆಯ ವಿಷಯದಲ್ಲಿ ಕೈ ಚೆಲ್ಲುವ ರೀತಿಯಲ್ಲಿ ಮಾತನಾಡಿದ್ದಾರೆ,  ಮತದಾನ  ರಹಸ್ಯವಾಗಿ ನಡೆದಿರುವುದರಿಂದ ಅಡ್ಡ ಮತದಾನ ಮಾಡಿದ ಶಾಸಕರು ಯಾರು ಎಂಬುದನ್ನು  ಪತ್ತೆ ಮಾಡುವುದು  ಕಷ್ಟದ ಸಂಗತಿಯಾಗಿದೆ.  ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ಅಡ್ಡ ಮತದಾನ ಮಾಡಿದವರು ಯಾರು   ಎಂಬುದನ್ನು ಪತ್ತೆ  ಮಾಡಲು ಈ ಸಮೀತಿಗೆ ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಟಿಕೇಟ ಹಂಚಿಕೆಯ ವಿಷಯದಲ್ಲಿಯೇ  ಪಕ್ಷದಲ್ಲಿ  ಸಾಕಷ್ಟು ಗೊಂದಲಗಳು  ಉಂಟಾಗಿದ್ದವು. ತಮ್ಮ ಆಪ್ತ ಮಿತ್ರ ಸಿ. ಎಂ ಇಬ್ರಾಹಿಂ ಅವರಿಗೆ ಟಿಕೇಟು ನೀಡಲಿಲ್ಲ  ಎಂಬ ಕಾರಣಕ್ಕಾಗಿ ಮುನಿಷಿಕೊಂಡಿದ್ದ ಸಿದ್ದರಾಮಯ್ಯ  ವಿಧಾನ ಸಭೆಯ  ಪ್ರತಿ ಪಕ್ಷದ ನಾಯಕನ  ಸ್ಥಾನಕ್ಕೆ ರಾಜೀನಾಮೆ ನೀಡಿ  ತಮ್ಮ ಕೋಪವನ್ನು ಪ್ರದರ್ಶನ ಮಾಡಿದ್ದರು. ಈಗ ಅವರು ಆಕ್ಷೇಪ ಎತ್ತಿದ್ದ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿ ಅವರೇ  ಸೋತು ಹೋಗಿರುವುದನ್ನು  ನೀಡಿದಾಗ ಇದು ಯಾರ ಕೆಲಸ ಎಂಬುದು ಸಹಜವಾಗಿ  ಎಲ್ಲರಿಗೂ  ತಿಳಿಯುತ್ತದೆ. ಅಲ್ಲದೆ ಸರಡಗಿ ಸೋಲಿನಿಂದ ಅಲ್ಪ ಸಂಖ್ಯಾತ ನಾಯಕರು  ಆಕ್ರೌಶಗೊಂಡಿದ್ದಾರೆ.

ಸಿದ್ದರಾಮಯ್ಯನವರು ಪ್ರಹಸನ ಮುಗಿಯುತ್ತಿದ್ದಂತೆ ಲಿಂಗಾಯಿತ ಧುರಿಣ ಶಾಮನೂರು ಶಿವಶಂಕರಪ್ಪ ಕೆಪಿಸಿಸಿ  ಅಧ್ಯಕ್ಷ ಸ್ಥಾನವನ್ನು  ತಮಗೆ ನೀಡಬೇಕು. ಎಂದು  ಪಟ್ಟು ಹಿಡಿದು ಲಿಂಗಾಯಿತ ಧುರೀಣರ ನಿಯೋಗವನ್ನು ದೆಹಲಿ ನಾಯಕರ ಬಳಿಗೆ ತೆಗೆದುಕೊಂಡು ಹೋಗುವ ಸಿದ್ದತೆಯಲ್ಲಿ  ತೊಡಗಿದ್ದಾರೆ.  ಹೀಗಾಗಿ ಈ ಪಕ್ಷದಲ್ಲಿ ಕಚ್ಚಾಟದ ಮೇಲೆ  ಕಚ್ಚಾಟಗಳು ಆರಂಭವಾಗಿವೆ. ವಿಧಾನ ಸಭೆಯ ಚುನಾವಣೆ ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ನಡೆಯುವ ಸಾಧ್ಯ ಇದ್ದರೂ  ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಂಡು ಒಗ್ಗಟ್ಟು ಸಾಧಿಸುವ ಕಾರ್ಯವನ್ನು ಮಾಡದೆ  ಕಚ್ಚಾಟದಲ್ಲಿ ತೊಡಗಿರುವುದನನ್ನು  ನೋಡಿದರೆ ವಿಧಾನ ಸಭೆಯ ಚುನಾವಣೆಯಲ್ಲಿಯೂ  ಈ ಪಕ್ಷಕ್ಕೆಯಾವುದೇ ಭವಿಷ್ಯ ಇಲ್ಲ ಎಂಬ ಭಾವನೆ ಉಂಟಾಗುತ್ತದೆ.

ಆದ್ದರಿಂದ ಜೆಡಿಎಸ್ ಪಕ್ಷ  ತನ್ನ ಶಕ್ತಿಯನ್ನು  ಹೆಚ್ಚಿಸಿ ಕೊಳ್ಳಲು  ಸದ್ದು ಗದ್ದ ಇಲ್ಲದೆ ಕಾರ್ಯ ಮಾಡುತ್ತಿರುವಾಗ  ಕಾಂಗ್ರೆಸ್ ನಾಯಕರ ತಮ್ಮ ಶಕ್ತಿ ಹೆಚ್ಚಿಸಿಕೊಳ್ಳುವುದನ್ನು ಬಿಟ್ಟು ಕಚ್ಚಾಟದಲ್ಲಿ  ತೊಡಗಿರುವುದು ವಿಪರ್ಯಾಸದ  ಸಂಗತಿಯಾಗಿದೆ. ಇದರಿಂದ ಸೋಲಿನ ಮೇಲೆ ಸೋಲು ಕಂಡರೂ ಈ ನಾಯಕರಿಗೆ ಮಾತ್ರ ಬುದ್ದಿ ಬಂದಿಲ್ಲ ಎಂಬುದು  ನಿಚ್ಚಳವಾಗಿ  ಕಂಡು ಬರತೊಡಗಿದೆ.  ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯ ಕಾಂಗ್ರೆಸ್ಸಿನಲ್ಲಿ  ಒಗ್ಗಟ್ಟು ಮೂಡಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದು ಕೊಳ್ಳದೆ ಹೋದರೆ ರಾಜ್ಯದಲ್ಲಿ ಈ ಪಕ್ಷ ಮತ್ತೆ  ಎದ್ದು ನಿಲ್ಲುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಂಬ ಪರಿಸ್ಥಿತಿ ರಾಜ್ಯದಲ್ಲಿ  ಇರುವುದನ್ನು ನಾವು  ನೋಡಬಹುದು.

ಪ್ರಚಲಿತ ಮಲ್ಲಣ

loading...

LEAVE A REPLY

Please enter your comment!
Please enter your name here