ಕಾಯಕ ನಿಷ್ಠ ಆಯ್ದಕ್ಕಿ ಲಕ್ಕಮ್ಮ

0
1375

   ಹನ್ನೆರಡನೇಯ ಶತಮಾನದಲ್ಲಿ ಜಾಗತಿಕ ಮಟ್ಟದಲ್ಲಿ ಅಪರೂಪವೆನ್ನುವಂಥ ಕ್ರಾಂತಿಕಾರಕ ಸಮಾಜೋ ಧಾರ್ಮಿಕ ಚಿಂತನೆಗಳು ಕರ್ನಾಟಕದ ಇತಿಹಾಸದಲ್ಲಿ  ನಡೆದವು .ಮಹಾ ಮಾನವತವಾದಿ ಬಸವಣ್ಣವರು ಇದರ ನೇತೃತ್ವ ವಹಿಸಿದ್ದರು. ಉಚ್ಚ ನೀಚ ವರ್ಗ,ವರ್ಣ  ಭೇಧ ಅನಕ್ಷರತೆ ಅಜ್ಞಾನ ಬಡತನ ಶೋಷನೆಗಳಿಂದ  ಭಾರತೀಯ  ಸಮಾಜ ವ್ಯವಸ್ಥೆ ಜಡ್ಡುಗಟ್ಟಿ ಹೋಗಿತ್ತು ಭಾರತಿಯ ಸ್ತ್ತ್ರೀಯು ಸ್ಥಿತಿಯು ತೀರ ಕಳವಳಕರವಾಗಿತ್ತು ಸಮಾಜದಲ್ಲಿ  ಅವಳನ್ನು ಕೀಳಾಗಿ ಕಾಣಲಾಗುತ್ತಿತ್ತು. ಅವಳು ಪುರಷರ ಬೋಗದ ವಸ್ತು ಎಂದು ತಿಳಿಯಲಾಗಿತ್ತು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತಳಾಗಿದ್ದಳು.ಬಸವಣ್ಣವರ ಪ್ರಗತಿಪರ ಚಿಂತನೆಗಳ ಫಲವಾಗಿ  ಸ್ತ್ತ್ರೀಯ  ತೀರಯರಿಗೆ  ಸಮಾಜದಲ್ಲಿ ಒಂದು ಗೌರವ ಸ್ಥಾನ ದೂಕುವಂತಾಯಿತು. ಅನುಭವ ಮಂಟಪದ ಗರಡಿಯಲ್ಲಿ ಭಾಗವಹಿಸಿದವು ಅನೇಕ ಸ್ತ್ತ್ರೀಯರು ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ  ಪುರುಷರನ್ನು ಮೀರಿ ನಿಂತರು  ಅಂಥ ಸ್ತ್ತ್ರೀ  ರತ್ನಗಳಲ್ಲಿ ಕಾಯಕ ನಿಷ್ಠ ಶರಣೆ ಆಯ್ದಕ್ಕಿ ಲಕ್ಕಮ್ಮ ಪ್ರಸಿದ್ಧಳಾಗಿದ್ದಳೆ

ಅನುಭವ ಮಂಟಪದ ಅನುಭಾವ ಗೋಷ್ಠಿಯಲ್ಲಿ ಒಂದು ದಿನ ಕಾಯಕದ ಬಗ್ಗೆ ಚರ್ಚೆ ನಡೆಯುತ್ತಿತ್ತು ಕಾಯಕ ವೆಂದರೆನು ? ಎಂದು ಸಭಾಧ್ಯಕ್ಷರಾದ ಅಲ್ಲಂರು ಚರ್ಚೆಯಲ್ಲಿ ಭಾಗವಹಿಸಿದ ಆಯ್ದಕ್ಕಿ ಮಾರಯ್ಯನನ್ನು ಕೇಳುತ್ತಾರೆ. ಮನುಷ್ಯನು ತನ್ನ ಹೊಟ್ಟೆ ಹೊರೆಯಲು ಮಾಡಿದ  ಯಾವುದೇ ಕೆಲಸವೇ  ಕಾಯಕ ಎಂದು  ಮಾರಯ್ಯ ನುಡಿಯುತ್ತಾನೆ ಲಿಒಬ್ಬ ಕಳ್ಳ ಹೊಟ್ಟೆ ಹೊರೆಯಲು  ಕಳ್ಳತನದ ಕೆಲಸ ಮಾಡುತ್ತಾನೆ ಅದು ಕಾಯಕವೇ?  ಎಂದು ಕೇಳಿದಾಗ  ಪರರಿಗೆ ಕೇಡಕು ಮಾಡದೇ ಮಾಡುವ ಕಾರ್ಯವೇ ಕಾಯಕಳಿ ಎಂದು ಹೇಳುತ್ತಾರೆ. ಸಮಾಜದಲ್ಲಿ ಇತರರಿಗೆ ಕೇಡಾಗದಂತೆ ತಮ್ಮ ಕೆಲಸ ಮಾಡಿಕೊಂಡಿರುತ್ತಾರೆ  ತಾವಾಯಿತು ತಮ್ಮ ಕೆಲಸವಾಯಿತು.

ಪರಿವಾರದೊಂದಿಗೆ ಉಳಿದವರ ಚಿಂತೆ ಮಾಡದೆ ಯಾವದೇ ಕಳಕಳಿ ಅವರಿಗೆ ಇರುವದಿಲ್ಲ ಅಂಥವರ ಮಾಡಿದ ಕೆಲಸ ಕಾಯಕವೆನಿಸದು ಅದು ಕರ್ಮ ಎನ್ನಿಸಿಕೊಳ್ಳುತ್ತದೆ ವ್ಯಕ್ತಿಯ ಹಿತದೊಂದಿಗೆ ಸಮಾಜದ ಹಿತ ಸಾಧಿಸುವದು  ಕೆಲಸವು  ಕಾಯಕವೆನಿಸಿಕೊಳ್ಳತ್ತದೆ ಕಾಯಕದ ಬಗ್ಗೆ ಪ್ರಭು ದೇವರ  ವಿವರಣೆ ಕೇಳಿ ಎಲ್ಲ ಶರಣರು ತಲೆದೂಗುತ್ತಿರುವಾಗ ಅಲ್ಲಿ ಆಯ್ದಕ್ಕಿ ಲಕ್ಕಮ್ಮ ಪ್ರವೇಶಿಸಿ ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೆ  ಎಂದು ತನ್ನ ಗಂಡನಾದ ಮಾರಯ್ಯನನ್ನು ಎಚ್ಚರಿಸಿ ಕಾಯಕಕ್ಕೆ  ಕರೆದುಕೊಂಡು  ಹೋಗುತ್ತಾಳೆ ಅವಳ ಕಾಯಕ ನಿಷ್ಠೆಯನ್ನು ಮೆಚ್ಚಿಕೊಂಡು ಪ್ರಭುದೇವರೂ ಚರ್ಚೆಯಲ್ಲಿ ಭಾಗವಹಿಸಿದ್ದ ಬಸವಣ್ಣ, ಚಂದಯ್ಯ ಧೂಳಯ್ಯ, ಲದ್ದೆಯ ಸೋಮಣ್ಣ, ಕಾಳವ್ವೆ ಸತ್ಯಕ್ಕ  ಮೂದಲಾದವರು ಪ್ರಶಂಸಿಸುತ್ತಾರೆ.

ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳು ರಾಯಚೂರ ಜಿಲ್ಲೆಯ ಲಿಂಗಸುಗುರ ತಾಲೂಕಿನ ಯರಡೋಣಿ ಗ್ರಾಮದವರು ಅದೇ ಊರಿನ ಅಥಿದೈವತೆಯಾದ ಅಮಲೇಶ್ವದ (ಅಮರೇಶ್ವರ)ನ ಭಕ್ತರು ಅಮರೇಶ್ವರ ಕ್ಷೇತ್ರವೂ ಇಗಲೂ ಪ್ರಸಿದ್ದ ಯಾತ್ರಾ ಸ್ಥಳವಾಗಿದೆ ಬಸವಣ್ಣವರ ಕೀರ್ತಿ ಕೇಳಿ ಕಲ್ಯಾಣಕ್ಕೆ ಆಗಂಇಸಿದ ದಾಸೋಹ  ಮಹಾಮನೆ ಆವರಣದಲ್ಲಿ ಬಿದ್ದ ಅಕ್ಕಿಯನ್ನು ಆಯ್ದು ತರುವ ಕಾಯಕ ಕೈಕೊಂಡ ಜಂಗಮ ದಾಸೋಹ  ಮಾಡಿಕೊಂಡು ಸುಖದಿಂದ್ದರು ಅಣುಪಮ  ಕಾಯಕ ನಿಷ್ಠರಾಗಿದ್ದರು  ಶರಣರ ಅಸಂಗ್ರಹ  ತತ್ವ ಅಳವಡಿಸಿಕೊಂಡು  ಬದುಕು  ಸಾಗಿಸಿದ್ದರು. ದಿನಕ್ಕೆ ಮೂರು ಜಾವ ಕಾಯಕ ಮಾಡಿ ಮೂರು ಸೂಲಿಗೆ  ಅಕ್ಕಿಯನ್ನು  ಆಯ್ದು  ತಂದು ಜೋನವ  ಮಾಡಿ  ಹಸಿದು ಬಂದು  ಜಂಗಮರನ್ನು ತೃಪ್ತಿ ಪಡಿಸುತ್ತಿದ್ದರು . ಇವರ ಕಾಯಕ ನಿಷ್ಠೆಯನ್ನು ಪರಿಕ್ಷಿಸಲು  ಒಂದು ದಿನ ಬೇಕೆಂತಲೇ  ಮಹಾಮನೆಯ  ಅಂಗಳದಲ್ಲಿ  ಅಕ್ಕಿಯನ್ನು ಹೆಚ್ಚಿನ ಪ್ರಮಾನದಲ್ಲಿ ಬಸವಣ್ಣನವರು  ಚೆಲಿಸುತ್ತಾರೆ ಆ ದಿನ ಮಾರಯ್ಯ ಸಂತಸದಿಂದ ಒಂದೇ ಜಾವ ಕಾಯಕ ಮಾಡಿ ಆರು ಸೊಲ್ಲಿಗೆ ಅಕ್ಕಿಯನ್ನು ತಂದು ಲಕ್ಕಮ್ಮನ ಕೈಂಗಿಡುತ್ತಾನೆ ಅದನ್ನು ನೋಡಿ ಲಕ್ಕಮ್ಮ                      ಒಮ್ಮನವ ಮೀರಿ ಇಮ್ಮನದಲ್ಲಿ  ತಂದಿರಿ,

ಇದು ನಿಮ್ಮ ಮನವೂ ಬಸವಣ್ಣನ ಅನುಮಾನದ ಚಿತ್ರವೂ ?

ಈ ಮಾತು ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗಕ್ಕೆ ಸಲ್ಲದ ಬೋನ

ಅಲ್ಲಿಯೇ ಸುರಿದು  ಬನ್ನಿ ಮಾರಯ್ಯಾ

ಆಸೆಯೆಂಬುವದು ಅರಸಿಂಗಲ್ಲದೆ ಶಿವ ಭಕ್ತರಿಗುಂಟೆ?  ಈ ಸಕ್ಕಿಯಾಸೆ ನಿಮಗೇಕೆ?  ಈಶ್ವರನೊಪ್ಪ ಇದು ಅಮರೇಶ್ವಲಿಂಗಕ್ಕೆ ಸಲ್ಲದ ಬೋನು ನಮಗೆ ಎಂದಿನಂದವೆ ಸಾಕು ಹೆಚ್ಚಿನದನ್ನು ಅಲ್ಲಿಯೇ ಸುರಿದು  ಬನ್ನಿ  ಎಂದು ತಿರುಗಿ ಕಳಿಸುತ್ತಾಳೆ ತಮ್ಮನ್ನು ಪರೀಕ್ಷಿಸ ಹೊರಟ ಬಸವಣ್ಣವರಿಗೆ 196000 ಜಂಗಮರನ್ನು ಕರೆದುಕೊಂಡು ತಮ್ಮ ಮನೆಗೆ  ಆರೋಗಣೆಗೆ ಬರಬೇಕೆಂದು ಆಹ್ವಾನ ನೀಡುತ್ತಾಳೆ ಬಂದ ಜಂಗಮ ಬಳಗಕ್ಕೆಲ್ಲಾ ಭಕ್ತಿಯಿಂದ  ಅಡಿಗೆ ಮಾಡಿ ಬಡಿಸಿ ತೃಪ್ತಿಪಡಿಸುತ್ತಾಳೆ ಶರಣರೆಲ್ಲಾ ಅಚ್ಚರಿ ಪಡುತ್ತಾರೆ ಪ್ರಭುದೇವರು  ಅವರ ಕಾಯಕದ ಮಹಿಮೆಯನ್ನು  ಕೊಂಡಾಡುತ್ತಾರೆ. ಮನೆನೋಡಾ ಬಡವರು , ಮನ ನಡಾ ಸಂಪನ್ನರು ಎಂದು ಉದ್ಗಾರ ತೆಗೆಯುತ್ತಾರೆ  ಶೂನ್ಯ ಸಂಪಾದನೆಕಾರರು ಸಿದ್ದ ನಂಜೇಶ ವಿರುಪಾಕ್ಷ ಪಂಡಿತ ಲಕ್ಕಣ್ಣ ದಂಡೇಶ ಶಂಕರ ಕವಿ ಶಾಂಲಿಂಗದೇಶಿಕ ಮೂದಲಾದವರು ತಮ್ಮ ಕೃತಿಗಳಲ್ಲಿ ಈ ದಂಪತಿಗಳ ಪ್ರಸಂಗವನ್ನು ಸುಂದರವಾಗಿ ಚಿತ್ರಿಸಿದ್ದಾರೆ.

ಆದರ್ಶ ಜೀವನ ನಡೆಸಿದ ಮಾರಯ್ಯಾ ಮತ್ತು ಲಕ್ಕಮ್ಮ ಶರಣ ದಂಪತಿಗಳು ಶ್ರೇಷ್ಠ ವಚನಕಾರರು  ಆಗಿದ್ದಾರೆ ಲಕ್ಕಮ್ಮ 25 ವಚನಗಳೂ ಮಾರಯ್ಯಾ 34 ವನನಗಳೂ ಸಮಗ್ರ ವಚನ ಸಂಪುಟಗಳಲ್ಲಿ ಪ್ರಕಟವಾಗಿವೆ. ಅಮರೇಶ್ವ ಲಿಂ ಮಾರಯ್ಯಾ ವಚನಾಂಕಿವಾಗಿದ್ದು ಮಾರಯ್ಯಾ ಪ್ರಿಯ ಅಮರೇಶ್ವರಲಿಂಗ ಲಕ್ಕಮ್ಮ ವಚನಾಂಕಿತವಾಗಿದೆ ಇವರ ವಚನಗಳಲ್ಲಿ ಹೆಚ್ಚಿನವು ಕಾಯಕದ ಮೇಲ್ಮಯನ್ನು ಬಿಂಬಿಸುತ್ತದೆ

ಮನ ಶುದ್ದವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

            ಚಿತ್ತ ಶದ್ಧದಲ್ಲಿ ಕಾಯಕವ ಮಾಡುವಲ್ಲಿ

            ಸದ್ಬಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮೀ ತಾನಾಗಿಪ್ಪಳು

            ಭಕ್ತಂಗೆ ಬಡತನವುಂಟೆ ? ನಿತ್ಯಂಗೆ ಮರಣವುಂಟೆ?

            ಭಕ್ತರು ಬಡವರೆಂದು ಮತ್ತೊಂದು ಕೊಟ್ಟಹೆನೆಂದಡೆ

            ಮಾರಯ್ಯಾ ಪ್ರಿಯ ಅಮಲೇಶ್ವರಲಿಂಗವು

            ಸತ್ತಂದಿಗಲ್ಲದೆ ಬಡತನವಿಲ್ಲ

ಸತ್ಯ ಶುದ್ಧ ಕಾಯಕ ಮಾಡುವರಲ್ಲಿ ಬಡತನವೆಂದಿಗೂ ಸುಳಿಯದು ಬೇಕು  ಎನ್ನುವವನ್ನೇ ಬಡವ ಸಾಕು ಎನ್ನುವವನೇ  ಶ್ರೀಮಂತ  ಭಕ್ತ ಎಂದೂ ಬಡನಲ್ಲ  ಅವನ ಭಾವ ಶ್ರೀಮಂತಿಕೆ  ದೂಡ್ಡದು  ಅವನು ಸದಾ ತೃಪ್ತ ಎಂದು ಲಕ್ಕಮ್ಮ ಹೇಳುತ್ತಾಳೆ ಸೂತ್ರ ಬದ್ದವಾದ  ಅವಳ ವಚನಗಳು ಹಸಿ ಗೋಡೆಗೆ ಹರಳು ಎಸದಂತೆ ನಿಶ್ಚಿತ ಪರಿಣಾಮ ಬೀರುತ್ತವೆ.

ಮಾಡುವ ಮಟವುಳ್ಳನ್ನಕ್ಕ ಬೇರೊಂದು ಪದವನರಸಲೇಕ್ಕೆ

ದಾಸೋಹವೆಂಬ  ಸೇವೆಯ ಬಿಟ್ಟು ನೀಸಲಾರದೆ

ಕೈಲಾಸವೆಂಬ ಆಸೆ ಬೇಡ

            ಮಾರಯ್ಯಾ ಗಂಡ ಕೈಲಾಸಕ್ಕೆ ಹೋಗುವ ಆಸೆ ವ್ಯಕ್ತಪಡಿಸಿದಾಗ  ಆತನ  ಶಿವಲೋಕದ ಭ್ರಮೆ ಬಿಡಿಸಿ ಕಾಯಕ ದಾಸೋಹದ  ಮಹತ್ವ ತಿಳಿಸಿ ಶವ ಶರಣರಿದ್ದ ಠಾವೇ ಕೈಲಾಸವೆಂದು  ಹೇಳಿ ಅದನ್ನು ಅರಿತು ಅನುಭವಿಸುವ ಪರಿಯನ್ನು ಅವನಿಗೆ ಅರುಹುತ್ತಾಳೆ ಸತಿ ಪತಿಗಳೊಂದಾದ  ಭಕ್ತಿ ಹಿತವಪ್ಪುದು ಶಿವಂಗೆ ಅವರ ದಾಂಪತ್ಯ  ಅನ್ಯೌನ್ಯವಾಗಿತ್ತು ಕೇವಲ ಲೊಕಿಕ ಮಟ್ಟದಲ್ಲಿ ನಿಲ್ಲದೆ ಆಧ್ಯಾತ್ಮಿಕ ಹಂತಕ್ಕೇರಿ ಅಮಲೇಶ್ವರ ಲಿಂಗದಲ್ಲಿ ಸ್ವಯವಾಯಿತ್ತು.

ಆರ್ ಎಸ್ ಚಾಪಗಾವಿ

ಬೆಳಗಾವಿ: ಮೋ: 9480455146

 

loading...

LEAVE A REPLY

Please enter your comment!
Please enter your name here