ಅಭಿವೃದ್ದಿಗೆ ಜಿಲ್ಲಾಡಳಿತ ಸಿದ್ಧಪಡಿಸಲಿ ವ್ಹಿಜನ್….. ! !

0
17

ಬಾಗಲಕೋಟೆ, 18-ಬಾಗಲಕೋಟ ನಗರ ರಚನೆ ಸುಧೀರ್ಘ ಹೋರಾಟದ ಇತಿಹಾಸ ಹೊಂದಿದೆ. ಇದು ಏಕಾಏಕಿ ಆದ ಜಿಲ್ಲೆಯಲ್ಲ. ಸುಮಾರು ನಾಲ್ಕು ದಶಕಗಳ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆದಿದೆ. ಆದರೆ ರಚನೆಯ ಉದ್ದೇಶ ಸಾರ್ಥಕಗೊಂಡಿಲ್ಲ. ಇದಕ್ಕೆ ಕಾರಣಧಿಕಾರಿಗಳ ಬದ್ಧತೆಯ ಲೋಪ, ಜನಪ್ರತಿನಿದಿಗಳ ಇಚ್ಚಾಶಕ್ತಿ ಕೊರತೆ, ಪ್ರಜ್ಞಾವಂತರ ನಿರಾಸಕ್ತಿ, ಸಂಘ ಸಂಸ್ಥೆಗಳ ಸ್ವಪ್ರತಿಷ್ಠೆಯ ನಿಲವುಗಳಿಂದಾಗಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗಿಲ್ಲ ಆದರೆ ಸಾಧ್ಯತೆಯ ದಾರಿಗಳು ಮಾತ್ರ ಕ್ಷೀಣಿಸಿಲ್ಲ. ಜಿಲ್ಲೆ ನೀರಾವರಿಯಿಂದ ಸಮೃದ್ಧವಾಗಬೇಕಾಗಿದೆ. ಕೃಷಿ ತೋಟಗಾರಿಕೆ ಫಲವತ್ತತೆ ಹೆಚ್ಚಾಗ ಬೇಕಾಗಿದೆ. ಕೈಗಾರಿಕೆ ಬೆಳೆದೇ ಇಲ್ಲ. ಸಕ್ಕರೆ ಕಾರ್ಖಾನೆಗಳೇ ಕೈಗಾರಿ ಕೆಗಳಲ್ಲ. ಇತರ ಅವಕಾಶಗಳನ್ನು ಗುರುತಿ ಸಬೇಕಾಗಿದೆ. ಅದಕ್ಕೂ ಮಿಗಿಲಾಗಿ ಇಡೀ ಜಗತ್ತನ್ನು ಆಕರ್ಷಿಸಬಹುದಾದ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ಬಗ್ಗೆ ನಾವು ಕಾಳಜಿ ವಹಿಸಿಲ್ಲ. ರಾಷ್ಟ್ತ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇಡೀ ದೇಶದ ಅಭಿವೃದ್ದಿ ಮುನ್ನೌಟದ ವೇಳಾಪಟ್ಟಿ ಪ್ರಕಟಿಸಿದರು. ವ್ಹಿಜನ್ 2020 ಇದು ಜಗತ್ತಿನಲ್ಲಿ ಭಾರತವನ್ನು ಶಕ್ತಿಶಾಲಿ, ಸ್ವಾವಲಂಬಿ ರಾಷ್ಟ್ತ್ರವನ್ನಾಗಿಸುವ ಗುರಿ ಮತ್ತು ಸಂಕಲ್ಲ. ಇದು ಸಾಕಾರಗೊಳ್ಳಬೇಕಾದರೆ ಅದರ ಪ್ರಯತ್ನ ಗ್ರಾಮ ಮಟ್ಟದಿಂದಲೆ ಆರಂಭವಾಗಬೇಕಾಗಿದೆ. ಈ ಬಗ್ಗೆ ಅವಲೋಕವ ಮಾಡಿಕೊಂಡರೆ ಕಾಣುವದು ನಿರಾಶೆ ಮಾತ್ರ, ಅಂದರೆ ಬಾಗಲಕೋಟೆಗೆ ವ್ಹಿಜನ್ ಎಂಬುದೆ ಇಲ್ಲ. ಇದನ್ನು ಅಧಿಕಾರಿಗಳು ಸಿದ್ಧಪಡಿಸಬೇಕು. ಜನಪ್ರತಿನಿಧಿಗಳು ಸ್ಪಂದಿಸಬೇಕು. ವ್ಹಿಜನ್ ಹೇರಿರಬೇಕೆಂಬದನ್ನು ತಜ್ಞರು, ಆಡಳಿತದ ನಿಪುಣರು. ಸಂಘ ಸಂಸ್ಥೆಗಳು ಮಾರ್ಗದರ್ಶನ ಮಾಡಬೇಕು ಈ ಮೂರು ಹಂತಗಳು ವಿಫಲವಾಗಿವೆ. ಜಿಲ್ಲಾಧಿಕಾರಿ ಕುಂಜಪ್ಪ ಅವರ ಜನರ ಭಾವನೆಗಳಿಗೆ ಸ್ಪಂದಿಸಬಲ್ಲ ಉತ್ತಮ ಅಧಿಕಾರಿ. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ ಅವರು ಸಹ ಸಮರ್ಥರಾಗಿದ್ದಾರೆ. ಈಗ ಅವರು ಇದಕ್ಕಾಗಿ ಚಿಂತಿಸಬೇಕು. ಬಾಗಲಕೋಟೆ ಜಿಲ್ಲೆಯನ್ನು ಅಭಿವೃದ್ದಿಪಡಿಸಲು ಇರುವ ಅವಕಾಶಗಳು, ಅದರ ಸದ್ಬಳಕೆಗೆ ಮಾರ್ಗೋಪಾಯಗಳು, ಕೇಂದ್ರ, ರಾಜ್ಯದಿಂದ ತರಬಹುದಾದ ಅನುದಾನ ಈ ಕುರಿತು ಸಮಗ್ರ ಕರಡು ಸಿದ್ಧವಾಗಬೇಕಾಗಿದೆ. ಅದಕ್ಕಾಗಿ ಅಧಿಕಾರಿಗಳ ದಂಡು ಕೆಲಸ ಮಾಡುವಂತೆ ಪ್ರೇರಣೆ ನೀಡಬೇಕಾಗಿದೆ. ತೋಟಗಾರಿಕೆ, ಪ್ರವಾಸೋದ್ಯಮ, ಕೈಗಾರಿಕೆ, ನೀರಾವರಿ, ಕೆರೆ ತುಂಬುವ, ಸ್ಮಾರಕಗಳ ರಕ್ಷಣೆಯ ವರದಿ ಸಿದ್ಧಪಡಿಸಲು ಕಾರ್ಯಾಗಾರಗಳನ್ನು ನಡೆಸಬೇಕು.

ಬರಗಾಲದ ಕಾರಣ ಈ ಬಾರಿ ಉತ್ಸವ ನಡೆಯುತಿಲ್ಲ. ಆದರೆ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಚಿಂತನೆಯ ಉತ್ಸವ ನಡೆಯಲಿ. ತಾಲೂಕಾ ಮಟ್ಟದಲ್ಲಿ ಅಭಿಪ್ರಾಯ ಕ್ರೌಢಿಕರಣದ ಕಾರ್ಯಾಗಾರಗಳು, ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣ ನಡೆಸಿ ಸಾರ್ವಜನಿಕರ, ತಜ್ಞರ, ಸಾಹಿತಿ ಕಲಾವಿದರನ್ನು ಸೇರಿಸಿ ಅಭಿಪ್ರಾಯ ಪಡೆದು ವರದ ಸಿದ್ಧಪಡಿಸಿ ಜನಪ್ರತಿನಿಧಿಗಳಿಗೆ ಅದರ ಪ್ರತಿ ಒದಗಿಸಿ ಕೇಂದ್ರ ರಾಜ್ಯ ಸರಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿ ಆ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಜನತೆ, ಸಂಘ ಸಂಸ್ಥೆಗಳು ಈ ಬಗ್ಗೆ ಒತ್ತಡ ಹೇರಬೇಕು.

 

 

loading...

LEAVE A REPLY

Please enter your comment!
Please enter your name here