ಚಿಲ್ಲರೆ ಸಮಸ್ಯೆ

0
59

ಕಿರುಕಳ ಮಾರುಕಟ್ಟೆಯಲ್ಲಿ ಚಿಲ್ಲರೆಯ ಸಮಸ್ಯೆ ತೀವ್ರಗೊಂಡಿದೆ.  ಇದು ವ್ಯಾಪಾರಿಗಳು ಮಾಡುತ್ತಿರುವ ಕೃತಕ ಅಭಾವವೇ ಅಥವಾ ನಿಜವಾಗಿಯೂ  ಚಿಲ್ಲರೆಗಳ ಅಭಾವವಿದೆಯೇ ಎಂಬುದು ತಿಳಿಯುತ್ತಿಲ್ಲ ಐದಾರು ರೂಪಾಯಿಗಳ ವ್ಯಾಪಾರ ಮಾಡಿ ಹತ್ತರ ನೋಟು ಕೊಟ್ಟರೆ ಚಿಲ್ಲರೆ ಇಲ್ಲ ಎಂಬ ಮಾತು ಕೇಳಿ ಬರುತ್ತದೆ. ಆ ಚಿಲ್ಲರೆಯ ಬದಲು ಬೇರೆ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ವ್ಯಾಪಾರಿಗಳು ಹೇಳುತ್ತಾರೆ. ತರಕಾರಿ ಮಾರುಕಟ್ಟೆಯಲ್ಲಿ  ಇದೇ ರೀತಿಯ ಪರಿಸ್ಥಿತಿ ಇದೆ. ವ್ಯಾಪಾರ ಮಾಡುವಾಗ ಈ ಪರಿಸ್ಥಿತಿಯನ್ನು ಹೇಗಾದರೂ  ಮಾಡಿ ನಿಭಾಯಿಸಬಹುದು. ಆದರೆ ನಗರ ಸಾರಿಗೆಯ ಬಸ್ಸಿನಲ್ಲಿ  ಈ ಸಮಸ್ಯೆ ಬಹುದೊಡ್ಡ ಪ್ರಮಾಣದಲ್ಲಿ ಇದೆ. ಬಸ್ ಇಳಿಯುವಾಗ  ಚಿಲ್ಲರೆ ಕೊಡುತ್ತೇನೆ ಎಂದು ಹೇಳುವ ನಿರ್ವಾಹಕರು 10 ರೂಪಾಯಿ ನೋಟು ಕೊಟ್ಟು ಇಬ್ಬರು ಮೂವರು ಪ್ರಯಾಣಿಕರು ಹಣ ಹಂಚಿಕೊಳ್ಳಿ  ಎಂದು ಹೇಳುತ್ತಾರೆ. ಇದರಿಂದ ಜನರು ಪಡಬಾರದ ತೊಂದರೆಯನ್ನು ಪಡುತ್ತಾರೆ. ಆಷ್ಟೇ ಅಲ್ಲ ಅವಸರದಲ್ಲಿ ಬಸ್ಸು ಇಳಿದು  ಮತ್ತೊಂದು ಬಸ್ಸು ಏರಬೇಕಾದರೆ ಅನಿವಾರ್ಯತೆಯಲ್ಲಿ ಇರುವವರು ಆ ಹಣ  ಬಿಟ್ಟೇ ಹೋಗಬೇಕಾದ ಸನಿವಾರ್ಯತೆ ಉಂಟಾಗುತ್ತದೆ.  ಯಾಕೆಂದರೆ ಚಿಲ್ಲರೆಯ ಬೆನ್ನು ಹತ್ತಿ ಸಮಯ ವ್ಯರ್ಥ ಮಾಡಿದರೆ ಮುಂದಿನ ಬಸ್ ತಪ್ಪಿಸಿಕೊಂಡು ಅವರ ಮುಂದಿನ ಕಾರ್ಯಗಳೇ ಉಲ್ಟಾ ಪಲ್ಟಾ ಆಗಿಬಿಡುತ್ತವೆ.  ಹೀಗಾಘಿ ಚಿಲ್ಲರೆ ಬಿಟ್ಟೆ ಅವರು ಹೋಗಬೇಕಾಗುತ್ತದೆ.

ರಿಜರ್ವ ಬ್ಯಾಂಕಿನವರು ಜನರಿಗೆ ಭೇಕಾಗುವ  ಪ್ರಮಾಣದಲ್ಲಿ ಚಿಲ್ಲರೆ ಹಣವನ್ನು ಬಿಡುಗಡೆ ಮಾಡುತ್ತಿಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇರುವುದಿಲ್ಲ.ಇನ್ನಾದರೂ ರಿಜರ್ವ ಬ್ಯಾಂಕಿನವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಣ ಬಿಡುಗಡೆಯನ್ನು ಸಾಕಷ್ಟು ಪ್ರಮಾಣದಲ್ಲಿ ಮಾಡಿದರೆ ದಿನ ನಿತ್ಯ ಜನರು ಅನುಭವಿಸುವ ಈ ಎಲ್ಲಾ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಗರ ಬಸ್ಸುಗಳಲ್ಲಿ ಸಂಚರಿಸುವುದು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವುದು ತೀರಾ ತೊಂದರೆಯ ಕೆಲಸವಾಗಿ ಬಿಡುತ್ತದೆ.  ಸಂಬಂಧ ಪಟ್ಟವರು ಈ ಬಗ್ಗೆ ನಿಗಾ ವಹಿಸಿ ಈಗ ಚಿಲ್ಲರೆಗಳ ಕಾರಣಕ್ಕೆ ಜನರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವ ಕಾರ್ಯವನ್ನು ಮಾಡಿದರೆ ಮಾತ್ರ  ಚಿಲ್ಲರೆಯ ಸಮಸ್ಯೆ ನಿವಾರಣೆಯಾಗಲು ಸಾಧ್ಯವಾಗುತ್ತದೆ.

 

loading...

LEAVE A REPLY

Please enter your comment!
Please enter your name here