ದಿಟ್ಟ ಶರಣೆ ಮುಕ್ತಾಯಕ್ಕ

1
1655

ಅದ್ವೈತದ ನೆಲೆಗೊಳಿಸಿ ಎರಡಳಿದೆನೆಂಬವರು

ಶಿಶು ಕಂಡ ಕನಸಿನಂತಿರುವ ಬೇಕಲ್ಲದೆ,

ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?

ಎನ್ನ ಅಜಗಣ್ಣನಂತೆ ಶಬ್ದ ಮುಗ್ದನಾಗಿರಬೇಕಲ್ಲದೆ

ಶಬ್ದ ಸಂದಣಿಯ ಮಾತು ಸಮಯವಲ್ಲ ನೋಡಯ್ಯಾ.

ಹನ್ನೆರಡನೆಯ ಶತಮಾನದ ವಚನಕಾರ್ತಿಯಲ್ಲಿ ಅನುಭಾವದ ನೆಲೆಯಲ್ಲಿ ಅತ್ಯಂತ ಎತ್ತರದ ಸ್ಥಾನ ಪಡೆದವಳು ಶರಣೆ ಮುಕ್ತಾಯಕ್ಕ ಅನುಭಾವದ ಮೇರುಗಿರಿಯಾಗಿದ್ದ ಅಲ್ಲಮನನ್ನು ಎದುರಿಸಿ ಸಾವಾಲು ಹಾಕಿದಳು ಶೂನ್ಯ ಸಂಪಾದನೆ ಕೃತಿಗಳಲ್ಲಿ ಅಲ್ಲಮ ಮುಕ್ತಾಯಕ್ಕರ ಪ್ರಸಂಗ ಸ್ವಾರಸ್ಯಪೂರ್ಣವಾಗಿ ಬಂದಿದೆ. ಅನುಭಾವದ ರಹಸ್ಯವನ್ನು ಅನಾವರಣಗೊಳಿಸುವ ಅವರ ತಾತ್ವಿಕ ಸಂವಾದ ಉಪನಿಷತ್ತುಗಳಿಗೆ ಸರಿಮಿಗಿಲಾಗಿದ್ದು ಅದನ್ನು ಓದಿಯೇ ಅದರ ರಸಾನಂದನವನ್ನು ಸವಿಯಬೇಕು ಶೂನ್ಯ ಸಂಪದನೆಕಾರರು ಮುಕ್ತಾಯಕ್ಕಗಳ ಸಂಪಾದನೆಗೆ ಮೊದಲ ಸ್ಥಾನ ನೀಡಿದ್ದು ಗಮನೀಯವಾಗಿದೆ.

ಐತಿಹಾಸಿಕ ಹಾಗೂ ಪುಣ್ಯಮಯ ನೆಲೆಯನಿಸಿದ ಗದಗ ಜಿಲ್ಲೆಯ ಲಕ್ಕುಂಡಿ ಮುಕ್ತಾಯಕ್ಕನ ಜನ್ಮಸ್ಥಳ ಗಂಡನ ಊರು ಮೊಸಳೆಕಲ್ಲು ಈಕೆಯ ಹಿರಿಯ ಸಹೋದರ ಅಜಗಣ್ಣ ಭಕ್ತಿ ಸಂಪನ್ನ ಕುಟಂಬದಲ್ಲಿ ಜನಸಿದ ಇವರು ಬಾಲ್ಯದಲ್ಲಿ ಕೊಡಿ ಬೆಳೆದವರು. ಕಿರ್ತಿಣೆ ಭಜನೆ ಧ್ಯಾನಚಿಂತನ ಗೋಷ್ಠಿಗಳಲ್ಲಿ ತಪ್ಪದೆ ಬಾಗವಹಿಸುತ್ತದ್ದರು ಒಂದು ದಿನ ಅಜಗಣ್ಣ ಸರ್ಪವೊಂದು ಅತ್ಯಂತ ಪ್ರಕಾಶಮಯವಾದ ಮಣಿಯನ್ನು ಗುಪ್ತವಾಗಿರಿಸಿಕೊಂಡನ್ನು ಕಂಡನು ಈ ಘಟನೆ ಅವನ ಜೀವನದಲ್ಲಿ ಆಧ್ಯಾತ್ಮಿಕ ಪರಿವರ್ತನೆ ತಂದಿತು ಅಂದಿನಿಂದ ಅಜಗಣ್ಣ ಗುಪ್ತ ಭಕ್ತಿ ಮಾಡುತ್ತ ಮನದಲ್ಲಿಯೇ ಮಹಾಮಂತ್ರ ಜಪಿಸುತ್ತ ಸಹಜ ಜ್ಞಾನವನ್ನು ಸಂಪಾದಿಸಿದನು ಶಬ್ಧಮುಗ್ಧನೆಂದು ಹೆಸರು ಪಡೆದನು ಅವನ ಭಕ್ತಿಯ ಪ್ರಭಾವ ಮುಕ್ತಾಯಕ್ಕನಲ್ಲಿ ಅಚ್ಚೌತ್ತದಂತೆ ಉಳಿಯಿತು. ಅಣ್ಣನನ್ನು ಅಗಲಿಗಂಡನ ಮನೆಗೆ ಹೋಗುವಾಗ ಅವಳು ಬಹಳ ದಃಖಿತಳಾದಳು

ಜೀವನ ನಿರ್ವಹಣೆಗೆ ಕೂಲಿಕಾಯಕ ಮಾಡಿಕೊಂಡಿದ್ದ ಅಜಗಣ್ಣ ಒಂದು ದಿನ ತೆಲೆಗೆ ಬಾಗಿಲು ಬಡಿದು ಮರಣ ಹೊಂದುತ್ತಾನೆ. ಅಜಗಣ್ಣ ಗುಪ್ತಭಕ್ತಿ ಮಾಡಿಕೊಂಡಿದ್ದು ತನ್ನ ಲಿಂಗವನ್ನು ಅಮೋಳಕ್ಯ (ಬಾಯಿ)ಯಲ್ಲಿ ಧರಿಸುತ್ತಿದ್ದನೆಂದು ಆಟವಾಡುವ ಪೆಡ್ಡೆ ಹುಡಗರು ಅದನ್ನು ತೋರಿಸಲು ಹಟ ಹಿಡಿದಾಗ ಲಿಂಗವನ್ನು ನುಂಗಿ ಪ್ರಾಣ ಬಿಟ್ಟನೆಂದೂ ಕೆಲವು ಕೃತಿಗಳಲ್ಲಿ ತಿಳಿಸಲಾಗಿದೆ. ಅಜಗಣ್ಣನ ಗುಪ್ತಭಕ್ತಿಯ ಸಂಕೇತವಾಗಿ ಕೃತಿಕಾರರು ಇಂಥ ಘಟನೆಯನ್ನು ಸೃಷ್ಟಿಸರಬಹುದೆಂದು ತೋರುತ್ತದೆ ಅಣ್ಣನ ಮರಣದ ವಾರ್ತೆ ಕೇಳಿ ಮುಕ್ತಾಯಕ್ಕ ಮುಕ್ತಕೇಶಿಯಾಗಿ ಮೊಸಳಿಕಲ್ಲಿನಿಂದ ಲಕ್ಕುಂಡಿಗೆ ಆಗಮಿಸುತ್ತಾಳೆ.

ಅಣ್ಣನ ಮನೆಯಷ್ಟೇ ಅಲ್ಲ ಈ ಲೋಕವೇ ಬರಿದಾಗಿ ಕಂಡ ಮುಕ್ತಾಯಕ್ಕ ದೊಕ್ಕುಗೆಟ್ಟು ಶೋಕದಿಂದ ತಳಮಳಿಸುತ್ತಾಳೆ ಅಕಾಲದಲ್ಲಿ ಅಸುನೀಗಿದ ಅಣ್ಣ ಅಜಗಣ್ಣನ ತಲೆಯನ್ನು ತನ್ನ ತೊಡೆಯ ಮೇಲೆರಿಸಿಕೊಂಡು ನಿನ್ನಗಲಿ ನಾನು ಬದುಕಲಿ ಎಂದು ರೋದಿಸುತ್ತಾಳೆ ಅಣ್ಣನ ಅಗುಲುವಿಕೆಯಿಂದ ದಃಖಕ್ಕಿಂತ ಅವಳಿಗೆ ಅವನ ಗುಪ್ತ ಭಕ್ತಿ ಅರಿಯದೆ ಹೋದೆನಲ್ಲಾ ಅಧ್ಯಾತ್ಮಜ್ಞಾನ ತಿಳಿಯದೆ ಹೋದೆನಲ್ಲಾ ಎಂಬ ದುಃಖ ವಿಶೇಷವಾಗಿತ್ತು ಆಗ ಅವಳ ಜ್ಞಾನಪಿಪಾಸಕ್ತೆಯನ್ನು ಅರಿತಿದ್ದ ಅಲ್ಲಮ ಪ್ರಭು ಅವಳಿಗೆ ನಿವೃತ್ತಿಮಾರ್ಗ ಭೋಧಿಸಲು ಆಗಮಿಸುತ್ತಾನೆ.

ಪ್ರಭು- ಅಂಗೈಯೊಳಗೊಂದು ಅರಳ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?

ಮುಕ್ತಾಯಿ- ಆರೆಂದು ಕುರುಹ ಬೆಸಗೊಳಿಸಲು ಏನಂದು ಹೇಳುವನಯ್ಯಾ ?ತಲೆಯಳೆದು ನೆಲೆಗಟ್ಟು ಬೆಳುಗುವ ಜ್ಯೌತಿ ಎನ್ನ ಅಜಗಣ್ಣ ತಂದೆಯ ಚಿನ್ನಬಳಿಯ ಬಂದವಳನಯ್ಯಾ

ಪ್ರಭು-  ಕಾಣದುದ ಕಂಡೆ; ಮುಟ್ಟಬಾರಯದ ಮುಟ್ಟಿದೆ; ಆಸಾದ್ಯವ ಸಾದಿಸಿದೆ; ತಲೆಗೆಟ್ಟುದ ತಲೆವಿಡದೆ ನೆಲೆಗಟ್ಟುವ ನಿರ್ಧರಿಸಿದೆ; ಗುಹೇಶ್ವರ ನಿಮ್ಮ ಶರಣ ಅಜಗಣ್ಣನಿಗೆ ಶರಣೆಂದು ಬದುಕಿದನು.

ಮುಕ್ತಾಯಿ-  ಚಿದ್ಘನದೊಳಗೆ ಅವಿರಳೈಕ್ಯವಾದ ಎನ್ನ ಅಜಗಣ್ಣ ತಂದೆಯ ನರಿದು ಶರಣೆಂಬಾತ ನೀನಾರು ಹೇಳಯ್ಯಾ?

ಪ್ರಭು- ಶರಣು ಶರಣಾರ್ಥಿಎಲೆ ತಾಯೆ ನಾ ನಿಮ್ಮ ಭಾವನಲ್ಲಯ್ಯನು ನೀನೆ ನಗೆ ನಗೆವೆಣ್ಣು ನಮ್ಮ ಗುಹೇಶ್ವರನ ಕೈ ವಿಡಿದು ಪರಮ ಸುಖಿಯಾಗಿ ಕಳವಳವಿದೇನು ಹೇಳಾ?

ಮುಕ್ತಾಯಿ-ದೇವದೇವಾ ಶರಣಾರ್ಥಿ; ಅವಧರಿಸಯ್ಯಾ ಮದವಳಿದು ಮಹವನೊಡಗೂಡಿದ ಎನ್ನ ಅಜಗಣ್ಣನೆಂಬ ಮಹಾಮಹಿಮನು ಘನವೇದ್ಯನಾಗಿ ಎನ್ನಮತಿಗೆ ಮರವೆಯ ಮಾಡಿಹೋದನು.

ಪ್ರಭು-  ಅರಿವರಿತು ಮರಹುಗೆಟ್ಟ ತನ್ನಲ್ಲಿತಾನೂ ಸನ್ನಿಹಿತನಾದಂಗೆ ದಃಖಿಸುವರೆ ಹೇಳಾ ? ಕಂಡೆ ಕಾಣೇ ಕೂಡಿದೆ ಅಗಲಿದನೆಂಬದು ಭ್ರಾಂತಿ ಸೂತಕವ ತಿಳಿದು ನೋಡಲು ಗುಹೇಶ್ವರನೆಂಬ ಲಿಂಗವನಗಲಲು ಎಡೆಯಲ್ಲಿ ಕೇಳಾ ಎಲೆ ತಾಯೆ! ಮನದಲ್ಲಿ ಮನೆಯ ಮಾಡಿಕೊಂಡಿದ್ದ ಲಿಂಗದ ಅನುವನವರಿಯಬಲ್ಲಡೆ ಗುಹೇಶ್ವೆರ ಲಿಂಗ ದೂರವಿಲ್ಲ ತಾಯೆ !

ಮುಕ್ತಾಯಿ-ಅಂತರಂಗದಲ್ಲಿ ಅಧೇ ಎಂದರೇನು, ತನ್ನಲ್ಲಿ ತಾನು ಸನ್ನಿಹಿತನಾದನೆಂದರೆ ಗುರುವಿಲ್ಲದೆ ಆಗದು ಕೇಳಾ ಗುರು ತಾನಾದಡೂ ಗುರುವಿಡಿದಿರಬೇಕು

ಪ್ರಭು-  ಸಹಜ ಸಂಬಂದಕ್ಕೆ ಗುರುವಲ್ಲದೆ ಅಸಹಜ ಸಂಬಂದಕ್ಕೆ ಗುರು ಉಂಟೆ ? ಗುಹೇಶ್ವರ ಲಿಂಗದಲ್ಲಿ ಸರವೆಂದಲ್ಲಿ ಗುರು ಉಂಟಲ್ಲದೆ ಸ್ವಯದೆಂದಲ್ಲಿ ನುಡಿಯಲ್ಲ.

ಹೀಗೆ ಅಲ್ಲಮ ಮುಕ್ತಾಯಕ್ಕನ ನಡುವೆ ತಾತ್ವಿಕ ಚಿಂತನೆ ನಡೆಯುತ್ತದೆ. ಜೀವನದ ನಿತ್ಯಾನಿತ್ಯತೆ ಅನುಭಾವಿಯ ನೀಲವು ಮೊದಲಾದ ವಿಷಯಗಳ ಕುರಿತು ಮುಕ್ತಾಯಕ್ಕ ಅಲ್ಲಮನಿಗೆ ಅನೇಕ ಪ್ರಶ್ನೆಗಳನ್ನು ಹಾಕಿ ಅಲ್ಲಮನಿಂದ ಅಷ್ಟೆ ಅರ್ಥವತಾದ ಎತ್ತರದ ಉತ್ತರಗಳನ್ನು ಪಡೆಯುತ್ತಾಳೆ. ಗುರುವನ್ನೇ ಸಾಕ್ಷಿ ಕಟ್ಟೆಯಲ್ಲಿ ನಿಲ್ಲಿಸಿ ನ್ಯಾಯಾದೀಶನಂತೆ ಬಗೆಬಗೆಯಾಗಿ ಪ್ರಶ್ನಶಿ ತಾತ್ವಿಕ ಜಿಜ್ಞಾಸೆ ನಡೆಸಿ ಕೌತುಕ ಮೂಡಿಸಿದ ಇಂಥ ಉದಾಹರಣೆ ಮತ್ತೆಲ್ಲಿಯೂ ಸಿಗುವುದಿಲ್ಲ ಸೂತ್ರ ಬದ್ಧವಾಗಿ ನಡೆದ ಅವರ ತಾತ್ವಿಕ ಆಧ್ಯಾತ್ಮಿಕ ಸಂವಾದವು ಓದುಗರನ್ನು ಜ್ಞಾನಾಮೃತ ಸಾಗರದಲ್ಲಿ ತೇಲಾಡಿಸುತ್ತದೆ.

ನೀನಗಾಗಿ ಅಳುವವರಾರನೂ ಕಾಣೇ ಗುಹೇಶ್ವರಾ ಏಂದಿದ್ದು ಅಲ್ಲಮ ಇಲ್ಲಿ ಅದಕ್ಕಾಗಿ ಅಳುತ್ತಿದ್ದ ಮುಕ್ತಾಯಕ್ಕನನ್ನು ಕಂಡು ಆನಂದಿಸುತ್ತಾನೆ. ಅವಳಿಗೆ ತತ್ವಭೋದೆ ಮಾಡಿ ಸಂತೈಸುತ್ತಾನೆ. ಅಲ್ಲಮನು ಭೋಧಿಸಿದ ಎಲ್ಲ ಲಕ್ಷಣಗಳನ್ನು ಅವಳು ಅನ್ನ ಅಜಗಣ್ಣಲ್ಲಿ ಕಂಡಿದ್ದಳು. ಸಕಾರ ನಿರಾಕರಗಳ ಶಬ್ದ ನಿಶ್ಬದಗಳ ಸಮನ್ವಯದ ಶರಣರ ನಿಲುವನ್ನು ಅವಳು ಅಲ್ಲಮನಿಂದ ತಿಳಿದುಕೂಂಡು ಶೋಕ ವಿಮಕ್ತಳಾಗಿ ಅಲ್ಲಮನಿಗೆ ಶರಣಾಗಿ ಲಿಂಗಾಂಗ ಸಾಮರಸ್ಯ ಪಡೆದು ಕೃತಾರ್ಥಳಾಗುತ್ತಾಳೆ ಮುಕ್ತಾಯಕ್ಕ ಶ್ರೇಷ್ಟ ವಚನಕಾರ್ತಿಯಾಗಿದ್ದು. ಅವಳು ಬರೆದ 37 ವಚನಗಳು ಲಭ್ಯವಾಗಿವೆ. ತನಗೆ ಗುರು ಸಮಾನವಾಗಿದ್ದು ಅಣ್ಣ ಅಜಗಣ್ಣನ ಹೆಸರನ್ನೇ ವಚನಾಂಕಿತ ವಾಗಿಸಿಕೊಂಡಿದ್ದಾಳೆ ಅವಳ ವಚನಗಳು ಅನುಭಾಪೂರ್ಣವಾಗಿವೆ. ಉಪಮೆ ಪ್ರತಿಮೆಗಳಿಂದ ಕೂಡಿದ್ದು ಕಾವ್ಯ ಗುಣ ಅಭಿವ್ಯಕ್ತಿಯ ಕಲೆ ವಿಶೇಷವಾಗಿವೆ.

ರಾಯಚೂರು ಜಿಲ್ಲೆಯ ಮಸಳಿಕಲ್ಲು ಗ್ರಾಮ ಪಕ್ಕದ ಬೆಟ್ಟದ ಮೇಲೆ ಮುಕ್ತಾಯಕ್ಕನ ಸಮಾಧಿ ಇದೆ ಸಮಾಧಿಯ ಮೇಲೆ ಗುಡಿಯನ್ನು ಕಟ್ಟಿದ್ದಾರೆ. ಆ ಬೆಟ್ಟದಲ್ಲಿ ಅಜಗಣ್ಣ ತಪಸ್ಸು ಮಾಡಿದ ಗುಹೆ ಇದೆ ಆಬೆಟ್ಟಕ್ಕೆ ಅಜಗಣ್ಣನ ಬೆಟ್ಟ ಎಂದು ಕರೆಯುತ್ತಾರೆ. ಶಿವಮೊಗ್ಗಾ ಜಿಲ್ಲೆಯ ಹಳೆ ಮುತ್ತಿಗೆಯಲ್ಲಿ ಅಜಗಣ್ಣ ಮುಕ್ತಾಯಕ್ಕರ ಸಮಾಧಿ ಇದೆ ಗುಡಿಯಲ್ಲಿ ಲಿಂಗಾಕರದ ಎರಡು ಕಲ್ಲುಗಳಿದ್ದು ಅವು ಅಜಗಣ್ಣ ಮುಕ್ತಾಯಕ್ಕರ ಪ್ರತೀಕವೆಂದು ಹೇಳುತ್ತಾರೆ. ಅಲ್ಲಿ ನಿತ್ಯ ಪೂಜೆ ನಡೆಯುತ್ತದೆ.

ಆರ್ ಎಸ್ ಚಾಪಗಾವಿ

ಬೆಳಗಾವಿ: ಮೋ: 9480455146

loading...

1 COMMENT

LEAVE A REPLY

Please enter your comment!
Please enter your name here