ಜಗನ್ಮಾತೆ ಜಗದಂಬಾ ಸರಸ್ವತಿ

0
132

ವೇದಗಳಲ್ಲಿ  ಮಾತೆಗೆ ನಿರ್ಮಾತೆ ಎಂದು, ಕುರಾನದಲ್ಲಿ ತಾಯಿಯ ಹೆಜ್ಜೆಯಲ್ಲಿ ಸ್ವರ್ಗವಿದೆ. ಎಂದು ಹೇಳಲಾಗಿದೆ. ಮಾತಾ ಪಿತರನ್ನು ಗೌರವದಿಂದ ಕಾಣಬೇಕೆಂದು ಬೈಬಲ್ನಲ್ಲಿ  ಇದೆ.  ಗ್ರಂಥಸಾಹಾಎಬದಲ್ಲಿ ಮಾತೆಗೆ ಮಾನ್ಯತೆ ನೀಡಲಾಗಿದೆ. ಭೂಮಿಗಿಂತಲೂ ಮಾತೆಯೇ ಮಹಾನ್  ಎಂದು  ವೇದವ್ಯಾಸರು ಹೇಳಿದ್ದಾರೆ.  ಮಾತೆಯೇ ಮೊದಲ ಗುರು ಎಂಬ ಮಹಿಮೆ ಇದೆ. ಪುತ್ರನು  ಕುಪುತ್ರನಾಗುವನು ಆದರೇ  ಮಾತೆ ಕುಮಾತೆ ಆಗುವದಿಲ್ಲ  ಎಂದು ಗಾದೆಮಾತು ಇದೆ.

ಜಗತ್ತಿನಾದ್ಯಂತ ಅನೇಕ ಮಹಾಮಾತೆಯರು, ವೀರಮಾತೆಯರು, ತಪಸ್ವಿನಿಯರು,  ಶಿವಶರಣೆಯರು  ಆಗಿಹೋಗಿದ್ದಾರೆ. ಆದರೆ ಈಶ್ವರೀಯ  ವಿಶ್ವ ವಿದ್ಯಾಲಯದ ಇತಿಹಾಸದಲ್ಲಿ ತನ್ನದೇ ಆದ  ವಿಶೇಷ  ಸ್ಥಾನಮಾನವು ಜಗದಂಬಾ ಸರಸ್ವತಿ ಅವರಿಗೆ ಸಲ್ಲುತ್ತದೆ. ಜಗದಂಬಾ ಸರಸ್ವತಿ ಅವರ ಜನ್ಮವು  ಅಮ್ರಥಸರದಲ್ಲಿ ಆಯಿತು ಅವರ ಲೌಕಿಕ ಹೆಸರು  ರಾಧಾ ಅವರ ವ್ಯಕ್ತಿತ್ವವನ್ನು ನೋಡಿದಾಗ  ದಿವ್ಯಲೋಕದಿಂದ  ಬಂದಿರುವ ದೇವಿಯಂತೆ ಭಾಸವಾಗುತ್ತಿತ್ತು . ಅವರು ಪ್ರತಿಭಾವಂತ ಹಾಗೂ ಚಮತ್ಕಾರಿ ಬುದ್ದಿ ಉಳ್ಳವವರಾಗಿದ್ದರು. ಲೌಕಿಕ ವಿದ್ಯೆಯಲ್ಲಿ ಯಾವತ್ತು ಪ್ರಥಮ ಸ್ಥಾನ ವೀಣಾವಾದನ ಹಾಗೂ ಗಾಯನ ಕಲೆಯಲ್ಲಿ ನಿಪುಣರಾಗಿದ್ದರು.

1937 ರಲ್ಲಿ ದಾದಾ ಲೇಖರಾಜ ಅವರ ಮೂಲಕ ನಿರಾಕಾರ ಶಿವ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾಪನೆ  ಮಾಡಿದರು. ಆಗ ಅವರ ಮನೆಯಲ್ಲಿ ನಡೆಯುವ ಸತ್ಸಂಗಕ್ಕೆ ಲೌಕಿಕ  ತಾಯಿಯ  ಜೊತೆ ರಾಧಾ ಅವರು ಹೋಗುತ್ತಿದ್ದರು. ಸತ್ಯ ಜ್ಞಾನವನ್ನು ಕೇಲಿದ ನಂತರ ಸಂಸಾರಿಕ  ಸುಖಗಳನ್ನು ತ್ಯಜಿಸಿ, ಆ ಜೀವನ ಬ್ರಹ್ಮಚರ್ಯದ ಪಾಲನೆ  ಮತ್ತು  ಈಶ್ವರೀಯ  ಸೇವೆ ಮಾಡುವ  ನಿರ್ಣಯಕ್ಕೆ ಬಂದರು. ಅವರು ತಮ್ಮ ಸರ್ವಸ್ವವನ್ನು  ಪ್ರಭುವಿಗೆ  ಅರ್ಪಣೆ ಮಾಡಿದರು.  1937 ರ ಅಕ್ಟೌಬರ ತಿಂಗಳಲ್ಲಿ ರಾಧಾ ಅವರ ಜೊತೆಗೂಡಿ ಅನ್ಯ ಜ್ಞಾನ  ಪಾರಂಗತ ಕನ್ಯೆಯರು, ಮಾತೆಯರು,  ಈಶ್ವರೀಯ  ಕಾರ್ಯದಲ್ಲಿ ತನ್ನ ತನು ಮನ ಧನವನ್ನು ಸಮರ್ಪಣೆ  ಮಾಡಿ, ಕಾರ್ಯಕಾರಿಣಿ  ಸಮಿತಿಯನ್ನು ರಚಿಸಿದರು. ರಾಧಾ ಅವರಿಗೆ ಮಧುರ ಹಾಗೂ ಪ್ರಭಾವಶಾಲಿ ವಾಣಿಯ ವರದಾನವೂ  ಜನ್ಮದಿಂದಲೇ ಪ್ರಾಪ್ತವಾಗಿತ್ತು. ಅವರ ಮುಖ ಕಮಲದಿಂದ  ಬಂದಿರುವ ವರದಾನಿ ಮಹಾವಾಕ್ಯಗಳಿಂದ  ಅನೇಕರಲ್ಲಿ ಪರಿವರ್ತನೆ ಕಂಡು ಬರುತ್ತಿತ್ತು. ಅವರು ನಿಜವಾಗಲು  ಜ್ಞಾನದ ಸತ್ಯಜೀವಿ ಆಗಿದ್ದರು.  ತ್ಯಾಗ,  ತಪಸ್ಯಾ ಸೇವೆಯ ಪ್ರತಿಕ ವಾಗಿದ್ದರು. ರಾಧಾ ಅವರು  ತಮ್ಮ ವಿಶಾಲ ಬುದ್ದಿಯಿಂದ ಪರಮಾತ್ಮನ ದಿವ್ಯ  ಸಂದೇಶವನ್ನು ಮಾತ್ರ ವಾತ್ಸಲ್ಯದಿಂದ ನೀಡಿದರು. ಆಗ ಅವರಲ್ಲಿ ಇರುವ  ಮಾತಾಸ್ವರೂಪವನ್ನು ಕಂಡು  ಜನರು ಮಮ್ಮಾ  ಎಂಬ ಬಿರುದು ಪ್ರಧಾನ ಮಾಡಿದರು. ಪರಮಪಿತ  ಪರಮಾತ್ಮನು  ಅವರಿಗೆ  ಜಗದಂಬಾ ಸರಸ್ವತಿ ಎಂಬ ಅಮರ ವರದಾನವನ್ನು ನೀಡಿ  ಜಗನ್ಮಾತೆ ಜಗತಜನನಿ  ಎಂಬ ಬಿರುದು ನೀಡಿದರು. ಅವರಲ್ಲಿ ಇರುವ ಕುಶಲ ಪ್ರಶಾಸಕರು ಆಗಿದ್ದರು. ಕರ್ವಯೋಗಿಯ ಜೀವನದಲ್ಲಿ ಎರಡು  ನಿಯಮಗಳ ಪಾಲನೆಗೆ ಅವರು ವಿಶೇಷ ಗಮನ ಹರಿಸಿದರು. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು, ಭಗವಂತನ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಸಂಪೂರ್ಣ ಪಾಲಿಸಬೇಕು.

ಈಶ್ವರೀಯ ನಿಯಮಗಳ ಪಾಲನೆ  ಮಾಡುವರಲ್ಲಿ ಕಾಳಿ ಹಾಗೂ ಈ ಶೀತಲಾದೇವಿ ರೂಪವನ್ನು ಅವರು ತಾಳಿದರು.

ಸರ್ವರ ಮನೋಕಾಮನೆಗಳನ್ನು ಪೂರ್ಣಗೊಳಿಸಿ  ಅನ್ಯರಿಗೆ ಮಹಾದಾನಿ  ವರದಾನಿ ಆಗಿ, ವಿಷಯ ವಾಸನೆಗಳಿಂದ  ಮುಕ್ತ ಮಾಡಿದರು ಮಧುರತೆ  ಕೋಮಲತೆ ಸ್ನೇಹ, ನಿರ್ಮಲತೆ, ಸರಳತೆ, ನಮ್ರತೆ, ಶಾಂತತೆ, ಪವಿತ್ರತೆ ಮುಂತಾದ ದೈವೀಗುಣಗಳು ಹಾಗೂ ಕಲೆಗಳನ್ನು ಕಲಿಯಲು ಅವರ ಜೀವನ ಅನೇಕರಿಗೆ ಪ್ರೇಣಾದಾಯಕವಾಗಿತ್ತು. ಜಗದಂಬಾ ಸರಸ್ವತಿ ಅವರು  24-06-1965 ರಂದು ತನ್ನ ಸಾಕಾರ ದೇಹವನ್ನು ತ್ಯಜಿಸಿದರು. ಈ ದಿನವನ್ನು ಈಶ್ವರೀಯ  ವಿಶ್ವವಿದ್ಯಾಲಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ವಿಶ್ವಾಸ ಸೋಹೋನಿ

     ಧಾರವಾಡ

 

loading...

LEAVE A REPLY

Please enter your comment!
Please enter your name here