ನ್ಯಾಯಾಂಗಕ್ಕೆ ಅಗೌರವ

0
55

ಸರಕಾರದಲ್ಲಿ  ಉನ್ನತ ಸ್ಥಾನದಲ್ಲಿ ಇರುವವರು ನ್ಯಾಯಾಂಗಕ್ಕೆ ಅಗೌರವ  ತೋರಿಸುವ ಕಾರ್ಯವನ್ನು  ಪದೇ ಪದೇ  ಮಾಡತೊಡಗಿರುವುದು ಕಳವಳಕರವಾದ  ಸಂಗತಿಯಾಗಿದೆ. ಆದರೆ ನ್ಯಾಯಾಲಯಗಳ ಮತ್ತು ಕಾನೂನು ಈ ನಾಯಕರಿಗಿಂತ  ದೊಡ್ಡದಾಗಿರುತ್ತದೆ. ನ್ಯಾಯಾಲಯ ಮತ್ತು ಕಾನೂನಿನ ಮುಂದೆ ಸರಿಸಮಾನರು ಎಂಬ ಸತ್ಯವನ್ನು ಅವರು ಅರಿತು ಕೊಳ್ಳಬೇಕಾಗಿದೆ. ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಎಂಬ  ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿದೆ. ಇದರಿಂದ ಅವರ ಪ್ರಕರಣದ ವಿಚಾರಣೆ  ನ್ಯಾಯಾಲಯದಲ್ಲಿ  ನಡೆಯತೊಡಗಿದೆ. ಆದರೆ ಅವರು ಪದೇ ಪದೇ ನ್ಯಾಯಾಲಯದ ಕಲಾಪಗಳಿಗೆ ಬಾಗವಹಿಸದೆ ಇರುವುದರಿಂದ ನ್ಯಾಯಾಲಯ ಈಗ ಅವರಿಗೆ ಜಾಮಿನು ರಹಿತ ವಾರಂಟು ಹೊರಡಿಸಿದೆ. ಇದು ಇದೇ ಮೊದಲ ಬಾರಿ ನಡೆದಿರುವ ಪ್ರಕರಣ ಅಲ್ಲ ಈ ರೀತಿ ಹಿಂದೆ ಹಲವಾರು ಪ್ರಕರಣಗಳು ನಡೆದಿವೆ. ನಾಯಕರ ವರ್ಯನೆಗೆ ಬೇಸತ್ತು ನ್ಯಾಯಾಲಯಗಳು ಈ ರೀತಿ ಮನೆಯ ಅಸ್ತ್ತ್ರವನ್ನು ಪ್ರಯೋಗಿಸಿ  ಜಾಮೀನು  ರಹಿತ ವಾರಂಟ ಜಾರಿಗೊಳ್ಳುತ್ತಲೆ ಬಂದಿದೆ.  ಆದರೂ ಬುದ್ದಿಕಲಿಯದ ಈ ನಾಯಕರು  ನ್ಯಾಯಾಲಯಗಳಿಗೆ ಅಗೌರವ  ತೋರಿಸುವ ಪ್ರವೃತ್ತಿಯನ್ನು ಮುಂದು ವರಿಸುತ್ತಲೇ ಬರುತ್ತಿರುವುದು  ಕಳವಳಕರ ಸಂಗತಿಯಾಗಿದೆ.

ವಾರಂಟ ಹೊರಟ ಮೇಲೆ ನ್ಯಾಯಾಲಯಕ್ಕೆ ಹಾಜರಾಗುವ ಇವರು ಮೊದಲೇ  ಹಾಜರಾಗಿ ವಾರಂಟ ಹೊರಡಿಸುವುದಕ್ಕೆ ಅವಕಾಶ ನೀಡದೆ ಹೋದರೆ  ಈ ರೀತಿಯ ಪ್ರಸಂಗಗಳಿಗೆ ಅವಕಾಶವೇ ಇರುವುದಿಲ್ಲ ಆ ರೀತಿ ಮಾಡಿದರೆ  ಈ ನಾಯಕರ ಗನತೆ ಗೌರವಗಳು  ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಆದರೆ ಅಸಡ್ಡೆ ತೋರಿಸಿ ಈ ರೀತಿ ವಾರಂಟ ಪಡೆದರೆ  ಅವರ ಘನತೆ ಗೌರವಗಳು ಮಣ್ಣು ಪಾಲಾಗುತ್ತವೆ ಎಂಬುದನ್ನು ಅವರು ಅರಿತು ಕೊಳ್ಳುವ ಕಾರ್ಯವನ್ನು ಈ ನಾಯಕರು ಮಾಡಬೇಕಾಗಿದೆ. ಸರಕಾರದಲ್ಲಿ ಜವಾಬ್ದಾರಿಯುತವಾದ ಸ್ಥಾನದಿಂದ ಇರುವವರು ನ್ಯಾಯಾಂಗದ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಭೇಕು. ಅಂದರೆ ಮಾತ್ರ ಅವರು ತಮಗಿರುವ ಗೌರವವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.  ಇಲ್ಲದಿದ್ದರೆ ತಾವು ಮಾಡುವ ಕಾರ್ಯದಿಂದ ಅವರೇ ತಮ್ಮ ಗೌರವ ಪ್ರತಿಷ್ಠೆಗಳನ್ನು ತಾವೇ ಹಾಳು ಮಾಡಿಕೊಂಡಂತೆ  ಆಗುತ್ತದೆ. ಆದ್ದರಿಂದ ನಾಯಕರು ತಮ್ಮ ಮೇಲೆ ಇರುವ ಗುರುತರವಾದ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯ ಮಾಡುವ ಕೆಲಸವನ್ನು ಮಾಡಬೇಕು ಇಲ್ಲದಿದ್ದರೆ ನ್ಯಾಯಾಲಯಗಳು ಇದೇ ರೀತಿ ವಾರಂಟ ಹೊರಡಿಸಿ  ಅವರಿಗೆ ಪಾಠ ಕಲಿಸುವ ಕಾರ್ಯವನ್ನು ಮಾಡುವದು ಅನಿವಾರ್ಯವಾಗಿ ಪರಿಣಮಿಸುತ್ತದೆ ಎಂಬುದನ್ನು ಅರಿತುಕೊಳ್ಳುವ ಕಾರ್ಯವನ್ನು ಅವರು ಮಾಡಬೇಕು.

 

loading...

LEAVE A REPLY

Please enter your comment!
Please enter your name here