ಗುರು ಪೂರ್ಣಿಮಾ – ಗುರುವಿನ ಮಹತ್ವ (ವೈಶಿಷ್ಟ್ಯ)

0
1838

ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಗೆ  ಗುರು ಪೂರ್ಣಿಮಾ ಅಥವಾ  ವ್ಯಾಸ ಪೂರ್ಣಿಮೆ ಆಚರಣೆ ಇದೆ. ವ್ಯಾಸರನ್ನು  ನಾವು ಆದಿ ಗುರು  ಎಂದೂ ಪೂಜಿಸುತ್ತೇವೆ. ಇಂದು ದಿನಾಂಕ 3-7-2012 ಮಂಗಳವಾರ  ಗುರು ಸ್ಮರಣೆ  ಪೂಜೆ ಂಆಡಬೇಕು. ಈ ದಿನ ಗುರು  ಪಾದ ಪೂಜೆ  ಮಾಡಿ ಅವರಿಗೆ ಗುರು ದಕ್ಷಿಣೆ ಸಮರ್ಪಿಸಬೇಕು. ವ್ಯಾಸ ಮಹರ್ಷಿಗಳು  ಪುನಃ  ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರೆಂದು ಭಾವುಕ ಭಕ್ತರ ಶ್ರದ್ದೆ ಇದೆ.   ನಿಜವಾದ ಗುರು ಯಾರು? ಇಂದು  ಗುರು ಶಿಷ್ಯ  ಸಂಬಂಧ ಹೇಗಿದೆ.? ಹಿಂದೆ ಹೇಗಿತ್ತು? ಈಗ ಹೀಗೇಕಾಗಿದೆ. ಇದನ್ನು ಸರಿ ಪಡಿಸಲು ಏನು ಮಾಡಬೇಕು?  ಎಂಬ ವಿಚಾರಗಳನ್ನು ಮಂಥನ  ಮಾಡಿ ಗುರು ಸೇವಾ ತತ್ಪರರಾಗಬೇಕೆಂಬುದೇ  ಈ ಲೇಖನ ಉದ್ದೇಶ.

ಗುರು ಎಂದರೆ  ಯಾರು :– ವಿದ್ಯಾದಾನ ಮಾಡುವವನು ಉಪಾದ್ಯಾಯ, ಶಿಕ್ಷಕ ಉಪದೇಶಿಸುವವನು ಎಂದರ್ಥ ಗುರು ಎಂಬ ಪದದಲ್ಲಿನ ಗು  ಎಂಬ ಅಕ್ಷರಕ್ಕೆ ಅಂಧಕಾರವೆಂದು ರು, ಎಂಬುದಕ್ಕೆ ಅದನ್ನು  ನಿರೋಧಿಸುವವನೆಂದು ಅರ್ಥೈಸುತ್ತಾರೆ. ಗುರು ಪೂಜೆ ಮಾಡದೇ ಯಾವ ಕಾರ್ಯವನ್ನು ಆರಂಭಿಸಬಾರದು. ತಂದೆಯನ್ನು ಉಪನಯನ ಮಾಡಿದವನನ್ನು  ವಿದ್ಯಾದಾನ ಮಾಡಿದವನನ್ನು ಅನ್ನದಾತನನ್ನು ಭಯದಲ್ಲಿ  ರಕ್ಷಿಸಿದವನನ್ನು ಈ ಐವರನ್ನು ಗುರುಗಳೆಂದು ಪರಿಗಣಿಸುತ್ತಾರೆ. ಪ್ರಾಚೀನ  ಭಾರತದ ಶಿಕ್ಷಣ ಪದ್ದತಿಯಲ್ಲಿ ಶಿಷ್ಯರನ್ನು  ಗುರು ತನ್ನಾಶ್ರಮಕ್ಕೆ ಬರಮಾಡಿಕೊಂಡು  ಧಾರ್ಮಿಕ ಮತ್ತು ಲೌಕಿಕ  ಶಿಕ್ಷಣಗಳೆರಡನ್ನು ನೀಡುತ್ತಿದ್ದನು. ಶಿಷ್ಯರು ತಮ್ಮ ಗುರುವಿನ  ಬಗ್ಗೆ  ಅನನ್ಯ  ಭಕ್ತಿಯಿಂದ  ಇದ್ದು ವಿದ್ಯಾರ್ಜನೆ ಮಾಡುತ್ತಿದ್ದರು.  ಆ ಗುರುಗಳ  ಆಶ್ರಮದಲ್ಲಿದ್ದು ಅವರ ಸೇವೆ  ಮಾಡಿ ಅವರ  ಮನೆಯ ಎಲ್ಲ ಕೆಲಸಗಳನ್ನು ಭಕ್ತಿಯಿಂದ ಶ್ರದ್ದೆಯಿಂದ ಶುದ್ಧ  ಮನಸ್ಸಿನಿಂದ ಸ್ವಾರ್ಥರಹಿತನಾಗಿ ಮಾಡಿ ಗುರುಕೃಪೆಗೆ ಪಾತ್ರನಾಗುತ್ತಿದ್ದನು. ಅಂಥ ಶಿಷ್ಯನಿಗೆ ಗುರು ಅನುಗ್ರಹ ಮಾಡುತ್ತಿದ್ದನು.  ಗುರು ಪೀಠ ಪರಂಪರೆಯ ಮಹತ್ವ ಇಂದಿಗೂ  ಇದೆ.  ಕಾಲ ಬದಲಾಗಿದೆ. ಹಿಂದಿನ ಗುರು ಶಿಷ್ಯ ಸಂಬಂಧ ಈಗ ಉಳಿದಿಲದಲ ಇದಕ್ಕೆ ಕಾರಣ  ಧನ ಅಧಿಖಾರಗಳೆರಡೇ ಕಾರಣ. ಆದರ್ಶ ಗುರು ಆದರ್ಶ ಶಿಷ್ಯ ಇಂದು ದುರ್ಲಭವಾಗಿದೆ.

ಗುರುವಿನ ಅವಶ್ಯಕತೆ: ಎಲ್ಲ ಧಾರ್ಮಿಕ ಪಂಥಗಳಿಗೂ ಒಬ್ಬ ಗುರು ಇದ್ದಾನೆ. ಆ ಪಂಥ  ಮುಂದುವರೆಯ ಬೇಕಾದರೆ ಅವನ ಅವಶ್ಯವಿದೆ. ಸತ್ಯಸ್ವರೂಪದ ಮೂಲತತ್ವಗಳು ಧ್ಯಾನ ಅಥವಾ ಗ್ರಂತಾವಲೋಕನದಿಂದಲೇ  ಲಭಿಸಲಾರವೆಂಬುದು, ದೈವ  ಪ್ರೇರಣೆಯ  ಪರಂಪರೆಯ ಗುರು ಅಗತ್ಯವೆಂಬ  ಭಾವನೆಯೂ ಇದಕ್ಕೆ  ಮುಖ್ಯಕಾರಣ. ಆದಿ ಗುರುವಿನಿಂದ  ಪರಂಪರಾನುಗತವಾಗಿ ಮುಂದಿನ ಗುರುಗಳಿಗೆ  ಹಸ್ತಗತವಾಗುತ್ತ ಬಂದಿರುವ ಆ ಸತ್ಯದರ್ಶನ ಕೇವಲ  ಮಂತ್ರ  ಪಠಣದಿಂದ  ಲಭ್ಯವಾಗುತ್ತಿಲ್ಲ. ಅದು ಗುರು ಮುಖೇನ ಲಭಿಸಬೇಕು. ಗುರು ಅನುಗ್ರಹಿಸುವ ದೀಕ್ಷೆಯಿಂದ  ಮಾತ್ರ ಸಾಧ್ಯ ಧ್ಯಾನಮಾರ್ಗವು  ಕಠಿಣವು  ಮತ್ತು  ದುರ್ಗಮವೂ  ಆಗಿದೆ. ಅದಕ್ಕೆ ಪೂರ್ವಭಾಗಿಯಾಗಿ ಸಾಧಿಸಬೇಕಾದ ಶಾಂತಿ  ಸಂಯಮಗಳು ಬೇಕು.  ಅವುಗಳನ್ನು ಅನುಷ್ಠಾನಕ್ಕೆ ತರಲು ಸಮರ್ಥ ಗುರುವಿನ ನಿರ್ದೇಶನ ಬೇಕು. ಆದ್ದರಿಮದ ಯಾವದೇ  ಧರ್ಮದ ಅನುಷ್ಠಾನಕ್ಕೆ  ಯೋಗ್ಯ ಆದರ್ಶ ಸತ್ಪರಂಪರೆ ರಕ್ಷಿಸಿ  ಪೋಷಿಸಿಕೊಂಡು ಹೋಗಲು ಒಬ್ಬ ಗುರುಬೇಕು.

ಗುರು ಪೂಜಾ ಕ್ರಮ: ಇಂದು ನಮ್ಮ ಮನೆಯಲ್ಲಿ  ಸಹ ಗುರು ಪೂಜಾ ಮಾಡಬೇಕು.  ಮೊದಲು  ಸ್ನಾನಾದಿ ನಿತ್ಯ  ಕರ್ಮಾದಿಗಳನ್ನು ಮುಗಿಸಿ ಗುರು ಪರಂಪರಾ ಸಿದ್ದಯರ್ಥಂ ವ್ಯಾಸ ಪೂಜಾಂ ಕರಿಷ್ಯೇ  ಎಂದು ಮಾಡಿ ಒಂದು ಶುಭ್ರ  ವಸ್ತ್ತ್ರವನ್ನು  ಹಾಸಿ ಅದರ ಮೇಲೆ  ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ  ದಕ್ಷಿಣದ  ಕಡೆಗೆ ಗಂಧದಿಂದ  ಹನ್ನೆರಡು ರೇಖೆಗಳನ್ನು ಎಳೆಯುತ್ತಾರೆ. ಇದುವೇ ವ್ಯಾಸಪೀಠ ನಂತರ ಬ್ರಹ್ಮ ಪರಾತ್ತರ ಶಕ್ತಿ, ವ್ಯಾಸ, ಶುಕದೇವ, ಶಂಕರಾಚಾರ್ಯ,  ಯಾಜ್ಞವಲ್ಕ್ಯ  ಚಿದಂಬರಂ ಶೇಷಾಚಲ, ಮೃತ್ಯುಂಜೇಶ್ವರ  ಮತ್ತು ಅಭಿಷ್ಟ ಗುರು ಸಾಧು ಸಂತರನ್ನು ಆ ಪೀಠದ ಮೇಲೆ  ಆ ವಾಹನ ಮಾಡಿ  ಅವರಿಗೆ ಷೋಡಶೋಪಚಾರಗಳಿಂದ ಪೂಜಿಸಿ  ಧ್ಯಾನ  ಮಾಡುತ್ತಾರೆ. ಈ ದಿನ  ದೀಕ್ಷಾಗುರು  ಮತ್ತು  ತಂದೆ  ತಾಯಿಯವರ ಪೂಜಾ ಮಾಡುವ ಪದ್ದತಿಯೂ ಇದೆ. ಗುರುಪೂರ್ಣಿಮೆ ದಿನ  ಗುರುತತ್ವವು  ಬೇರೆ ಯಾವದೇ ದಿನಕ್ಕಿಂತ  ಒಂದು ಸಾವಿರ ಪಟ್ಟು ಅಧಿಕ ಕಾರ್ಯ ನಿತವಾಗಿರುತ್ತದೆ. ಆದ್ದರಿಂದ ಈ ದಿನ ಗುರುಗಳಿಗೆ ಸಲ್ಲಿಸಿದ  ಸೇವೆ  ಮಹತ್ವಪೂರ್ಣ ಹಾಗೂ ವಿಶಿಷ್ಟ, ಇದರಿಂದ ಗುರುಕೃಪಾಪಾತ್ರರಾಗುತ್ತೇವೆ.

ಗುರು ಪೂಜಾ ಕ್ರಮದಲ್ಲಿ ಇನ್ನೊಂದು  ರೀತಿ ಇದೆ. ಕೆಲವು ಸಂದರ್ಭಗಳಲ್ಲಿ ಪ್ರತ್ಯಕ್ಷ  ಮಾನವರೂಪಿ ಸಜೀವ ಗುರುವನ್ನೇ ಕೂಡ್ರಿಸಿ  ಪೂಜಿಸುವದುಂಟು ಅವರನ್ನು ಒಂದು  ವಿಶಾಲವಾದ ಪೀಠದಲ್ಲಿ ಕೂಡಿಸಿ ಪಾದ ಪೂಜೆ ಮಾಡಿ, ಅವರಿಗೆ  ಆರತಿ ಮಾಡುವದು, ಧೂಪ ಹಾಕುವದು ಮಂತ್ರ ಹೇಳುವದು  ಶಿರ ಸಾಷ್ಟಾಂಗ ನಮಸ್ಕಾರ  ಸಲ್ಲಿಸುವದು ಬಿಕ್ಷೆ ನೀಡುವದು ಮಂತ್ರ ಪುಷ್ಪ ಮಾಡುವದು, ಅವರಿಂದ ಫಲ ಮಂತ್ರಾಕ್ಷತೆ  ಪಡೆಯುವುದು  ಪಾದ ತೊಳೆದ ನೀರನ್ನು ಭಕ್ತ ವೃಂದದವರು ತೀರ್ಥ  ಎಂದು  ಸೇವಿಸುವದು. ಕೆಲವು  ಗುಡ್ಡಗಾಡು ಬಣಗಳಲ್ಲಿ ಗುರು ಅಗಿದ ತಾಂಬೂಲವನ್ನು  ಶಿಷ್ಯಾದಿಗಳು  ಸೇವಿಸುತ್ತಾರೆ. 8-10 ವರ್ಷಗಳ  ಹಿಂದೆ ಪೂಜ್ಯ ಲಿಂಗೈಕ್ಯ  ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು  ಶಾಂಡಿಲ್ಯಾಶ್ರಮ ಹುಬ್ಬಳ್ಳಿ ಇವರು ಒಮ್ಮೆ ಒಬ್ಬ ಭಕ್ತನಮನೆಗೆ ಬಂದಾಗ ಅವರು ಅಗಿಯುತ್ತಿದ್ದ ತಾಂಬೂಲವನ್ನು ಪಡೆಯಲು ಪಾಳಿ ಹಚ್ಚಿ ನಿಂತ ಭಕ್ತರನ್ನು ಸ್ವತಃ ನಾನೇ  ನೋಡಿರುವೆ  ಭಾರತದಲ್ಲಿ ಇಂದಿಗೂ ಗುರುವೇ ದೇವರೆಂದು  ಪೂಜಿಸುತ್ತಿರುವ ಅನೇಕ ಪಂಥಗಳಿವೆ. ಆದ್ದರಿಂದಲೇ  ಗುರು  ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ  ಗುರುವೇ  ನಮಃ  ಎಂಬುದು  ಇಂದಿಗೂ ಸತ್ಯ.

ಈ ದಿನದ  ಮಹತ್ವ  ( ವೈಶಿಷ್ಟ್ಯ) ನಮ್ಮ ಜೀವನವನ್ನು  ಸಾರ್ಥಕಗೊಳಿಸಿದ ಗುರುವನ್ನು  ಸ್ಮರಿಸುವ ದಿನ. ನಮ್ಮ ವೇದಗಳು ಆಚಾರ್ಯ  ದೇವೋಭವ  ಎಂದು ಗುರುಗಳನ್ನು ಮನಸಾ ಗೌರವಿಸಿದ್ದಲ್ಲದೆ  ಅವರಿಗೆ ತಂದೆ – ತಾಯಿಗಳಿಗಿಂತ ಮಿಗಿಲಾದ ಸ್ಥಾನವನ್ನೂ ನೀಡಿದೆ. ಗುರು ಹೇಗಿರುವನು ಎಂಬ ತತ್ವ ಸಾರುವ ಒಂದು ಸುಭಾಷಿತ ಹೀಗಿದೆ.

ಅಜ್ಞಾನ  ತಿಮಿರಾಂಧಸ್ಯ  ಜ್ಞಾನಾಂಜನ ಶಲಾಕಯಾ|

ಚಕ್ಷುರುನ್ಮೀಲಿತಂ ದೇವ ತಸ್ಮೈ ಶ್ರೀ ಗುರುವೇ ನಮಃ

ಇದರ ಅರ್ಥ – ಶಿಷ್ಯನ ಅಜ್ಞಾನವೆಂಬ ಕಣ್ಣು ಬೇನೆಯನ್ನು ಜ್ಞಾನವೆಂಬ  ಕಣ್ಣು ಬೇನೆಯನ್ನು ಜ್ಞಾನವೆಂಬ ಅಂಜನದಿಂದ (ಕಡ್ಡಿಯಿಂದ) ಗುಣ ಪಡಿಸಿ, ಅವನ  ಕೀರ್ತಿ ಎಲ್ಲಡೆ ಪಸರಿಸುವಂತೆ ಮಾಡಿದ ಶ್ರೀ ಗುರುವಿಗೆ  ಕೃತಜ್ಞತೆ ಅಥವಾ  ನಮಸ್ಕಾರಗಳು ಇಂಥ ಗುರುವಿಗೆ  ವಂದಿಸಿ ನಾವು  ಕಾರ್ಯೋನ್ಮುಖರಾದಾಗ ಬಾಳಿನಲ್ಲಿ ಸುಖ  ಸಂಪತ್ತು ಖಚಿತ. ಹಿಂದೆ ಗುರು ಮುಂದೆ ಗುರಿ  ಇದ್ದಾಗ ಮಾತ್ರ ಕಾರ್ಯಗಳಲ್ಲಿ  ಯಶಸ್ಸು ನಿಶ್ಚಿತ ದೇವರಿಗಿಂತ  ಗುರು, ಗುರುವಿಗಿಂತ ಗುರುಕೃಪೆ  ದೊಡ್ಡದು. ರಾಮ, ಕೃಷ್ಣರೂ ಸಹ ವಿಶಿಷ್ಠ ವಿಶ್ವಾಮಿತ್ರ  ಸಾಂದೀಪನಿಗಳಂಥ ಗುರುಗಳ  ಸೇವೆ ಮಾಡಿ ಫಲ ಪಡೆದವರು.

ಸ್ಕಂದ ಪುರಾಣದಲ್ಲಿ ಬರುವ ಗುರು ಗೀತೆಯಲ್ಲಿ ಪ್ರಶಾಂತ ನಂದಾ ದೀಪದಮತೆ ಜ್ಞಾನ ಪ್ರಕಾಶ ಬಿತ್ತರಿಸುವ  ಸದ್ಗುರುವಿನ ಮಹಿಮೆಯನ್ನು ವಿಸ್ತಾರವಾಗಿ ಉಲ್ಲೇಖಿಸಿದೆ.

ಸಂತಶ್ರೇಷ್ಠ ಕಬೀರದಾಸರು ದೇವರಿಗಿಂತ ಗುರುವೇ  ಶ್ರೇಷ್ಠ ಏಕೆಂದರೆ ದೇವರ ಮಹಿಮೆಯ  ಪರಿಚಯ ಮಾಡಿಸಿದವನೇ ಗುರು ಎಂದು ಹೇಳಿದ್ದು ಮಾರ್ಮಿಕವಾಗಿದೆ. 30 ನೇ ಶತಮಾನದ ಪ್ರಸಿದ್ಧ ಆಂಗ್ಲ  ನಾಟಕಕಾರ ಹಾಗೂ ವಿಮರ್ಶಕ ಮತ್ತು ಕಾದಂಬರಿಕಾರ  ಜಾರ್ಜ ಬರ್ನಾಡ ಷಾ ಸಹ ಗುರುವಿನ ಗುಣಗಾನ ಹೀಗೆ ಮಾಡಿದ್ದಾನೆ.

                ಖಿಜ ಣಜಚಿಛಿಜಡಿ  ಚಿ ಠಿಜಢಿಠ  ತಿಠ ಛಿಡಿಜಚಿಣ ಠಟಿಜ ಟಟಿಜ ಟಿ ಚಿ ಠಟಿಜ ಛಠಥಿ  ಊಜ  ಣಜ ರಜಟಿಜಡಿಚಿಣಠ ಠ ರಠರಜ ಞಟಿಠಟಜಜರಜ, ಣಜ ಠಜಡಿಚಿಣಠ ಠ ಟಜಿಜ ಣಥಿಟಜ ಚಿಟಿಜ  ಜಣಡಿಠಜಡಿ ಠ ಣಜ ಚಿಜತಜಢಿಜ ಠಿಚಿಣ.

ಯಾವ ಗುರು ಶಿಷ್ಯನಿಗೆ ಶುದ್ಧ ಮನಸ್ಸು ಸಧೃಡ ಆರೋಗ್ಯ ಸುಜ್ಞಾನದ ಉಪಯುಕ್ತತೆ ಪಾರದರ್ಶಕ ಜೀವನ ಪದ್ದತಿ ಎಂಬ ವಿದ್ಯೆ  ಕಲಿಸುತ್ತ ದುಷ್ಪರಿಣಾಮ ವಿದ್ಯೆ ನಾಶ ಮಾಡುವನೋ ಅವನೇ ನಿಜವಾದ ಗುರು ಎಂದು ಬರ್ನಾಡ ಶಾ ಹೇಳಿದ ಸಾರಾಂಶ.ಗುರು ಬಯಸುವದಾದರೂ ಏನು? ಶಿಷ್ಯರು ಸಾಕಷ್ಟು ವಿದ್ಯೆ ಕಲಿಯಲಿ ನನ್ನಿಂದ ಕಲಿತ ವಿದ್ಯೆಯಿಂದ  ಅವರ ಬದುಕು ಶುದ್ಧ ಬಂಗಾರದಂತಾಗಲಿ ಅವರ ಕೀರ್ತಿ ದಿಗಂತಾಚೆಗೆ ಪಸರಿಸಲಿ. ಗುರುವಿಗಿಂತ ಮಿಗಿಲಾದ ತತ್ವ  ತಪಸ್ಸು  ಬೇರೊಂದಿಲ್ಲ ಈ ರೀತಿಯ ಗುರು  ಶಿಷ್ಯ  ಪ್ರೀತಿ ಭಾರತೀಯ  ಸಂಸ್ಕ್ಕತಿಯ ಆದರ್ಶ ಇಂಥ ಗುರುವಿಗೆ  ಮುಗಿಲಾದ ತತ್ವ ತಪಸ್ಸು ಬೇರೊಂದಿಲ್ಲ . ಈ ರೀತಿಯ ಗುರು ಶಿಷ್ಯ ಪ್ರೀತಿ ಭಾರತೀಯ  ಸಂಸ್ಕ್ಕತಿಯ  ಆದರ್ಶ ಇಂಥ ಗುರುವಿಗೆ  ವರ್ಷಕ್ಕೊಮ್ಮೆ  ಅಭಿನಂದನೆ ಸಲ್ಲಿಸುವದೇ ಗುರು ಪೌರ್ಣಿಮೆ  ಸಂದೇಶ ಗುರುವಿನ  ಮಹತ್ವ ಸಾರುವ ಅಮೃತ  ಸಮಾನ ಶಬ್ದಗಳು  ಕೆಳಗಿನಂತಿವೆ.

ಗುರು ಶಿಷ್ಯನ ಅಜ್ಞಾನವನ್ನು ಹೋಗಲಾಡಿಸಿ ಅವನ  ಆಧ್ಯಾತ್ಮಿಕ ಉನ್ನತಿಗಾಗಿ ಅವನಿಗೆ  ಸಾಧನೆಯನ್ನು  ಹೇಳುತ್ತಾರೆಯೋ ಅವರನ್ನು ಗುರು ಅನ್ನುತ್ತಾರೆ. ಗುರುಗಳು ಶಿವದಿಶೆಯಲ್ಲಿ  ಇರುವದರಿಂದ ಅವರಿಗೆ ತಾನಾಗಿಯೇ ಶಿಷ್ಯನ  ನೆನಪು ಆಗುವದಿಲ್ಲ.  ಆದರೆ ಶಿಷ್ಯನು ಗುರುಗಳನ್ನು ನೆನೆದರೆ ಬಿಂಬ ಪ್ರತಿಬಿಂಬ  ನ್ಯಾಯದಂತೆ ಗುರುಗಳಿಗೆ ಶಿಷ್ಯನ ನೆನಪಾಗುತ್ತದೆ.

ಗುರುಗಳ ಕೃಪಾದೃಷ್ಠಿಯಲ್ಲಿ ಶಕ್ತಿ, ಆನಂದ  ಮತ್ತು ಶಾಂತಿಯ ಲಹರಿಗಳು ಸಮಾವೇಶಗೊಂಡಿರುತ್ತವೆ. ಗುರುಕೃಪಾ  ಇದ್ದರೆ ಮಾತ್ರ ತೀವ್ರ  ಪ್ರಾರಬ್ಧದಿಂದ ಪಾರಾಗಲು ಸಾಧ್ಯವಾಗುವದು. ಗುರುಕೃಪಾ ಯೋಗಾನುಸಾರ ಸಾಧನೆ ಮಾಡುವ ಜೀವವು  ಬೇಗನೇ ಗುಣಾತ್ಮಕ ನಾಮ ಜಪದತ್ತ ಸಾಗುತ್ತದೆ.

ಗುರುಕೃಪಾ ಸಾಧನಾ ಸಾಧಕರು ತಾವಾಗಿಯೇ ನಿರ್ಗುಣ ನಾಮ ಜಪದ ಹಂತಕ್ಕೆ ಪ್ರವೇಶಿಸುತ್ತಾರೆ. ಗುರುಕೃಪಾ ಯೋಗದ ಜ್ಞಾನವನ್ನು ಅಧ್ಯಯನ ಮಾಡುವ ಅವಶ್ಯಕತೆ ಇರುವದಿಲದಲ. ಮತ್ತು ಕೃತಜ್ಞತೆಯಿಂದ ಅಹಂಭಾವ ಕಡಿಮೆ ಆಗುವದು,  ತೀವ್ರ ಮುಮುಕ್ಷುತ್ವ ಅಥವಾ  ಗುರು ಪ್ರಾಪ್ತಿಯ ತೀವ್ರ ತಳಮಳ ಈ ಗುಣದಿಂದಲೇ ಬೇಗನೆ ಗುರು ಕೃಪೆಯು ಸತತವಾಗಿ ಆಗುತ್ತಿರುತ್ತದೆ. ಗುರುಗಳು  ತಮಗೆ  ತಿಳಿದದ್ದೆಲ್ಲವನ್ನೂ ಶಿಷ್ಯನಿಗೆ  ಕಲಿಸಿ ಶಿಷ್ಯನನ್ನೂ  ಗುರುವನ್ನಾಗಿ ಮಾಡುತ್ತಾರೆ.

ವ್ಯಾಸೋಚ್ಪಿಷ್ಟಂ- ಮಹರ್ಷಿ ವ್ಯಾಸರ  ಪ್ರತಿಯೊಂದು ಶಬ್ದದಲ್ಲಿಯೂ ಚೈತನ್ಯವಿದೆ. ವ್ಯಾಸರು ದ್ವಾಪರಯುಗದಲ್ಲಿ ಬರೆದ ಗ್ರಂಥಗಳು ಕಲಿಯುಗದಲ್ಲಿನ ಪ್ರಸ್ತುತ ಕಾಲದಲ್ಲಿಯೂ  ಅಧ್ಯಯನಕಾರರಿಗೆ ಮಾರ್ಗದರ್ಶಕವಾಗಿವೆ. ಇವರು ಏಕಮೇವ ಅದ್ವಿತೀಯರು  ಅವರ ತುಲನೆಯಲ್ಲಿ ಯಾರೂ ಸಮನಾಗಿರಲು ಸಾಧ್ಯವಿಲ್ಲ ಅದಕ್ಕಾಗಿಯೇ ನಾವು ಆಸನದ  ಮೇಲೆ  ಕುಳಿತುಕೊಂಡಾಗ ಅದಕ್ಕೆ ವ್ಯಾಸ ಪೀಠ ಎಂದು  ಕರೆಯುತ್ತೇವೆ. ವ್ಯಾಸ ಪೀಠ ಸತ್ಯವನ್ನೇ ಮಾತನಾಡುತ್ತದೆ. ಲೋಕಗುರು ಭಗವಾನ್ ವೇಧವ್ಯಾಸರನ್ನು ಇಂದು  ಆರಾಧಿಸಬೇಕು. ಭಾರತೀಯ ಸಂಸ್ಕ್ಕತಿಯ ಶ್ರೇಷ್ಠ ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾಚೇತನ ವೇದವ್ಯಾಸರು. ಜ್ಞಾನರಾಶಿಗಳಾದ ವೇದಗಳನ್ನು  ಅಭ್ಯಾಸ ಮಾಡಲು ಅನುಕೂಲವಾಗುವಂತೆ ಋುಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ, ವೇದಗಳೆಂದು ವಿಭಾಗಿಸಿ ಪ್ರಸಿದ್ದವಾದ ಬ್ರಹ್ಮಸೂತ್ರ ಭಗವದ್ಗೀತೆ, ದಶೋಪನಿಷತ್ಗಳನ್ನು ವ್ಯವಸ್ಥಿತವಾಗಿ ನಿರೂಪಿಸಿಕೊಟ್ಟ  ಶ್ರೇಯಸ್ಸು ವ್ಯಾಸರಿಗೆ ಸಲ್ಲುತ್ತದೆ. ಪಂಚಮ ವೇದವೆಂದು ಪ್ರಸಿದ್ಧಯಾದ ಮಹಾಭಾರತ ರಚಿಸಿದರು. ಸರ್ವರಿಗೂ ಜ್ಞಾನಪ್ರಾಪ್ತಿಯಾಗಲಿ ಎಂದು ಕರ್ಮಠರನ್ನಾಗಿ ಮಾಡಲು  ಅನೇಕ ಉಪಾಸನೆ ಕ್ರಮಗಳನ್ನು ಪುರಾಣಗಳ ಮೂಲಕ ಉಪದೇಶಿಸಿದರು. 18 ಪುರಾಣಗಳನ್ನು ಲೋಕಕ್ಕೆ  ಸಮರ್ಪಿಸಿದವರು  ವೇದವ್ಯಾಸರು  ಮನುಕುಲದ ಮೋಕ್ಷ ರಾಜ್ಯ ಕಾರ್ಯ ನಿರ್ವಹಿಸಲು ಮಾರ್ಗದರ್ಶನ ಪಡೆಯಲು  ತಮ್ಮ ಮಹಾರಾಜ ತನ್ನ ಗುರುಗಳಾದ ಯೋಗೀಶ್ವರ ಯಾಜ್ಞವಲ್ಕ್ಯರಿಗೆ  ಸರ್ವಜ್ಞ  ಪೀಠಾಧಿಪತಿ ಸ್ಥಾನಕೊಟ್ಟ ಅವರಿಗೆ ಒಂದು ಸಾವಿರ ಸಾಲಂಕೃತ ಆಕಳುಗಳನ್ನು ಸಮರ್ಪಿಸಿದನು. ನಂತರದ ಅನೇಕ  ಗುರುಗಳು ವ್ಯಾರನ್ನು ಸ್ಮರಿಸಿದ್ದಾರೆ, ಆದ್ದರಿಮದಲೇ  ವ್ಯಾಸೋಚ್ಛಷ್ಟಂ ಜಗತ್ ಸರ್ವಮ್ ಎಂದರೆ ಎಲ್ಲ ಮುಂದಿನ ಪೀಳಿಗೆಯ ಗುರುಗಳು ವ್ಯಾಸರ ಪುನರುಕ್ತಿ ಮಾಡಿದ್ದಾರೆ.

ಹೀಗೆ ಗುರು ಎಂದರೆ ಅಖಂಡ ಜ್ಞಾನ ಜ್ಯೌತಿ ಜಡತ್ವಕ್ಕೆ  ಸ್ಪೂರ್ತಿ ತುಂಬಿ ಶಿಷ್ಯ ಚಿತ್ತಾಪಹಾರನಾಗಿ ತಾನು ಬೆಳಗಿ  ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು  ಗುರು ದೊರಕದಿದ್ದರೂ ಗುರುವಿನ ಮೂರ್ತಿಯನ್ನಿಟ್ಟು ಪೂಜಿಸಿ ಅವನಿಂದ ವಿದ್ಯೆ  ಪಡೆದ  ಏಕಲವ್ಯ ಬಾಲಕ ಆದರ್ಶ ಶಿಷ್ಯ ಗುರ್ವಾಜ್ಞೆಯನ್ನು   ನಿಷ್ಠೆಯಿಂದ ಪಾಲಿಸಿ ಗುರೂಪದೇಶ ಪಡೆದ ಶ್ರೇಷ್ಠ ಶಿಷ್ಯ ದಾನಶೂರಕರ್ಣ  ನಮ್ಮ ದೇಶದ ಪ್ರಥಮ ಉಪರಾಷ್ಟ್ತ್ರಪತಿ  ಡಾ. ಎಸ್. ರಾಧಾಕೃಷ್ಣ ಗುರುವಿಗಾಗಿ ತನ್ನ ಜನ್ಮದಿನವನ್ನೇ ಸಾರಿದರು. ಇವರ ಶಿಷ್ಯರು ಇವರನ್ನು ರೇಲ್ವೆ ಸ್ಟೇಶನ್ಕ್ಕೆ  ಚಕ್ಕಡಿ ಯಲ್ಲಿ ಕುಳ್ಳಿರಿಸಿಕೊಂಡು ತಾವೇ ಗೆಗಲು ಹಚ್ಚಿ ಎಳೆದುಕೊಂಡು  ಹೋದರು. ಇದು ಶಿಷ್ಯರು  ತೋರಿದ ಗುರುಭಕ್ತಿ .

ಸಧ್ಯದ ಕಾಲದ ಗುರು- ಶಿಷ್ಯ  ಸಂಬಂಧ ನೋಡಿ ಅಸಮಾಧಾನ ವಿಷಾದವಾಗುತ್ತಿದೆ. ಪರೀಕ್ಷೆಯಲ್ಲಿ ನಕಲು  ಮಾಡಲು  ಬಿಡದ ಗುರುವನ್ನು ಕೊಂದು ಹಾಕಿದ ಶಿಷ್ಯರುದ್ದಾರೆ. ಗುರು ಇಂದು ನಿಂತು ಕಲಿಸಬೇಕು. ಶಿಷ್ಯ ಕುಳಿತು  ಕಲಿಯಬೇಕು. ಆಧುನಿಕ  ಗುರು ಎನ್ನಿಸಿಕೊಳ್ಳುವವನೂ ಸಹ ಬದಲಾಗಿದ್ದಾನೆ. ವಿದ್ಯೆ ಧನಕ್ಕಾಗಿ ಮಾಡಬಾರದು ಎಂದು  ಹಿಂದೊಂದು ಕಾಲದಲ್ಲಿತ್ತು. ಆಧುನಿಕ ಕಾಲದಲ್ಲಿ  ಎಲ್ಲವೂ ಬದಲಾಗಿದೆ.  ಹಿಂದೆ  ಗುರುವಿಗೆ  ರಾಜಾಶ್ರಯ ಇತ್ತು. ಇಂದು ಅಧ್ಯಯನ  ಅಧ್ಯಾಪನದ ರೀತಿ ಬದಲಾಗಿದೆ. ಇದು ಉದ್ಯೌಗವಾಗಿದೆ. ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಗುರುವಿನ  ಸ್ಥಾನಮಾನದಲ್ಲಿ ವೈಪರಿತ್ಯ  ಎದ್ದು ಕಾಣುತ್ತಿದೆ. ಸರ್ವವೂ ಸ್ವಾರ್ಥಮಯ ಜಗತ್ತು.

ಇಂಥ ಕಲಿಕಲ್ಮಷ  ಕಾಲದಲ್ಲಿಯೂ ಕೂಡಾ ಬೆರಳೆಣಿಕೆಯಷ್ಟು  ಗುರುಕುಲ ಪದ್ದತಿ ಶಿಕ್ಷಣ ಮರುಭೂಮಿಯಲ್ಲಿಯ ಓಯಾಸಿಸ್ ದಂತೆ ಕೆಲಸ ಮಾಡುತ್ತವೆ. ಅವರೇ ನಿಜವಾದ ಗುರು ಶಿಷ್ಯರು.

ಎನೇ ಇದ್ದರೂ ಇಂದು ಗುರು ಸ್ಮರಣೆ  ದಿನ, ಅಂಥ ಸದ್ಗುರುವಿಗೆ  ಇದೋ ನನ್ನ  ಹೃದಯಾಂತರಾಳದ ನಮನ.

 

                                        ಚಿದಂಬರಂ ಭಟ್ಟ ರಾ. ಜೋಶಿ

    ಧಾರವಾಡ. ಮೋ: 9449087542

 

loading...

LEAVE A REPLY

Please enter your comment!
Please enter your name here