ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

0
88

ಬಾಗಲಕೋಟ , 3-ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಬಾಗಲಕೋಟದಲ್ಲಿ ಜೂನ್ 30 ಹಾಗೂ ಜುಲೈ 1 ರಂದು ನಡೆದ ಜಿಲ್ಲಾ ಮಟ್ಟದ ಬಾಗಲಕೋಟ, ಬದಾಮಿ, ಹುನಗುಂದ ಉಪವಿಭಾಗಗಳ ಇನ್ಸ್ಪೈರ್ ಅವಾರ್ಡ-2012 ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಇಂತಿದೆ.

ಪ್ರಾಥಮಿಕ ವಿಭಾಗದಲ್ಲಿ ಮಂಜುನಾಥ ಗುಂಡಾಲರ, ಸರಕಾರಿ ಹಿ.ಪ್ರಾ.ಶಾಲೆ ಅಲ್ಲೂರ, ನೀಲವ್ವ ಮಿರ್ಜಿ, ಸರಕಾರಿ ಹಿ.ಪ್ರಾ.ಶಾಲೆ ಕೈನಕಟ್ಟಿ, ಮಲ್ಲಪ್ಪ ನರಗುಂದ, ಸರಕಾರಿ ಹಿ.ಪ್ರಾ.ಶಾಲೆ ಮಂಗಳಗುಡ್ಡ, ಸಾವಿತ್ರಿ ವಸ್ತ್ತ್ರದ ಸರಕಾರಿ ಹಿ.ಪ್ರಾ.ಶಾಲೆ ತಿಮ್ಮಸಾಗರ, ಸಂಗೀತಾ ಹಂಡಿ, ಸರಕಾರಿ ಕೆ.ಬಿ.ಎಸ್. ನಂ-1 ಗುಳೇದಗುಡ್ಡ, ಚಿನ್ಮಯಿ ಬಡಿಗೇರ ಸರಕಾರಿ ಕೆ.ಜಿ.ಎಸ್ ನಂ-1 ಗುಳೇದಗುಡ್ಡ, ಭೀಮಪ್ಪ ಹೆರಕಲ್ ಸರಕಾರಿ ಕೆ.ಬಿ.ಎಸ್ ಕಾಕನೂರ, ತನವಿ ಪೂಜಾರಿ, ಸೇಂಟ್ ಎನ್ನೇಸ್ ಪ್ರಾ.ಶಾ ವಿದ್ಯಾಗಿರಿ, ಬಾಗಲಕೋಟ, ಸುಶ್ಮಿತಾ ಪೂಜಾರಿ ಸರಕಾರಿ ಹಿ.ಪ್ರಾ.ಶಾಲೆ ಹಿರೇಶೆಲ್ಲಿಕೇರಿ, ಹನಮಂತ ಯಂಕಂಚಿ ಸರಕಾರಿ ಹಿ.ಪ್ರಾ.ಶಾಲೆ ನೀರಲಕೇರಿ, ಸುಮೇಧಾ ದೇಸಾಯಿ ಬಸವೇಶ್ವರ ಪ್ರಾಥಮಿಕ ಶಾಲೆ ವಿದ್ಯಾಗಿರಿ ಬಾಗಲಕೋಟ, ಮಲ್ಲನಗೌಡ ಪಾಟೀಲ, ಸರಕಾರಿ ಹಿ.ಪ್ರಾ.ಶಾಲೆ ಸುತಗುಂಡಾರ, ಶಿಲ್ಪಾ ಕಡೇಶನ್ನವರ ಸರಕಾರಿ ಹಿ.ಪ್ರಾ.ಶಾಲೆ ಮಲ್ಲಾಪೂರ, ಮಹಾಂತೇಶ ಗುಡ್ಡದ ಸಮೃದ್ದಿ ಗುರುಕುಲ ವಿದ್ಯಾಗಿರಿ ಬಾಗಲಕೋಟ, ರೂಪಾ ಕರಡಿ, ಸಜ್ಜನ ಹಿ.ಪ್ರಾ.ಶಾಲೆ ಇಲಕಲ್, ವೀನೀತ ಗೂಳಿ, ಎ.ಸಿ.ಒ ಆಗ್ಲ ಮಾಧ್ಯಮ ಹಿ.ಪ್ರಾ. ಶಾಲೆ ಇಲಕಲ್, ಮಂಜುಳಾ ಬೆಲ್ಲೇರಿ, ಎಂ.ಪಿ.ಎಸ್ ಅಮೀನಗಡ ಹಾಗೂ ಲಕ್ಷ್ಮಿ ಪಿ. ರಜಪೂತ, ಸರಕಾರಿ ಹಿ.ಪ್ರಾ.ಶಾಲೆ ವಡ್ಡರಹೊಸೂರ.

ಪ್ರೌಢಶಾಲಾ ವಿಭಾಗದಲ್ಲಿ ಪೃಥ್ವಿ ಹೂಗಾರ, ಸರಕಾರಿ ಪ್ರೌಢಶಾಲೆ ಸೀಮಿಕೇರಿ, ಆಕಾಶಕುಮಾರ, ಎಸ್.ವ್ಹಿ.ಎಂ ಪ್ರೌಢ ಶಾಲೆ ಇಲಕಲ್ ಹಾಗೂ ಶೃತಿ ಎಸ್.ಕೆಂಭಾವಿಮಠ, ಜೆ.ಸಿ.ಪ್ರೌಢ ಶಾಲೆ ಇಲಕಲ್ ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here