ರಸ್ತೆ ಕಾಮಗಾರಿಗೆ ಭೂಮಿ ಪೂಜೆ

0
45

ರಾಯಬಾಗ 16ಃ ಸರ್ಕಾರದ ವಿಶೇಷ ಯೋಜನೆಯಡಿ ಯಲಿ ಬರಗಾಲದ ಪರಿಹಾರ ನಿಧಿ ಕಾಮಗಾರಿಗಾಗಿ ವಿವಿರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ಶಾಸಕರ ಅನುದಾನದಡಿಯಲ್ಲಿ ಸುಮಾರು 30 ಹೊಸ ಬೋರವೆಲಗಳನ್ನು ಕೊರೆಯಿಸಲಾಗಿದೆ. ಆನಂದಿಬಾಯಿ ಶಾಲೆಯಿಂದ ಶ್ರೀನಗರದವರೆಗೆ ಪೈಪಲೈನಗಾಗಿ ಸುಮಾರು 10 ಲಕ್ಷಗಳ ಅನುದಾನದಡಿ ಕಂಚಕರವಾಡಿ ಕಿನಾಲದಿಂದ ಭೀಮನಗರದವೆಗೆ ಕುಡಿಯುವ ನೀರಿಗಾಗಿ 10 ಲಕ್ಷಗಳ ವೆಚ್ಚದಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಡಿ.ಎಂ.ಐಹೋಳೆ ಹೇಳಿದರು.

ರಾಯಬಾಗದಿಂದ ನಿಡಗುಂದಿಯ ಮುಖ್ಯ ರಸ್ತೆಯ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವರಿಸಿ ಮಾತನಾಡಿದ ಅವರು ಸುಮಾರು 1ಕೋಟಿ ಅನುದಾನದಡಿಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಲಕ್ಷ್ಮಣ ಗವಾಣಿ, ಸದಾಶಿವ ಘೋರ್ಪಡೆ, ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ಸದಶಿವ ಹಳಿಂಗಳಿ, ರಾಯಪ್ಪಾ ಘೊಂಡೆ,  ಅಣ್ಣಾಸಾಬ ಖೇಮಲಾಪೂರ, ಆರ್.ಎಚ್.ಘೊಂಡೆ, ಮತ್ತಿತರು ಈ ಸಂದರ್ಭದಲ್ಲಿ ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here