ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

0
59

ಚಿಂಚಲಿ (ರಾಯಬಾಗ)16: ಗರ್ಭಿಣಿ ತಾಯಂದಿರು ಉತ್ತಮ ಪೋಷಕಾಂಶಯುಕ್ತ ಆಹಾರ ಸೇವಿಸಬೇಕು, ಮಗು ಜನಿಸಿದ ನಂತರ ಕನಿಷ್ಠ ಆರು ತಿಂಗಳಾದರು ಎದೆ ಹಾಲುಣ್ಣಿಸಬೇಕು, ಮಗುವಿಗೆ ಮಾರಕ ರೋಗಗಳ ವಿರುದ್ದ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸುದರೋಂದಿಗೆ ಮಗುವಿಗೆ ಪೌಷ್ಠೀಕ ಆಹಾರ ನೀಡಬೇಕೆಂದು ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಆರ್.ಎಚ್ ರಂಗಣ್ಣವರ ಹೇಳಿದರು

ಅವರು ರಾಯಬಾಗ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಂಚಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರಾಯಬಾಗ ಇವರುಗಳ ಸಹಯೋಗದಲ್ಲಿ ರವಿವಾರ ಅಪೌಷ್ಠಿಕ (ಗ್ರೇಡ) ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ಶಿಬಿರದಲ್ಲಿ ಚಿಂಚಲಿ ಹಾಗೂ ಭಿರಡಿ ಗ್ರಾಮದ 28 ಅಪೌಷ್ಠೀಕ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಮೂರು ಮಕ್ಕಳನ್ನು ಬಾಲ ಸಂಜೀವಿನಿ ಯೋಜನೆಡಿಯಲ್ಲಿ ಮೇಲ್ದರ್ಜೇ ಆಸ್ಪತ್ರೆಗೆ ಹಾಗೂ ಐದು ಮಕ್ಕಳನ್ನು ಚಿಕ್ಕ ಮಕ್ಕಳ ತಜ್ಞರಿಂದ ಚಿಕಿತ್ಸೆ ಪಡೆಯಲು ರವಾನಿಸಲಾಯಿತೆಂದು ವೈದ್ಯರು ತಿಳಿಸಿದರು.

ಅಂಗನವಾಡಿ ಮೇಲ್ವಿಚ್ಚಾರಕಿ ಶ್ರೀಮತಿ ಎಸ್.ಎಸ್ ಪಾಟೀಲ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ಶಾಂತಾ ಶಾಸ್ತ್ತ್ರೀ, ಎನ್.ಟಿ ಜೈಗ್ರಾಂ, ಸಾವಿತ್ರಿ ಬಿರಾದಾರ, ಸಿ.ಎಸ್ ಪಾಟೀಲ, ಶಿವಕ್ಕಾ ಭಂಜಿರಾಮ, ಸುಮಿತ್ರಾ ಹಾಲಾನೆ, ಡಿ.ಆರ್ ಉಪ್ಪಾರ, ಸುಮಂಗಲಾ ಚೋಳಚ್ಚಗುಡ್ಡ, ರೇಖಾ ಕಾವಳೆ ಹಾಗೂ ಮಕ್ಕಳ ಪಾಲಕರು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here