ನಿಲ್ಲದ ಆಕ್ರೌಶ

0
31

ಮಂಗಳೂರಲ್ಲಿ ವಿದ್ಯಾರ್ಥಿಯೊಬ್ಬರ ಹುಟ್ಟು ಹಬ್ಬದ ನಿಮಿತ್ಯ ಪಾರ್ಟಿ ನಡೆದಾಗ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪಾರ್ಟಿ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿರುವುದನ್ನು  ಖಂಡಿಸಿ ರಾಜ್ಯದ ಎಲ್ಲಾ ಕಡೆಗೆ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಸೋಮವಾರ ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಗರದ ಎಲ್ಲ ಕಾಲೇಜು ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಗಳಿಗೆ ಬಹಿಷ್ಕಾರ ಹಾಕಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದ್ದಾರೆ. ಪೋಲಿಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದು ರವಿವಾರ ಸಂಜೆಯವರೆಗೆ ಎಂಟು ಜನರನ್ನು ಬಂಧಿಸಿದ್ದು ಅವರು  ಸೋಮವಾರ ಮತ್ತೆ ನಾಲ್ಕು ಜನರನ್ನು  ಬಂಧಿಸಿದ್ದಾರೆ.  ಹಿರಿಯ ಪೋಲಿಸ ಅಧಿಕಾರಿ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ಸ್ಥಳದಲ್ಲಿಯೇ ಇದ್ದು ತನಿಖೆಯ ಕಾರ್ಯದಲ್ಲಿ ಸ್ಥಳೀಯ ಪೋಲಿಸ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಈ ಎಲ್ಲ ಕಾರ್ಯಕರ್ತರು ಹಿಂದೂ ಜಾಗರಣಾ ವೇದಿಕೆಯ ಸದಸ್ಯರೆಂದು ಹೇಳಲಾಗಿದೆ. ಆದರೆ ಆ ಸಂಘಟನೆಯೇ ಸಂಚಾಲಕರು ಈ ಘಟನೆಗೂ ನಮ್ಮ ವೇದಿಕೆಗೂ ಯಾವುದೇ ಸಂಬಂಧ ಇಲ್ಲ ಆದರೆ ಒಬ್ಬ ನಮ್ಮ ಕಾರ್ಯಕರ್ತರು ಈ ಹಲ್ಲೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದರು. ಆದರೆ ಪಬ್ ಸಂಸ್ಕ್ಕತಿಯನ್ನು ಮುಂದಿನ ದಿನಗಳಲ್ಲಿಯೂ ನಮ್ಮ ವೇದಿಕೆ ವಿರೋಧಿಸುತ್ತದೆ ಎಂದು ಹೇಳುವ ಮೂಲಕ ತಮ್ಮ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾರೆ.  ಕೇವಲ ಆರಂಭದಲ್ಲಿ ತನಿಖೆಯ ಶಾಸ್ತ್ತ್ರ ಮಾಡಿ ನಂತರ ಸುಮ್ಮನೆ ಕೂಡ್ರುವ ಕಾರ್ಯವನ್ನು ಪೋಲಿಸರು ಮಾಡಬಾರದು ಈ ಬಗ್ಗೆ ಅತ್ಯಂತ ಕಟ್ಟು ನಿಟ್ಟಾದ ತನಿಖೆ ಮಾಡಿ ತಪ್ಪಿತಸ್ಥರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ದೊರೆಯುವಂತೆ  ಮಾಡಬೇಕು ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ರಾಜ್ಯದಲ್ಲಿ ಮರು ಕಳಿಸದಂತೆ ನೋಡಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಸರ್ವ ಧರ್ಮಗಳ ಜನರು ಸಮನ್ವಯದಿಂದ ಬಾಳುತ್ತಿದ್ದಾರೆ.   ಒಂದು ಧರ್ಮದ ಹೆಸರಿನಲ್ಲಿ ಈ ರೀತಿ ದೌರ್ಜನ್ಯ ಮಾಡಿ ದ್ವೇಷದ ಅಲೆಗಳನ್ನು ಎಬ್ಬಿಸುವುದು ಸರಿಯಾದ ಸಂಗತಿ ಆಗಿರುವುದಿಲ್ಲ ಸರಕಾರ ಈ ಘಟನೆಯ ಗಂಭೀರತೆಯನ್ನು ಅರಿತು ಅತ್ಯಂತ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಅಂದರೆ ಮಾತ್ರ ರಾಜ್ಯದಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಸರಕಾರ ಈ ವಿಷಯವನ್ನು ಯಾವುದೇ ಕಾರಣದಿಂದಲೂ ಲಘುವಾಗಿ ಪರಿಗಣಿಸಬಾರದು;.

ಇತ್ತೀಚೆಗೆ ರಾಜ್ಯದಲ್ಲಿ ರೌಡಿ ಚಟುವಟಿಕೆಗಳು ಹೆಚ್ಚಾಗತೊಡಗಿದ್ದು ಕಳವಳಕರವಾದ ಸಂಗತಿಯಾಗಿದೆ. ಆದ್ದರಿಂದ ಈ ರೌಡಿ ಸಂಸ್ಕ್ಕತಿ ಮುಂದುವರೆಯದಂತೆ ನೋಡಿಕೊಳ್ಳುವ ಕಾರ್ಯವನ್ನು ಸರಕಾರ ಮಾಡಬೇಕು. ಈ ರೀತಿ ರೌಡಿ ಸಂಸ್ಕ್ಕತಿ ರಾಜ್ಯದಲ್ಲಿ ಬೆಳೆಯುತ್ತಾ ಹೋದರೆ ಜನರು ನಿರಾತಂಕವಾಗಿ ಜೀವನ ಮಾಡಲು ಸಾಧ್ಯವೇ ಆಗುವುದೊ;;. ಮನೆಯಲ್ಲಿ ಇರುವ ಹೆಣ್ನು ಮಕ್ಕಳಿಗೆ ತಮ್ಮ ಮನೆಯ ಗಂಡಸರು ಹೊರಗೆ ಹೋಗಿ ದುಡಿದು ರಾತ್ರಿ ಮನೆಗೆ ಬರುತ್ತಾರೆ. ಎಂಬ ಯಾವುದೇ ರೀತಿಯ ಭರವಸೆ ಇಲ್ಲದಂತೆ ಆಗುತ್ತದೆ. ಎಲ್ಲರೂ ತಮ್ಮ ತಮ್ಮ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಜೀವನವನ್ನು ಮಾಡಬೇಕಾಗುತ್ತದೆ. ಆದ್ದರಿಂದ ಸರಕಾರ ಈ ರೀತಿಯ ವಾತಾವರಣ ಬೆಳೆಯುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶವನ್ನು ನೀಡಬಾರದು ಅಂದರೆ ಮಾತ್ರ ಜನರು ನಿರ್ಭಯವಾಗಿ ನೀವನ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಲಿಸರು ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ ತಮ್ಮ ತನಿಖೆಯನ್ನು ಪೂರ್ಣ ಮಾಡಿ ಅಪರಾದಿಗಳು ಯಾರೇ ಆದರೂ ಅವರನ್ನು ಬಂಧಿಸಿ ಕಾನುನಿನ ಕೈಗೆ  ಒಪ್ಪಿಸುವ ಕಾರ್ಯವನ್ನು ಮಾಡಬೇಕು.

ಈ ರೀತಿಯ ಘಟನೆಗಳು ನಡೆದಾಗ ಜನರು ಸಹ ಈ ರೀತಿಯ ಘಟನೆಗಳನ್ನು ವಿರೋಧಿಸುವ ಕಾರ್ಯವನ್ನು ಮಾಡಬೇಕು. ಆರೋಪಿಗಳನ್ನು ಪೋಲಿಸರು ಬಂಧಿಸಿರುವುದನ್ನು ವಿರೋಧಿಸಿ ಸಣ್ಣ ಪುಟ್ಟಡ ಪ್ರತಿಭಟನೆಗಳು ನಡೆದಿವೆ. ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ನಿರಹರಾದಿಗಳ ಮೇಲೆ ಹಲ್ಲೆ ಮಾಡಿದವರನ್ನು ಬೆಂಬಲಿಸುವ ಕಾರ್ಯ ಮಾಡಿದರೆ ಅದು ಅತ್ಯಂತ ಕೆಟ್ಟ ನಡವಳಿಗಕೆ ಯಾಗುತ್ತದೆ  ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಕಾನೂನ  ತನ್ನ ಕಾರ್ಯವನ್ನು  ಮಾಡುವಾಗ ಅದಕ್ಕೆ ಅಡ್ಡಿ ಪಡಿಸುವುದು ಅವಿವೇಕದ ಪರಮಾವಧಿಯಾಗುತ್ತದೆ.

loading...

LEAVE A REPLY

Please enter your comment!
Please enter your name here