ಭರವಸೆಯ ಮಳೆ

0
23

ರಾಜ್ಯದಲ್ಲಿ ಉಂಟಾಗಿರುವ  ಭೀಕರ ಬರಗಾಲಕ್ಕೆ ಕೇಂದ್ರ ಸರಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಅಪವಾದಿಂದ ಪಾರಾಗಲು ರಾಜ್ಯದ ಬರ ಪರಿಸ್ಪಿತಿಯ ಬಗ್ಗೆ ಸಮಾಲೋಚನೆ ನಡೆಸಲು ಗುರುವಾರ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಕೃಷಿ  ಸಚಿವ ಶರದ್ ಪವಾರ ಮತ್ತು ಕೇಂದ್ರ ಗ್ರಾಮೀಣ ಅಭಿವೃದ್ದಿ ಸಚಿವ ಜಯರಾಮ ರಮೇಶ ತಕ್ಷಣ 1320 ಕೋಟಿ ರೂಪಾಯಿ ಕೇಂದ್ರ ನೆರವನ್ನು ಘೋಷಿಸಿದ್ದಾರೆ. ರಾಜ್ಯ ಸರಕಾರ ಪ್ರಸ್ತಾವನೆ ಸಿದ್ದ ಮಾಡಿಕಪಟ್ಟರೆ ಇನ್ನಷ್ಟು ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಇದುವರೆಗೆ  ಮಹಾತ್ಮಾ ಗಾಂಧಿ ರಾಷ್ಟ್ತ್ರೀಯ ಉದ್ಯೌಗ ಖಾತ್ರಿ ಯೋಜನೆಯಲ್ಲಿ ವರ್ಷದಲ್ಲಿ ನೂರು ದಿನ ನೀಡುತ್ತಿದ್ದ ಉದ್ಯೌಗದ ಪ್ರಮಾಣವನ್ನು ಬರ ಪೀಡಿತ ಪ್ರದೇಶಗಳಲ್ಲಿ 150 ದಿನಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಕೇಂದ್ರ ಸರಕಾರ ಹೆಚ್ಚುವರಿಯಾಗಿ  700 ಕೋಟಿ ರೂಪಾಯಿ ಹಣ ನೀಡಲಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ತಕ್ಷಣ 250 ಕೋಟಿ ರೂಪಾಯಿ ಹಣವನ್ನು ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಸಾಲ ಮನ್ನಾ ಮ್ಯಾಚಿಂಗ್ ಗ್ಯಾಂಟ ಬೇಡಿಕೆಗೆ  ಪರೀಶೀಲನೆ ಮಾಡುವ ಭರವಸೆಯನ್ನು ನೀಡಲಾಗಿದೆ. ಜೊತೆಗೆ ಬೆಳೆ ಪರಿಹಾರ ಕುರಿತು ಕೇಂದ್ರ ಸಂಪುಟದಲ್ಲಿ  ಚರ್ಚೆ ಮಾಡಿ ಸೂಕ್ತ ನಿರ್ಧಾರವನ್ನು ತೆಗೆದು ಕೊಳ್ಳುವ ಭರವಸೆಯನ್ನು ನೀಡಲಾಗಿದೆ.

            ಆದರೆ ಸಚಿವರ ಮುಂದೆ ಮನವಿ ಮಂಡಿಸಿ ಹೆಚ್ಚಿನ ನೆರವು ಕೋರಿದ ರಾಜ್ಯ ಸರಕಾರ  ಪರಿಹಾರ ಕ್ರಮಗಳ ಆಧ್ಯತಾ ಪಟ್ಟಿಯನ್ನು ನೀಡಿರಲಿಲ್ಲ ಜೊತೆಗೆ ಪರಿಹಾರ ಕ್ರಮಗಳ ಕ್ರಿಯಾ ಯೋಜನೆ ಸಿದ್ದ ಪಡಿಸಿರಲಿಲ್ಲ ಈ ಕುರಿತು ಕೇಂದ್ರ ಸಚುವರು ಕೇಳಿದ ಪ್ರಶ್ನೆಗಳಿಗೆ ರಾಜ್ಯ ಸರಕಾರ ಸಮರ್ಪಕವಾಗಿ ಉತ್ತರ ನೀಡಿಲ್ಲ ಇದು ರಾಜ್ಯ ಸರಕಾರದ ವೈಫಲ್ಯವಾಗಿರುವುದು ಈ ಸಮಯದಲ್ಲಿ ಬಯಲಿಗೆ ಬಂದು ರಾಜ್ಯ ಸರಕಾರ ತಲೆ ತಗ್ಗಿಸುವಂತೆ ಆಗಿದೆ.  ಇದು ಅಧಿಖಾರಿಗಳ ಬೇಜವಾಬ್ದಾರಿಗೆ ಒಂದು ಸಾಕ್ಷಿಯಾಗಿದೆ. ಪ್ರತಿ ತಿಂಗಳು ಕೈ ತುಂಬ ಸಂಬಳ ಪಡೆಯುವ ಈ ಅಧಿಕಾರಿಗಳು  ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

            ಕೇಂದ್ರ ಸರಕಾರ ಈ ಹಿಂದೆ ನೀಡಿರುವ ಪರಿಹಾರದ ಹಣ ಹಾಗೂ ಇನ್ನು ಮುಂದೆ ನೀಡಲಿರುವ ಪರಿಹಾರದ ಹಣವನ್ನು ಬರಕ್ಕಾಗಿ ಸಮರ್ಪಕವಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ಮುಂದಾಗಬೇಕು. ಅಂದರೆ ಮಾತ್ರ ಬರ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುವುದಕ್ಕೆ  ಸಾಧ್ಯವಾಗುತ್ತದೆ.

            ಭರದ ಕಾರಣಕ್ಕಾಗಿ ಪ್ರತಿ ವರ್ಷ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಎಲ್ಲ ಉತ್ಸವಗಳನ್ನು ರಾಜ್ಯ ಸರಕಾರ ರದ್ದು ಮಾಡಿದೆ. ಜೊತೆಗೆ ಮೈಸೂರು ದಸರಾ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ರಾಜ್ಯೌತ್ಸವ ದಿನದಂದು ನೀಡುವ ರಾಜ್ಯೌತ್ಸವ ಪ್ರಶಸ್ತಿಗಳನ್ನು  ಕೇವಲ 50 ಕ್ಕೆ ಸೀಮಿತ ಗೊಳಿಸಲು ನಿರ್ಧರಿಸಲಾಗಿದೆ.  ಈ ಎಲ್ಲ ಕ್ರಮಗಳಿಂದ ಉಳಿತಾಯವಾಗುವ ಹಣವನ್ನು ಬರ ಪರಿಹಾರಕ್ಕಾಗಿ ಬಳಕೆ ಮಾಡುವ  ವ್ಯವಸ್ಥಿತವಾದ ಕ್ರಮಗಳನ್ನು  ತೆಗೆದುಕೊಳ್ಳಬೇಕು ಮುಖ್ಯವಾಗಿ ಗ್ರಾಮಗಳಲ್ಲಿ ಸಮರ್ಪಕವಾದ ಕುಡಿಯುವ ನೀರಿನ ಪೂರೈಕೆ ಜಾನುವಾರುಗಳಿಗೆ ಮೇವು ಪೂರೈಕೆ ದುಡಿಯುವ ಕೈಗಳಿಗೆ ಕೆಲಸ ನೀಡುವ ಕಾರ್ಯಗಳ ಮುಖ್ಯವಾಗಿ ನಡೆಯಬೇಕು ಅಂದರೆ  ಮಾತ್ರ ಭರದಿಂದ ಬಳಲುವ  ಜನರು  ಸ್ಪಲ್ಪ ಮಟ್ಟಿಗಾದರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ.

            ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಅಧಿಕಾರಿಗಳ ಮೇಲೆ ತಮಗಿರುವ ಅಧಿಕಾರವನ್ನು ಚಲಾಯಿಸಿ ಬರ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ಮಾಡಬೇಕು. ಅಂದರೆ  ಮಾತ್ರ ಈಗ ಆಗಿರುವ ವೈಫಲ್ಯಗಳು ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.  ಆದ್ದರಿಂದ ಮುಖ್ಯ ಮಂತ್ರಿಗಳು ವೈಯಕ್ತಿಕವಾಗಿ ಈ ವಿಷಯದಲ್ಲಿ ತಮ್ಮ ಗಮನ ಹರಿಸಿ ಬರ ಪರಿಹಾರ ಕಾಮಗಾರಿಗಳು ವ್ಯವಸ್ಥಿತವಾಗಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅಂದರೆ ಮಾತ್ರ ಕೇಂದ್ರ ಸರಕಾರ  ನೀಡಿರುವ ಹಣದ ಸದುಪಯೋಗ ಆಗುವುದಕ್ಕೆ  ಸಾಧ್ಯವಾಗುತ್ತದೆ. ಆದ್ದರಿಂದ ಜಗದೀಶ ಶೆಟ್ಟರ ಅವರು ಬರ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯನ್ನು ವಹಿಸಿದರೆ ಮಾತ್ರ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಕೇಂದ್ರದಿಂದ ಹಣ ಪಡೆಯುವುದು  ಮುಖ್ಯವಲ್ಲ  ಬಂದಿರುವ ಹಣವನ್ನು ಸಮರ್ಪಕವಾದ ರೀತಿಯಲ್ಲಿ ಬರ ಪರಿಹಾರಕ್ಕೆ ಬಳಸಿ ಕೊಳ್ಳುವುದು ಮುಖ್ಯವಾಗಿದೆ. ಎಂಬುದನ್ನು ಸರಕಾರ ಅರಿತು ಕೊಳ್ಳಬೇಕು.  ದೊಡ್ಡ ಪ್ರಮಾಣದ ಹಣದ ಮೊತ್ತವನ್ನು ಪಡೆದರೆ ಯಾವುದೇ ಸಾಧನೆಯನ್ನು ಮಾಡಿದಂತೆ ಆಗುವುದಿಲ್ಲ ಆದ್ದರಿಂದ ಬಂದಿರುವ ಹಣ ಸದುಪಯೋಗ ಆಗುವಂತೆ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ.

 

loading...

LEAVE A REPLY

Please enter your comment!
Please enter your name here