ಸುದ್ದಿಗೊಂದು ಚುಚ್ಚು ಮಾತು

0
33

ಕೇಂದ್ರ ಸಚಿವರು ಬರ ನಿರ್ವಹಣೆಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ರಾಜ್ಯ ಸರಕಾರದ ಅಧಿಕಾರಿಗಳು  ವಿಫಲವಾಗಿದ್ದಾರೆ.                                                                                                            -ಸುದ್ದಿ

ಈ ಅಧಿಕಾರಿಗಳು  ಸಂಬಳ ಬೇಕು ಕೆಲಸ ಬೇಡ ಎಂಬ ನೀತಿಯನ್ನು ಅನುಸರಿಸಿದ್ದರಿಂದ ಈ ರೀತಿ ಆಗಿದೆ.

ಅಣ್ಣಾ          ಟೀಮಿನ ಚಿತ್ತ ಈಗ ರಾಜಕೀಯದತ್ತ ಹರಡಿದೆ.  ಹೀಗಾಗಿ ಚುನಾವಣೆಯ ಮೇಲೆ ಅಣ್ಣಾ ತಂಡದ ಕಣ್ಣು ಬಿದ್ದಿದೆ.               -ಸುದ್ದಿ

ಎಲ್ಲರೂ ಮಾಡುವುದು ಅಧಿಕಾರ ಪಡೆಯಲು ಎಂಬುದು ಇದರಿಂದ ಈಗ ಸ್ಪಷ್ಟವಾಗಿದೆ.

ಪುಣೆಯಲ್ಲಿ ನಡೆದ ಸ್ಪೌಟಿಗೆ ರಾಜ್ಯದ ನಂಟು ಇದೆ ಎಂದು ಹೇಳಲಾಗುತ್ತದೆ.                                     -ಸುದ್ದಿ

ಉಗ್ರರು ಕರ್ನಾಟಕದಲ್ಲಿ ಅವಿತಿಟ್ಟುಕೊಳ್ಳುವುದು ಕಾಲ ಕಾಲಕ್ಕೆ ನಡೆಯುತ್ತಲೆ ಬಂದಿದೆ.

ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಿತ್ಯಾನಂದ ತಂಡದ 31ಪಾಸ್ ಪೋರ್ಟ ಪತ್ತೆಯಾಗಿದೆ,                                                          ಸುದ್ದಿ

ಪುರುಷತ್ವ  ಪರೀಕ್ಷೆ ತಪ್ಪಿಸಿಕೊಳ್ಳಲು ನಿತ್ಯಾನಂದ ಕಸರತ್ತು ನಡೆಸಿರುವುದು ಇದರಿಂದ ಗೊತ್ತಾಗುತ್ತದೆ.

ಚಿನ್ನದ ಗಟ್ಟಿ ಮಾರಿ ಲಂಚದ ಹಣ ನೀಡಲಾಗಿತ್ತು ಎಂಬ ಅಂಶ ಈಗ ಸುರೇಶ ಬಾಬು ಹೇಳಿಕೆಯಿಂದ ಸ್ಪಷ್ಟವಾಗಿದೆ.              -ಸುದ್ದಿ

ಇದುವರೆಗೆ ನಮ್ಮ ಕೈವಾಡ ಇದರಲ್ಲಿ ಇಲ್ಲ ಎಂದು ಹೇಳುತ್ತಿದ್ದ ಶಾಸಕರ ಬಣ್ಣ ಈಗ ಬಯಲಾಗಿದೆ.

ಪುಣೆ ಸ್ಪೌಟ ಪ್ರಕರಣದಲ್ಲಿ ಸೈಕಲ್ ಅಂಗಡಿ ಮಾಲಿಕನನ್ನು ಬಂಧಿಸಲಾಗಿದೆ.                                         – ಸುದ್ದಿ

ಸೈಕಲ್ ಮಾರುವುದು ಬಿಟ್ಟು ಬಾಂಬ ಮಾರಲು ಹೋಗಿದ್ದರಿಂದ ಈ ಗತಿ ಅವನಿಗೆ  ಬಂದಿರಬಹುದು.

ವೈದ್ಯರಿಗೆ ಇನ್ನು ಮುಂದೆ ಗ್ರಾಮೀಣ ಸೇವೆ ಕಡ್ಡಾಯವಾಗಲಿದೆ.

– ಸುದ್ದಿ

ಗ್ರಾಮದಲ್ಲಿ ಹುಟ್ಟಿ ಬೆಳೆದು ಗ್ರಾಮದಲ್ಲಿ ನೌಕರಿ ಬೇಡ ಎನ್ನುವ ವೈದ್ಯರಿಗೆ ಇನ್ನು ಮುಂದೆ ಗ್ರಾಮ ಸೇವೆಯೇ ಗತಿ ಆಗಲಿದೆ.

 

loading...

LEAVE A REPLY

Please enter your comment!
Please enter your name here