ಸುದ್ದಿಗೊಂದು ಚುಚ್ಚು ಮಾತು

0
24

ಮಂಗಳ ಲೋಕಕ್ಕೆ ಹಾರಿ ಬಿಟ್ಟ ರೋವರ್ ಇದೀಗ ಮಂಗಳ ಲೋಕವನ್ನು ತಲುಪಿದೆ.                                        -ಸುದ್ದಿ

ಅಲ್ಲಿಯ ವಾತಾವರಣ ನೋಡಿ ನಿವೇಶನ ಖರೀದಿ ಮಾಡಲು ರೀಯಲ್ ಎಸ್ಟೇಟ ಉದ್ಯಮಿಗಳು ಅಲ್ಲಿಗೆ ಹೋಗಬಹುದು.

ಭಾರತೀಯ ಜನತಾ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಆ ಪಕ್ಷದ ಹಿರಿಯ ನಾಯಕ ಎಲ್. ಕೆ. ಅದ್ವಾಣಿ ಭವಿಷ್ಯ           ನುಡಿದಿದ್ದಾರೆ.                    -ಸುದ್ದಿ

ತಾವು ಪ್ರಧಾನಿಯಾಗದಿದ್ದರೆ ಈ ಪಕ್ಷದ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರ ಅಭಿಮತವಾಗಿರಬಹುದು.

ಚಿತ್ರ ನಟಿ ರಕ್ಷಿತಾ ಅವರನ್ನು ಬಿ. ಎಸ್. ಆರ್. ಕಾಂಗ್ರೆಸ್ ಪಕ್ಷದಿಂದ ಮಂಡ್ಯ  ಜಿಲ್ಲೆಯಲ್ಲಿ  ಚುನಾವಣೆ ಕಣಕ್ಕೆ  ಇಳಿಸಲಾಗುವುದೆಂದು  ರಾಮಲು ಹೇಳಿದ್ದಾರೆ.                                              -ಸುದ್ದಿ

ರಕ್ಷಿತಾಳಿಂದ ಪಕ್ಷಕ್ಕೆ ರಕ್ಷಣೆ ದೊರೆಯಲಿ ಎಂದು ಅವರು ಈ ರೀತಿ ತಂತ್ರ ಮಾಡುತ್ತಿರಬಹುದು.

ಸಹಕಾರಿ ಸಚಿವ ಬಿ. ಜೆ. ಪುಟ್ಟಸ್ವಾಮಿ ಮುಂಜಾನೆ ಒಂದು ಹೇಳಿದರೆ ಮಧ್ಯಾಹ್ನ ಮತ್ತೊಂದು ಹೇಳುತ್ತಾರೆ.                               -ಸುದ್ದಿ

ನಾನಿರುವುದೇ  ಹೀಗೆ ಎಂದು ಅವರು ಹೇಳುತ್ತಾ  ಅದೇ ನೀತಿ ರೀತಿಯನ್ನು ಅನುಸರಿಸುತ್ತಿರಬಹುದು.

ಇಬ್ಬರು ಗಡಿ ಭದ್ರಾತಾ ಯೋಧರು ರಜೆಯ ಮೇಲೆ ಬಂದವರು ಮರಳಿ  ಕೆಲಸಕ್ಕೆ ಹೋಗದೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.   – ಸುದ್ದಿ

ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರುವರೇ ಎಂಬುದು ಖಚಿತವಾಗಿ ಗೊತ್ತಾಗಿಲ್ಲ.

ಗಡ್ಕರಿ ಒಪ್ಪಿಗೆಯ ಬಳಿಕ ಖಾತೆಗಳ ಮರು ಹಂಚಿಕೆ ನಡೆಯಲಿದೆ  ಎಂದು ಹೇಳಲಾಗಿದೆ.                                           – ಸುದ್ದಿ

ಈ ಹಿಂದೆ ಸದಾನಂದ ಗೌಡರು ವರಿಷ್ಠರು ಹೇಳಿದರೆ ಶಾಸಕಾಂಗ ಪಕ್ಷದ ಸಭೆ ಕರೆಯುವುದಾಗಿ ಹೇಳುತ್ತಿದ್ದಾರೆ. ಈಗ ಅದನ್ನೇ ಮುಂದುವರೆಸಿದಂತೆ  ಕಂಡು ಬರುತ್ತದೆ.

ರಾಕಸ್ ಕೊಪ್ಪ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿದೆ ಎಂದು  ಜಲ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.                          -ಸುದ್ದಿ

ನೀರು ಬರುವುದೇ ಇಲ್ಲವೇ ಎಂಬ ಬೆಳಗಾವಿ ನಗರದ ಮಹಿಳೆಯರ ಆತಂಕ ಸಧ್ಯಕ್ಕೆ ನಿವಾರಣೆಯಾದಂತೆ ಆಗಿದೆ.

ಮಹಿಳಾ ಬಾಕ್ಸರ್ ಮೇರಿ ಉಪ ಅಂತಿಮ ಪಂದ್ಯಕ್ಕೆ ಬಂದಿದ್ದಾಳೆ.   ಪದಕ ತರುವಳೆ ಎಂದು ಕಾದು ನೋಡಲಾಗುತ್ತಿದೆ.               -ಸುದ್ದಿ

ಯಾವುದಾದರೂ ಒಂದು ಪದಕ ತರಲಿ ಎಂದು ಬಾರತೀಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವಿಶ್ವ ಕುಸ್ತಿ ಪಂದ್ಯಕ್ಕೆ  ಗದುಗಿನ ಬಾಲೆ ಹೋಗಲಿದ್ದಾಳೆ.    – ಸುದ್ದಿ

ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗೆದ್ದಿರುವ ಪ್ರೇಮಾ ಹಚ್ಚಣ್ಣವರ ಬಂಗಾರ ತರಲಿ ಎಂಬುದೇ ಎಲ್ಲರ ಹಾರೈಕೆಯಾಗಿದೆ.

 

loading...

LEAVE A REPLY

Please enter your comment!
Please enter your name here