5ರಂದುಕೆ.ಜೆ.ಪಿ ಕಾರ್ಯಕರ್ತರಿಂದ ಪ್ರತಿಭಟನೆ

0
12

ಅಥಣಿ : ಸ್ಥಳೀಯ ಕೆ.ಜೆ.ಪಿ ಕಾರ್ಯಕರ್ತರಿಂದ ಗುರುವಾರ ದಿ: 5 ರಂದು ಬೃಹತ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಕೆ.ಜಿ.ಪಿ ಮುಖಂಡ ಸಂಗನಗೌಡ ಪಾಟೀಲ (ಸವದಿ) ತಿಳಿಸಿದರು.

ಅವರು ಮಂಗಳವಾರ ದಿ: 3 ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೈಗೊಂಡ ಧರಣಿ ಸತ್ಯಾಗ್ರಹವನ್ನು ಬೆಂಬಲಾರ್ಥವಾಗಿ, ಸರ್ಕಾರದ ನಿರ್ಲಕ್ಷ ಭಾವನೆ, ರೈತ ವಿರೋಧಿ ನಿಲುವು ತೋರಿದ್ದರ ಹಿನ್ನೆಯಲ್ಲಿ ಮತ್ತು ಕಬ್ಬಿಗೆ ಬೆಂಬಲ ಬೆಲೆ ನೀಡುವದರ ಕುರಿತು ಹಾಗೂ ತಾಲೂಕಿನ ಹಲವಾರು ಸಮಸ್ಯೆಗಳ ಕುರಿತು ದಿ: 5 ರಂದು ಬೃಹತ ಪ್ರತಿಭಟನಾ ರ್ಯಾಲಿಯನ್ನು ಕೈಗೊಳ್ಳಲಾಗಿದೆ ಎಂದು ಪಾಟೀಲ (ಸವದಿ) ತಿಳಿಸಿದರು.

 

loading...

LEAVE A REPLY

Please enter your comment!
Please enter your name here