5ರಂದು ಶಿವಾನುಭವ ಗೋಷ್ಠಿ

0
16

ಬೆಳಗಾವಿ,02- ಶಿವಬಸವ ನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ದಿ.5ರಂದು ಸಾಯಂಕಾಲ 6ಗಂಟೆಗೆ 135ನೇ ಶಿವಾನುಭವ ಗೋಷ್ಠಿ ಅಂಗವಾಗಿ ಕಾಯಕಯೋಗಿ ಲಿಂ. ಡಾ||ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ ಇವರ 122ನೇ ಜಯಂತಿ ಕಾರ್ಯಕ್ರಮ ನಡೆಯುವುದು.

ಈ ಸಮಾರಂಭದ ಸಾನಿಧ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ದಸ್ವಾಮಿಗಳು ವಹಿಸುವರು. ನಿವೃತ್ತ ಶಿಕ್ಷಣಾಧಿಕಾರಿ ಶರಣ ಎಂ.ಡಿ.ನರಗುಂದ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕುಮಾರ ದೇವರು ರುದ್ರಾಕ್ಷಿಮಠ ನಾಗನೂರ ಇವರು ಮಹಾಪ್ರಸಾದಿ ನಾಗನೂರ ಡಾ||ಶಿವಬಸವಸ್ವಾಮಿಗಳವರ ಜೀವನ ದರ್ಶನ ಕುರಿತು ಉಪನ್ಯಾಸ ನೀಡುವರು.

ಕಾರಂಜಿಮಠದ ಮಾತೃಮಂಡಳಿಯವರಿಂದ ಸಾಮೂಹಿಕ ಪ್ರಾರ್ಥನೆ ನಡೆಯುವದು. ಈ ಕಾರ್ಯಕ್ರಮದಲ್ಲಿ ಸರ್ವ ಶರಣ-ಶರಣಿಯರು ಬಾಗವಹಿಸಬೇಕಾಗಿ ವಿನಂತಿ…

loading...

LEAVE A REPLY

Please enter your comment!
Please enter your name here