ಭಾಗ್ಯದ ಬಾಗಿಲು

0
35

ಕರ್ನಾಟಕದಲ್ಲಿ  ಅತ್ಯಂತ ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ  ಆಂಧ್ರದ  ತೆಲಂಗಾಣ ಮಹಾರಾಷ್ಟ್ತ್ರದ  ವಿದರ್ಭ ಮಾದರಿಯಲ್ಲಿ ವಿಶೇಷ ಸ್ಥಾನಮಾನ ನೀಡಲು 371 ನೇ ಕಲಂಗೆ ತಿದ್ದುಪಡಿ ಮಾಡಬೇಕು ಎಂದು ಆ ಭಾಗದ ಜನರು ಕಳೆದ ಮೂರು ದಶಕದಿಂದ ಸತತವಾಗಿ ಹೋರಾಟ ಂಆಡುತ್ತಲೇ  ಬಂದಿದ್ದಾರೆ.  ಇದೀಗ ಕೇಂದ್ರ ಸಚಿವ ಸಂಪುಟ ಆ ಪ್ರಸ್ತಾವನೆಗೆ ಅನುಮತಿ ನೀಡಿರುವುದರಿಂದ ಹೈದ್ರಾಬಾದ ಕರ್ನಾಟಕ ಜನರ  ಬಹುದಿನದ ಕನಸು ನನಸಾಗುವ ಅಂತಿಮ ಹಂತಕ್ಕೆ ಬಂದಿದೆ. ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿಯೇ ಅದನ್ನು ಮಂಡಿಸಿ ಒಪ್ಪಿಗೆ ಪಡೆಯಲು ಕೇಂದ್ರ ಸರಕಾರ ಬಯಸಿರುವುದರಿಂದ ಶೀಘ್ರವೇ ಇದು ಅನುಷ್ಠಾನಕ್ಕೆ ವಿಶ್ವಾಸ ಈಗ ಉಂಟಾಗಿದೆ.

ಈ ತಿದ್ದುಪಡಿ ಜಾರಿಗೆ ಬಂದ ಮೇಲೆ ಹೈದ್ರಾಬಾದ ಕರ್ನಾಟಕದ ವ್ಯಾಪ್ತಿಯಲ್ಲಿ  ಬರುವ ಬೀದರ ಗುಲ್ಬರ್ಗಾ ರಾಯಚೂರು ಬಳ್ಳಾರಿ ಹಾಗೂ  ಕೊಪ್ಪಳ ಜಿಲ್ಲೆಗಳಲ್ಲಿ ಸುಧಾರಣೆಯ ಶಕೆ ಆರಂಭವಾಗಲಿದೆ. ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸುಧಾರಣೆಗೆ  ಹೆಚ್ಚಿನ ಮೂಲಭೂತ ಸೌಲಭ್ಯಗಳು ದೊರೆಯಲಿವೆ. ಶಾಲೆಗಳು ಆಸ್ಪತ್ರೆಗಳು ಸಮುದಾಯ ಭವನಗಳ ನಿರ್ಮಾಣ ಆಗಲಿದೆ. ಗ್ರಾಮೀಣ ಪ್ರದೇಶ ಸಂಪರ್ಕಿಸಲು ಅಗತ್ಯವಾದ ರಸ್ತೆ ಸೇತುವೆಗಳ ನಿರ್ಮಾಣ  ಆಗಲಿದೆ. ನೀರು ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಆಧ್ಯತೆ ದೊರೆಯಲಿದೆ. ಕೇಂದ್ರ ಪ್ರಾಯೋಜಿತಯೋಜನೆಗಳ ಅನುಷ್ಠಾನಕ್ಕೆ  ಆಧ್ಯತೆಯ ಮೇಲೆ ಜಾರಿಯಾಗಲು ಅವಕಾಶ  ದೊರೆಯಲಿದೆ. ಜೊತೆಗೆ ಶೈಕ್ಷಣಿಕ ಮೀಸಲಾತಿ ಉದ್ಯೌಗ ಮೀಸಲಾತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿವೆ.

ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ವಿಜಾಪೂರ ಜಿಲ್ಲೇ ಸಹ ಅತ್ಯಂತ ಹಿಂದುಳಿದಿದೆ. ಈ ಜಿಲ್ಲೆಯನ್ನು ಆ ಪ್ರದೇಶ ವ್ಯಾಪ್ತಿಗೆ ಸೇರಿಸಿ ಅದನ್ನೂ ಸಹ ಅಭಿವೃದ್ದಿಗೊಳಿಸಬೇಕು ಎಂದು ಆ ಜಿಲ್ಲೆಯ ಜನರು ಒತ್ತಡವನ್ನು ಹೇರುತ್ತಿದ್ದಾರೆ. ಅದಕ್ಕಾಗಿ ಕಳೆದ ಮಂಗಳವಾರ ಜಿಲ್ಲಾ ಬಂದ್ ಸಹ  ಮಾಡ;ಆಗಿದೆ ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆ ಜಿಲ್ಲೆಯ  ಜನರ ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸುವ ಕ್ರಮ ತೆಗೆದುಕೊಳ್ಳಬೇಕು.

ಈ ತಿದ್ದುಪಡಿ ಜಾರಿಗೆ ಬಂದ ಮೇಲೆ ಅಭಿವೃದ್ದಿ ಕಾರ್ಯಗಳು ಸಮರ್ಪಕವಾಗಿ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು  ನಿರ್ವಹಿಸಬೇಕು. ಜೊತೆಗೆ ಎರಡೂ ಸರಕಾರಗಳು  ಈ ಪ್ರದೇಶದ ಅಭಿವೃದ್ದಿಗೆ ನೀಡುವ ವಿಶೇಷ ಹಣಕಾಸಿನ ನೆರವು ಸಂಪೂರ್ಣವಾಗಿ  ಸಮಗ್ರವಾಗಿ  ಉದ್ದೇಶಿತ ಯೋಜನೆಗಳಿಗೆ  ವೆಚ್ಚವಾಗುವಂತೆ ನೋಡಿಕೊಳ್ಳಬೇಕು. ಅಂದರೆ ಮಾತ್ರ ನನಸಾದ ಕನಸು ಅಭಿವೃದ್ದಿ ಯಾಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಈ ತಿದ್ದುಪಡಿ ಕೇವಲ ಕಾಗದದಲ್ಲಿ ಉಳಿಯುವ ಸಾಧ್ಯತೆ ಇದೆ. ಆದ್ದರಿಂದ ಕೈಗೆ ಬಂದಿರುವ ತುತ್ತನ್ನು ಸಮರ್ಪಕವಾಗು  ಬಾಯಿಗೆ ಹಾಕಿಕೊಳ್ಳುವ ಕಾರ್ಯ ನಡೆಯಬೇಕು.

ಕೇಂದ್ರ ಸರಕಾರ ಈ ತಿದ್ದುಪಡಿ ವಿದೇಯಕವನ್ನು ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿಯೇ ಮಂಡಿಸಿ  ಅದು ಜಾರಿಗೆ ಬರುವಂತೆ ಕ್ರಮಗಳನ್ನು  ತೆಗೆದುಕೊಳ್ಳಬೇಕು ಆ ರೀತಿ ಆಗುವಂತೆ ಹೈದ್ರಾಬಾದ ಕರ್ನಾಟಕ ದವರೇ  ಆಗ  ಕೇಂದ್ರ ಕಾರ್ಮಿಕ ಸಚಿವ  ಮಲ್ಲಿಕಾರ್ಜುನ ಖರ್ಗೆ  ತಕ್ಷಣ  ಕ್ರಮವನ್ನು  ತೆಗೆದುಕೊಳ್ಳಬೇಕು.  ಅಂದರೆ ಮಾತ್ರ ಈ ವಿದೇಯಕದ  ಪ್ರಯೋಜನ  ಆ ಭಾಗದ ಜನರಿಗೆ ಆಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ  ಆಸೆ ತೋರಿಸಿ ಜನರನ್ನು ಕೇವಲ ಮರಳು ಮಾಡಿದಂತೆ ಆಗುತ್ತದೆ, ಆದ್ದರಿಂದ ಪ್ರಧಾನಿ ಮ್ ಮೋಹನಸಿಂಗ್ ಈ ವಿಷಯದಲ್ಲಿ ತಮ್ಮ ವೈಯಕ್ತಿಕ ಗಮನವನ್ನು ಹರಿಸಿ ಅದನ್ನು ಕೂಡಲೇ ಕಾರ್ಯ ರೂಪಕ್ಕೆ ಬರುವಂತೆ ಅಗತ್ಯ ಇರುವ  ಎಲ್ಲ ಕ್ರಮಗಳನ್ನು  ತೆಗೆದುಕೊಳ್ಳಬೇಕು ಅಂದರೆ ಮಾತ್ರ  ಇದರ ನಿಜವಾ ಪ್ರಯೋಜನ  ಆ ಭಾಗದ  ಜನರಿಗೆ  ಆಗಿ  ಆಪ್ರದೇಶದ  ಅಭಿವೃದ್ದಿ ಯಾಗಲು ಸಾಧ್ಯವಾಗುತ್ತದೆ.  ಕೇಂದ್ರ ಸರಕಾರ ತಡವಾಗಿಯಾದರೂ ಈ ಕ್ರಮಕ್ಕೆ  ಮುಂದಾಗಿರುವುದು  ಸಂತಸದ  ಸಂಗತಿಯಾಗಿದೆ.  ಆದ್ದರಿಂದ ಕರ್ನಾಟಕದ  ಜನರು ಕರ್ನಾಟಕ ಸರಕಾರ ಕೇಂದ್ರ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಆದಷ್ಟು ಬೇಗ  ಇದನ್ನು ಕಾರ್ಯ ರೂಪಕ್ಕೆ ತರಲು ಆಗ್ರಹವನ್ನು ಮಾಡಬೇಕಾಗಿರುವುದು ಅನಿವಾರ್ಯವಾದ ಸಂಗತಿಯಾಗಿದೆ.

loading...

LEAVE A REPLY

Please enter your comment!
Please enter your name here