ಸುದ್ದಿಗೊಂದು ಚುಚ್ಚು ಮಾತು

0
83

ದೇಶದ ಕ್ಷೀರ ಕ್ರಾಂತಿಯ ಹರಿಕಾರ  ಕುರಿಯನ್ ನಮ್ಮನ ಅಗಲಿದ್ದಾರೆ

– ಸುದ್ದಿ

ಅಮುಲ ಉತ್ಪಾದನೆ ಇರುವವರೆಗೆ ಕುರಿಯನ್ ನೆನಪು ಜೀವಂತ

ಮಾನಸಿಕ ಖಿನ್ನತೆಯಿಂದ ವರ್ಷಕ್ಕೆ 3000ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ

-ಸುದ್ದಿ

ಆತ್ಮಬಲ ಇಲ್ಲದರಿಂದ ಈ ರೀತಿ ಜನರು ದುರಂತ ಸಾವಿಗೆ ಶರಣಾಗುತ್ತಿದ್ದಾರೆ.

ಕೃಷ್ಣನ ಪ್ರೇರಣೆಯಂತೆ ಪ್ರತ್ಯೆಕ ರಥೋತ್ಸವವನ್ನು ಮಾಡಲಾಗಿದೆ ಎಂದು  ಶಿರೋರ ಮಠದ ಶ್ರೀಗಳು  ಹೆಳಿದ್ದಾರೆ.                                             – ಸುದ್ದಿ

ತಾವು ಮಾಡಿರುವ ತಪ್ಪುಗಳಿಗೆ ದೇವರ ಮೂಲಕ ಸಮರ್ಥನೆ ಮಾಡಿಕೊಳ್ಳುವ ಕಾರ್ಯಕ್ಕೆ ಇದು ಉದಾ ಆಗಿದೆ. 

ನ್ಯಾಯಾಕ್ಕಾಗಿ ಧ್ವನಿ ಎತ್ತಿದ ಸಾರಿಗೆ ನೌಕರರಿಗೆ  ಎತ್ತಗಂಡಿಯ ಶಿಕ್ಷೆ ವೀದೀಸಲಾಗಿದೆ                                                -ಸುದ್ದಿ

ಇದು ರಾಜಕೀಯ ತಂತ್ರಗಾರಿಕೆಯ ಒಂದು ಭಾಗವಾಗಿರುವದು ಕಾಣಬಹುದು.

ಮುರಗೇಶ ನಿರಾನಿಯ ಭಾಜಪಾ ರಾಜ್ಯಾಧ್ಯಕ್ಷರನ್ನಾಗಿ ಮಾಡುವ  ಯತ್ನ ನಡೆದಿದ್ದೆ                                                      – ಸುದ್ದಿ

ಯಡಿಯೊರಪ್ಪನವರ ದೃಷ್ಠಿ ಯಾವಾಗ ಯಾರ ಕಡೆಗೆ ಒರಳುತ್ತದೆ ಎಂಬುವದು ಹೇಳಲಿಕ್ಕೆ  ಆಗಲ್ಲ.

ವಕ್ಫ ಆಸ್ತಿ ನುಂಗಿದ್ದಾರೆ ಎಂದು 13 ಜನರ ಮೇಲೆ ದೂರು ದಾಖಲೆ

– ಸುದ್ದಿ

ದೇವರ ಆಸ್ತಿ ನುಂಗುವದು ಸುಲಭ ಎಂದು  ಈ ರೀತಿ   ಮಾಡಿರಬಹುದು.

ಅರವಿಂದ ಕೇಜ್ರಿವಾಲ ಅವರನ್ನು  ಹೊರಗೆ ಇಡಿ ಎಂದು ಅಣ್ಣಾ ಹಜಾರೆಯವರಿಗೆ ಆಪ್ತರು ಸಲಹೆ ಮಾಡಿದ್ದಾರೆ                                          – ಸುದ್ದಿ

ಕೇಜ್ರಿವಾಲ ಕ್ರೇಜಿಯಾಗಿದ್ದಾ ಎಂದು ಆಪ್ತರ ಭಾವನೆ ಯಾಗಿರಬಹುದು.

ಪ್ರಧಾನಿ ಹುದ್ದೆಗೆ ಸುಷ್ಮಾ ಅರ್ಹರೆಂದು ಎಂದು ಬಾಳ ಠಾಕ್ರೇ ಹೇಳಿದ್ದಾರೆ.

-ಸುದ್ದಿ

ಅದ್ವಾನಿ ಮತ್ತು ಮೋದಿಯನ್ನು  ಹಿಂದೆ ತಳ್ಳಲು ಠಾಕ್ರೇ ಈ ಬ್ಯಾಟಿಂಗ  ಮಾಡಿರಬಹುದು

ಪತಿಯು ಬೇಡ ವಿಚ್ಛೇಧನವು ಬೇಡ ಎನ್ನುತ್ತಿರುವ  ಪತ್ನಿಶಿರೋಮಣೀ

-ಸುದ್ದಿ

ಕಾಲಿಗೆ ಮುಳ್ಳು ಅಂಟಿಕೊಂಡತ್ತೆ ಪತಿಗೆ ಅಂಟಿಕೊಳ್ಳಬೇಕು ಎಂಬುವದು ಆಕೆಯ ಉದ್ದೇಶವಾಗಿರಬಹುದು.

ಸಾಹಿತ್ಯಿಗಳ ಒಳ ಜಗಳದಿಂದ ಬುದ್ದನ ಹಿಂಗಮಿರೆ ಅವರು ತೊಂದರೆ ಅನುಭವಿಸಿದರಿಂದ ಅವರ ನಿಧನದ ನಂತರ ಹೇಳಲಾಗುತ್ತದೆ.

-ಸುದ್ದಿ

ಸತ್ತ ಎಮ್ಮೆಗೆ ಸೇರು ತುಪ್ಪ ಎಂಬ ಗಾದೆಗೆ ಈ ಘಟನೆ ನಿದರ್ಶನ ಒದಗಿಸಿದೆ.

 

loading...

LEAVE A REPLY

Please enter your comment!
Please enter your name here